VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 13, 2010

ಬೆಂಗಳೂರು: ಯುವತಿ ನಾಪತ್ತೆ ಪ್ರಕರಣ ಸುಖಾಂತ್ಯ

ಬೆಂಗಳೂರು, ಮಾ೧೨: ನಾಪತ್ತೆಯಾದ ಯುವತಿಯನ್ನು ಪತ್ತೆ ಹಚ್ಚಿದ ಪೊಲೀಸರು ಹೈಕೋರ್ಟ್‌ಗೆ ಹಾಜರು ಪಡಿಸಿದರು. ತಮ್ಮ ಪಾಲಕರ ಜೊತೆ ಹೋಗಲು ಯುವತಿ ಒಪ್ಪಿದ್ದರಿಂದ ಅವರೊಂದಿಗೆ ಹೋಗಲು ಹೈಕೋರ್ಟ್ ಅನುಮತಿ ನೀಡಿತು. ಇದರಿಂದ ಯುವತಿಯೊಬ್ಬಳ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

ಮೈಸೂರು ಜಿಲ್ಲೆಯ ಕೆ.ಆರ್. ನಗರದ ನಿವಾಸಿ ಬಿ.ಎನ್.ಶಿವಾಜಿ ಗಣೇಶನ್ ತಮ್ಮ ಮಗಳು ರೂಪಾ (೧೬) (ಹೆಸರು ಬದಲಾಯಿಸಲಾಗಿದೆ) ನಾಪತ್ತೆಯಾಗಿದ್ದು, ಅವಳನ್ನು ಪತ್ತೆ ಹಚ್ಚುವಂತೆ ಪೊಲೀಸ್ ಇಲಾಖೆಗೆ ಸೂಚಿಸಬೇಕೆಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಆದೇಶದಂತೆ ಪೊಲೀಸರು ಇಂದು ಯುವತಿಯನ್ನು ಹೈಕೋರ್ಟ್‌ಗೆ ಹಾಜರು ಪಡಿಸಿದರು. ನ್ಯಾ. ವಿ.ಜಿ. ಸಭಾಯತ್ ನೇತೃತ್ವದ ವಿಭಾUಯ ಪೀಠ ಈ ಸಂಬಂಧ ವಿಚಾರಣೆ ನಡೆಸಿತು.

ಹಿನ್ನೆಲೆ: ಮಾರ್ಚ್ ೧, ೨೦೧೦ರಂದು ಬೆಳಗ್ಗೆ ೮:೩೦ಕ್ಕೆ ಕಾಲೇಜಿಗೆ ಹೋಗುತ್ತೇ ನೆಂದು ಹೇಳಿ ಹೋದ ರೂಪಾ ಮರಳಿ ಬಂದಿಲ್ಲ. ಈಕೆ ಕೆ.ಆರ್. ನಗರದ ಸರಕಾರಿ ಬಾಲಕಿಯರ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ.

ಮಗಳು ಮನೆಗೆ ವಾಪಸ್ ಬರದಿ ದ್ದಾಗ ಹುಡುಕಾಟ ನಡೆಸಿದ ಪಾಲಕರು ಪತ್ತೆಯಾಗದಿದ್ದಾಗ ಅದೇ ದಿನ ರೂಪಾಳ ಸಹೋದರ ಪವನ್ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಈ ಮಧ್ಯೆ ಅದೇ ಊರಿನಲ್ಲಿ ಮೊಬೈಲ್ ಮತ್ತು ಔಷಧಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಝೀಂ ಹಫಿಝ್(೨೨) ಎಂಬ ಯುವಕ ಬಲವಂತವಾಗಿ ತಮ್ಮ ಮಗಳನ್ನು ಅಪಹರಿಸಿದ್ದಾನೆ ಎಂದು ಮಾರ್ಚ್ ೪ ರಂದು ಶಿವಾಜಿ ಗಣೇಶನ್ ಮತ್ತೊಂದು ದೂರು ದಾಖಲಿಸುತ್ತಾರೆ.

ಮಗಳು ಪತ್ತೆಯಾಗದಿದ್ದಾಗ ಕೊನೆಗೆ ಮಾರ್ಚ್ ೮ರಂದು ಶಿವಾಜಿ ಗಣೇಶನ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುತ್ತಾರೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಯುತಿಯನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪ ಡಿಸುವಂತೆ ಪೊಲೀಸ್ ನೋಟಿಸ್ ಜಾರಿ ಮಾಡಿತ್ತು. ಮಾರ್ಚ್ ೧೦ ರಂದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಯುವಕ ಮತ್ತು ಯುವತಿಯನ್ನು ಪತ್ತೆ ಹಚ್ಚಿದ ಕೆ.ಆರ್. ನಗರ ಪೊಲೀಸರು ಇಬ್ಬರನ್ನು ತಮ್ಮ ವಶಕ್ಕೆ ತೆಗೆದುಕೊಂಡು ಯುವತಿಯನ್ನು ಇಂದು ಹೈಕೋರ್ಟ್‌ಗೆ ಹಾಜರು ಪಡಿಸಿದರು.

ಪೊಲೀಸ್ ವರದಿ: ತನ್ನನ್ನು ಪ್ರೇಮಿಸಲು ನಿರಾಕರಿಸಿದ ರೂಪಾಳನ್ನು, ಅಝೀಂ ಹಫಿಝ್ ಬಲವಂತ ಪಡಿಸಿದ. ಕೊನೆಗೆ ಆಕೆ ಒಪ್ಪದಿದ್ದಾಗ ಅಪಹರಿಸಿಕೊಂಡು ಹೋಗಿದ್ದಾನೆ. ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತ ದಿಂದ ಮದುವೆ ಮಾಡಲಾಗಿದೆ.

ಆಕೆಗೆ ತೀವ್ರ ಮಾನಸಿಕ ಹಿಂಸೆ ನೀಡಿದ್ದಾನೆ. ಬಿಳಿ ಹಾಳೆಯ ಮೇಲೆ ಸಹಿ ಮಾಡಿಸಿಕೊಳ್ಳಲಾಗಿದೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ. ಯುತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರೋಪಿ ಅಝೀಂ ಹಫಿಝ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ವರದಿ ಸಲ್ಲಿಸಿದರು.

No comments: