VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 3, 2010

ದುಬೈನಲ್ಲಿ ಅಪಘಾತ: ಹಿರಿಯ ಸಾಹಿತಿ ಪ್ರೊ. ಅನಂತರಾಮಯ್ಯ ಬಲಿ

ಮೈಸೂರು: ಮೈಸೂರಿನ ವಿಜಯನಗರದ ಅನಂತಗೀತ ವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ, ಗೋಕುಲಂ ಬಡಾವಣೆ 5 ನೇ ರಸ್ತೆ ನಿವಾಸಿಗಳ ಸಂಘದ ಅಧ್ಯಕ್ಷ ಹಾಗೂ ಮೈಸೂರು ವಿವಿ ಭೌತಶಾಸ್ತ್ರ ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಕೆ.ಎನ್. ಅನಂತರಾಮಯ್ಯ ಅವರು ದುಬೈನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೈಸೂರು ರೋಟರಿ ಉತ್ತರ ಸಂಸ್ಥೆಯ 18 ಸದಸ್ಯರು ಹಾಗೂ ತಮ್ಮ ಪತ್ನಿಯೊಂದಿಗೆ ದುಬೈಗೆ ಪ್ರವಾಸ ಕೈಗೊಂಡಿದ್ದ ಅವರು, ರಸ್ತೆ ದಾಟುತ್ತಿದ್ದಾಗ, ಟ್ಯಾಕ್ಸಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸಾವಿಗೀಡಾದರು.
ಮೃತರಿಗೆ ಪತ್ನಿ ಗೀತಾ, 3 ಪುತ್ರರು, ಸೊಸೆಯರು, ಮೊಮ್ಮಕ್ಕಳು ಇದ್ದಾರೆ.
ಅನಂತರಾಮಯ್ಯ ಅವರ ನಿಧನಕ್ಕೆ ನಗರಪಾಲಿಕೆ ಸದಸ್ಯ ಟಿ. ಗಿರೀಶ್‌ಬಾಬು, ಮಾಜಿ ಉಪ ಮೇಯರ್ ಸುರೇಶ್ ಬಾಬು, ವೇಣುಗೋಪಾಲ್, ಶಾಲೆ ಹಾಗೂ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

No comments: