



ಬೆಂಗಳೂರು, ಮಾ. 27 : ಮಂಗಳೂರು ಉಡುಪಿ ಮಣಿಪಾಲ ನಡುವೆ ರಾಜ್ಯ ರಸ್ತೆ ಸಾರಿಗೆ ನಿಗಮವು ಮಾರ್ಚ್ 27ರಿಂದ ಹವಾನಿಯಂತ್ರಿತ ವೋಲ್ವೋ ಬಸ್ ಸಂಚಾರ ಆರಂಭಿಸಲಿದೆ.
ಆರಂಭದಲ್ಲಿ ಗಂಟೆಗೆ ಒಂದರಂತೆ ಕಾರ್ಯಾಚರಣೆ ಮಾಡಲಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಕಾರ್ಯಾಚರಣೆ ಹೆಚ್ಚಿಸಲಾಗುವುದು. ಇದಲ್ಲದೇ ಮಂಗಳೂರು ಕಾಸರಗೋಡು ಹವಾನಿಯಂತ್ರಿತ ಸಾರಿಗೆ ಸೇವೆ ಆರಂಭಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ನಿಗಮ ತಿಳಿಸಿದೆ. ಮಂಗಳೂರು-ಸುರತ್ಕಲ್-ಮುಲ್ಕಿ-ಪಡುಬಿದ್ರಿ-ಉಡುಪಿ ಮಾರ್ಗದಲ್ಲಿ 10 ರಿಂದ 60 ರುಪಾಯಿ ವರಗೆ ದರ ನಿಗದಿ ಮಾಡಲಾಗಿದೆ.
No comments:
Post a Comment