ಮಂಗಳೂರು, ಮಾ.೨೪: ಎಪ್ರಿಲ್ ೧ರಿಂದ ೨೫ರವರೆಗೆ ಜರಗಲಿರುವ ಉಳ್ಳಾಲ ಸಯ್ಯಿದ್ ಮದನಿ ತಂಙಳ್‌ರ ಉರೂಸ್ ಸಮಾರಂಭಕ್ಕೆ ಸಹಕಾರ ಕೋರುವ ಉದ್ದೇಶದ ವಿವಿಧ ಧರ್ಮಗಳ ಮುಖಂಡರ ಸಭೆಯು ಸಯ್ಯಿದ್ ಮದನಿ ದರ್ಗಾ ಮತ್ತು ಉರೂಸ್ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ. ಮೋನುರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
೫ ವರ್ಷಕ್ಕೊಮ್ಮೆ ನಡೆಯುವ ಉರೂಸ್ ಕಾರ್ಯಕ್ರಮಕ್ಕೆ ಈ ಹಿಂದಿನಂತೆಯೇ ಈ ಬಾರಿಯೂ ಸರ್ವ ರೀತಿಯ ಸಹಕಾರ ನೀಡುವಂತೆ ಅಧ್ಯಕ್ಷ ಹಾಜಿ ಯು.ಕೆ.ಮೋನು ಸರ್ವ ಧರ್ಮಗಳ ಮುಖಂಡರಲ್ಲಿ ಮನವಿ ಮಾಡಿದರು.
ಉರೂಸ್‌ಗೆ ಆಗಮಿಸುವ ಎಲ್ಲರಿಗೂ ಎಲ್ಲ ಸೌಕರ್ಯಗಳನ್ನು ದರ್ಗಾ ಸಮಿತಿ ಮಾಡಿದೆ ಎಂದು ಅಧ್ಯಕ್ಷರು ತಿಳಿಸಿದರು.
ಉಳ್ಳಾಲ ಉರೂಸ್ ಒಂದು ಧರ್ಮೀಯರಿಗೆ ಸೀಮಿತವಾಗಿರದೆ ಎಲ್ಲ ಧರ್ಮೀಯರಿಗೂ ಹೆಮ್ಮೆ ತರುವಂತಹ ಸಂಗತಿಯಾಗಿದೆ.
ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್ ಮತ್ತು ಮೊಗರ ಸಮಾಜದ ಮುಖಂಡ ಸದಾನಂದ ಬಂಗೇರಾ ಭರವಸೆ ನೀಡಿದರು.
ಉಳ್ಳಾಲ ಪುರಸಭೆಯ ಉಪಾಧ್ಯಕ್ಷ ದಿನೇಶ್ ರೈ, ಕೌನ್ಸಿಲರ್ ಭಗವಾನ್ ದಾಸ್ ಪುರಸಭೆ ವತಿಯಿಂದ ನೀರು ಮತ್ತು ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ಸಭೆಯಲ್ಲಿ ಉರೂಸ್ ಸಮಾರಂಭದ ನೋಡಲ್ ಅಧಿಕಾರಿ ರಾಮ ಶೆಟ್ಟಿಗಾರ್, ಚಂದ್ರಹಾಸ ಉಚ್ಚಿಲ್, ರಂದ್ರ ಮರೋಳಿ, ದಿನೇಶ್ ಉಳ್ಳಾಲ್, ಸೀತಾ ರಾಮ ಬಂಗೇರಾ, ಡೆನಿಸ್ ಡಿಸೋಜ, ಬಾಸಿಲ್ ಡಿಸೋಜ, ಮಯೂರ ಉಳ್ಳಾಲ್, ಪ್ರಮೋದ್ ಕುಮಾರ್ ಹಾಜರಿದ್ದು, ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಮೋನು ಇಸ್ಮಾಯೀಲ್, ಉರೂಸ್ ಕಾರ್ಯಕ್ರಮ ಮೇಲ್ವಿಚಾ ರಣಾ ಸದಸ್ಯರಾದ ಹಾಜಿ ಇಬ್ರಾಹೀಂ ಕಾಸಿಮ್, ಹನೀಫ್, ಅಹ್ಮದ್ ಬಾವಾ ಹಾಜಿ, ಮೊಹಿದಿನ್ ಹಾಜಿ, ಅಬ್ದುಲ್ ಖಾದಿರ್ ಹಾಜಿ, ಮುಹಮ್ಮದ್ ಹಾಜಿ, ಮುಹಮ್ಮದ್ ಮುಸ್ತಫಾ, ಅಹ್ಮದ್ ಕಬೀರ್, ಕುಂಞಿ ಮೋನು, ಯು.ಟಿ. ಇಲ್ಯಾಸ್, ಯು.ಎಂ.ಇಲ್ಯಾಸ್, ಆದಂ ಹಾಜಿ ಮತ್ತು ಉರೂಸ್ ಸುಪ್ರೀಂ ಸಮಿತಿಯ ೨೦ ಮಂದಿ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಧರ್ಮಗಳ ಮುಖಂಡರು ಉಪಸ್ಥಿತರಿದ್ದರು.
