VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 25, 2010

ಪುತ್ತೂರು: ಅಡಿಕೆ ಬೆಳೆಗಾರರ ಹೋರಾಟ: ಸಮಾಲೋಚನಾ ಸಭೆ


ಪುತ್ತೂರು, ಮಾ.೨೪: ಅಡಿಕೆಗೆ ಬೆಂಬಲ ಬೆಲೆ ದೊರಕಿಸುವ ಮೂಲಕ ರೈತನನ್ನು ಬದುಕಿಸುವ ಕಾರ್ಯಕ್ಕೆ ತಾವು ಮುಂದಾಗಿದ್ದು, ಪುತ್ತೂರಿನಲ್ಲಿ ನಡೆಯುವ ಹೋರಾಟಕ್ಕೆ ಪ್ರತಿಫಲ ದೊರೆಯದಿದ್ದರೆ ಮುಂದೆ ಮುಖ್ಯಮಂತ್ರಿಯ ನಿವಾಸದ ಎದುರು ಉಪವಾಸ ಮುಷ್ಕರ ಮಾಡುತ್ತೇವೆ ಎಂದು ಸ್ವಾಭಿಮಾನಿ ವೇದಿಕೆಯ ಅಧ್ಯಕ್ಷೆ ಶಕುಂತಳಾ ಶೆಟ್ಟಿ ಎಚ್ಚರಿಸಿದ್ದಾರೆ.

ಅವರು ಬುಧವಾರ ಮಹಾಲಿಂಗೇಶ್ವರ ದೇವಳದ ನಟರಾಜ ಸಭಾಭವನದಲ್ಲಿ ಮಾ. ೨೯ರಂದು ನಡೆಯುವ ರೈತರ ಬೃಹತ್ ಹಕ್ಕೊತ್ತಾಯ ಮಂಡನೆ ಮತ್ತು ಪ್ರತಿಭ ಟನೆಯ ಅಂಗವಾಗಿ ನಡೆದ ಸಮಲೋಚನಾ ಸಭೆಯಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದರು.

ಕಾಂಗ್ರೆಸ್‌ನ ತಾಲೂಕು ಸಮಿತಿಯ ಅಧ್ಯಕ್ಷ ಹೇಮನಾಥ ಶೆಟ್ಟಿ ಮಾತನಾಡಿ, ರೈತರ ಸಮಸ್ಯೆಗಳಿಗೆ ಸರಿಯಾದ ಸ್ಪಂದನೆ ದೊರೆಯ ಬೇಕಾಗಿದೆ. ಸರಕಾರವು ನೀಡುತ್ತಿರುವ ೭೫ ರೂ. ಬೆಂಬಲ ಬೆಲೆಯನ್ನು ತಕ್ಷಣ ನಿಲ್ಲಿಸಿ ೧೨೫ ರೂ. ಬೆಂಬಲ ಬೆಲೆ ಘೋಷಿಸಬೇಕು. ಮುಖ್ಯಮಂತ್ರಿ ನೀಡಿರುವ ಬೆಂಬಲ ಬೆಲೆ ರೈತನ ಕೈಗೆ ಸೇರುತ್ತಿಲ್ಲ. ಈ ವ್ಯವಸ್ಥೆ ಸರಿಯಾಗಿ ಆಗಬೇಕು ಎಂದು ಅವರು ತಿಳಿಸಿದರು.

ಈ ಪ್ರತಿಭಟನೆ ಕೇವಲ ಒಂದು ದಿನಕ್ಕೆ ಮೀಸಲಾಗಿದೆ ರೈತರಿಗೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸಬೇಕು. ಈ ಹೋರಾಟದಲ್ಲಿ ಪಕ್ಷಾತೀತವಾಗಿ ಎಲ್ಲಾ ರೈತರು ಪಾಲ್ಗೊಳ್ಳ ಬೇಕು ಎಂದು ಅವರು ತಿಳಿಸಿದರು.

ಸಮಿತಿ ರಚನೆ: ಮಾ೨೯ರಂದು ನಡೆಯ ಲಿರುವ ರೈತರ ಬೃಹತ್ ಹಕ್ಕೋತ್ತಾಯ ಮಂಡನೆಗಾಗಿ ಸಮಿತಿ ರಚಿಸಲಾಗಿದ್ದು ಅಧ್ಯಕ್ಷ ರಾಗಿ ಬನರಿ ಗೋಪಾಲಕೃಷ್ಣ ಭಟ್, ಉಪಧ್ಯಕ್ಷರಾಗಿ ಸಿ.ಪಿ.ಜಯರಾಮ, ವಾಸುದೇವ ರೈ, ಕೆ.ಪಿ.ಭಟ್, ಕಾರ್ಯದರ್ಶಿ ಯಾಗಿ ಲೋಕೇಶ್ ಹೆಗ್ಡೆ, ಅರುಣ್ ಕುಮಾರ್, ಕೋಶಾಧಿಕಾರಿಯಾಗಿ ಅಮ್ಮಣ್ಣ ರೈಯವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭ ದಲ್ಲಿ ಪ್ರತಿ ಗ್ರಾಮಗಳಿಗೂ ಪ್ರತಿನಿಧಿಗಳನ್ನು ಅರಿಸಲಾಯಿತು.

ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರಾದ ಬೊಂಡಾಲ ಜಗನ್ನಾಥ ಶೆಟ್ಟಿ, ಎಂ.ಎಸ್. ಮುಹಮ್ಮದ್, ಮುಹಮ್ಮದ್ ಅಲಿ, ಅನಿತಾ ಹೇಮನಾಥ ಶೆಟ್ಟಿ, ವೆಂಕಪ್ಪಗೌಡ, ಲ್ಯಾನ್ಸಿ ಮಸ್ಕರ‍್ಹೇನಸ್, ಬಾಲಕೃಷ್ಣ ಬೋರ್ಕರ್, ಅಣ್ಣಾ ವಿನಯಚಂದ್ರ, ರಾಮಚಂದ್ರ ಅಮಲ, ಎಂ.ಬಿ. ವಿಶ್ವನಾಥ, ಈಶ್ವರ ಭಟ್, ಅಬ್ದುಲ್ ಖಾದರ್, ಸುಬಾಷ್ ರೈ ಬೆಳ್ಳಪ್ಪಾಡಿ, ಲೋಕೇಶ್ ಎಂ, ಸರ್ವೋತ್ತಮ, ಪೂರ್ಣ ಚಂದ್ರ, ಸಂತೋಷ್ ರೈ ಇಳಾಂತಾಜೆ, ಸದಾನಂದ, ಮಾಯಿಲ ಶೆಟ್ಟಿ, ಎಚ್.ಡಿ.ವಸಂತ್, ಪ್ರಮೊದ್. ಕೆ.ಎಸ್., ಮೋನಪ್ಪಪೂಜಾರಿ, ಸಂಜೀವ ನಾಯಕ್ ಮತ್ತ ಸುದರ್ಶನ್ ಉಪಸ್ಥಿತರಿದ್ದರು.

No comments: