ಇನ್ನೂ ಪತ್ತೆಯಾಗದ ಯುವತಿ

ಬಂಟ್ವಾಳ: ಎರಡು ತಿಂಗಳು ಹಿಂದೆ ಕಾಣೆ ಯಾಗಿದ್ದ ತರುಣಿಯೋ ರ್ವಳು ಇನ್ನೂ ಪತ್ತೆಯಾಗದೇ ಇದ್ದು, ಆತಂಕಕ್ಕೆ ಕಾರಣವಾ ಗಿದೆ.
ಜನವರಿ 21ರಂದು ಕಂಕನಾಡಿ ನರ್ಸಿಂಗ್ ಕಾಲೇಜಿಗೆ ಹೋದವಳು ಮತ್ತೆ ಮನೆಗೆ ವಾಪಾಸಾಗಿರಲಿಲ್ಲ.
ನಗರ ಠಾಣಾ ವ್ಯಾಪ್ತಿಯ ನಾವೂರು ಗ್ರಾಮದ ಆಲ್ಡೆ ನಿವಾಸಿ ರೋಬರ್ಲ್ಟ್ ರೋಡ್ರಿಗಸ್ ಎಂಬವರು ನಗರ ಠಾಣೆಗೆ ದೂರು ನೀಡಿ ದ್ದಾರೆ.
ಕಂಕನಾಡಿ ಫಾದರ್ ಮುಲ್ಲರ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಶರಲ್ ಪ್ರಿಯಾ ರೋಡ್ರಿಗಸ್ ಕಾಣೆಯಾದ ತರುಣಿ ಯಾಗಿದ್ದಾಳೆ. ಬಳಿಕ ಈಕೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಯುವತಿ ಪತ್ತೆಯಾಗಿರಲಿಲ್ಲ. ಇದರಿಂದಾಗಿ ಮನೆ ಮಂದಿ ಭೀತಿ ಗೀಡಾಗಿದ್ದಾರೆ.
ತುಳು, ಕನ್ನಡ, ಕೊಂಕಣಿ ಹಾಗೂ ಇಂಗ್ಲೀಷ್ ಮಾತನಾಡ ಬಲ್ಲ ಈಕೆ ಎಣ್ಣೆ ಕಪ್ಪು ಮೈ ಬಣ್ಣ ಹೊಂದಿದ್ದಾಳೆ.
ಈಕೆಯ ಸುಳಿವು ದೊರೆತಲ್ಲಿ ನಗರ ಠಾಣೆಯನ್ನು (08255 232111) ಸಂಪರ್ಕಿಬೇಕೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಜಯಕಿರಣ
No comments:
Post a Comment