ದರ್ಗಾ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ರಶೀದ್ ಸ್ವಾಗತಿಸಿದರು. ಉರೂಸ್ ಪ್ರಚಾರ ಸಮಿತಿಯ ಸಂಚಾಲಕ ಹಾಜಿ ಎ.ಕೆ. ಮೊಹಿಯುದ್ದೀನ್ ವಂದಿಸಿದರು.
ಖಾಝಿ ನಿಗೂಢ ಮೃತ್ಯು ಪ್ರಕರಣ ಸಿಬಿಐಗೆ: ಶಾಸಕ ಖಾದರ್ ಸ್ವಾಗತ
ಮಂಗಳೂರು, ಮಾ.೨೪: ಮಂಗಳೂರು ಖಾಝಿ ಚೆಂಬರಿಕ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್ ಮೃತ್ಯು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವುದನ್ನು ಶಾಸಕ ಯು.ಟಿ.ಖಾದರ್ ಸ್ವಾಗತಿಸಿದ್ದಾರೆ.
ಖಾಝಿಯ ನಿಧನದ ಬಗ್ಗೆ ಇನ್ನೂ ಸಾರ್ವಜನಿಕ ವಲಯದಲ್ಲಿ ಗೊಂದಲಗಳಿವೆ. ಅದನ್ನು ನಿವಾರಿಸುವ ಹೊಣೆ ಸರಕಾರದ್ದಾಗಿದೆ. ಆ ಹಿನೆಲೆಯಲ್ಲಿ ಪ್ರಕರಣವನ್ನು ಸಿಬಿಐ ಸಂಸ್ಥೆಗೆ ವಹಿಸಿರುವುದು ಸ್ವಾಗತಾರ್ಹ ಎಂದು ಶಾಸಕ ಖಾದರ್ ತಿಳಿಸಿದ್ದಾರೆ.
ಎಸ್ಸೆಸೆಫ್: ಖಾಝಿ ಮೃತ್ಯು ಪ್ರಕರಣವನ್ನು ಸಿಬಿಐಗೆ ವಹಿಸಿರುವುದನ್ನು ಕರ್ನಾಟಕ ರಾಜ್ಯ ಎಸ್ಸೆಸೆಫ್ ಸ್ವಾಗತಿಸಿದೆ. ಸಿಬಿಐ ತನಿಖೆಯ ನಂತರವಾದರೂ ಸತ್ಯ ಬಹಿರಂಗಗೊಳ್ಳಲಿ ಎಂದು ಸಂಘಟನೆಯ ರಾಜ್ಯ ಮುಖಂಡರು ಹೇಳಿದ್ದಾರೆ.
ಸುನ್ನಿ ಜಂಇಯತುಲ್ ಉಲಮಾ ಅಧ್ಯಕ್ಷ ಬೇಕಲ್ ಇಬ್ರಾಹೀಂ ಮುಸ್ಲಿಯಾರ್, ಕಾರ್ಯದರ್ಶಿ ವಳವೂರು ಮುಹಮ್ಮದ್ ಸಅದಿ, ಸುನ್ನಿ ಯುವಜನ ಸಂಘದ ರಾಜ್ಯ ಅಧ್ಯಕ್ಷ ಹುಸೈನ್ ಸಅದಿ, ಕಾರ್ಯದರ್ಶಿ ಜಿ.ಎಂ.ಕಾಮಿಲ್ ಸಖಾಫಿ, ಎಸ್ಸೆಸೆಫ್ ರಾಜ್ಯಾಧ್ಯಕ್ಷ ಶಾಫಿ ಸಅದಿ, ಕಾರ್ಯದರ್ಶಿ ಕೆ.ಎಂ.ಸಿದ್ದೀಕ್ ಮೋಂಟಗೋಳಿ, ವಾಯ್ಸ್ ಆಫ್ ಕುರ್‌ಆನ್ ಮಂಗಳೂರು ಇದರ ಅಧ್ಯಕ್ಷ ಅಬೂಸುಫ್ಯಾನ್ ಮದನಿ ಪ್ರಕರಣ ಸಿಬಿಐಗೆ ವಹಿಸಿರುವುದನ್ನು ಸ್ವಾಗತಿಸಿದ್ದಾರೆ.
Subscribe to:
Post Comments (Atom)
No comments:
Post a Comment