
ನವದೆಹಲಿ, ಮಾ. 27 : ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಅಂಜು ಗುಪ್ತಾ ಅವರು ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ವಿರುದ್ದ ಸಾಕ್ಷ್ಯ ನುಡಿದಿರುವ ಬೆನ್ನಲ್ಲೇ ಮುಸ್ಲಿಂ ಸಂಘಟನೆಗಳು ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಅಡ್ವಾಣಿ ಅವರು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದು ಸೂಕ್ತ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಅಡ್ವಾಣಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ಆದರೆ, ಅಡ್ವಾಣಿ ಅವರು ರಾಜಕೀಯ ನಿವೃತ್ತಿ ಘೋಷಿಸುವುದಕ್ಕೆ ಇದು ಸಕಾಲ ಎಂದು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಒತ್ತಾಯಿಸಿದ್ದಾರೆ. ಅಡ್ವಾಣಿ ಮತ್ತು ಸಂಘ ಪರಿವಾರದ ಮುಖಂಡರ ವಿರುದ್ಧ ಮೊಟ್ಟಮೊದಲ ನೇರ ಪ್ರತ್ಯಕ್ಷ ಸಾಕ್ಷಿ ಇದಾಗಿದ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಾಂಘ್ವಿ ಹೇಳಿದ್ದಾರೆ.
ನಿಜವಾಗಿಯೂ ಅಡ್ವಾಣಿ ತಪ್ಪಿತಸ್ಥರು ಎಂಬ ನಿಲುವನ್ನು ಸಾಕ್ಷ್ಯ ಹೇಳಿಕೆಯನ್ನು ಪುಷ್ಟೀಕರಿಸಲಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಜಾಫರ್ ಯಾಬ್ ಜಿಲಾನಿ ಹೇಳಿದ್ದಾರೆ. ಬಾಬ್ರಿ ಧ್ವಂಸಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಅಡ್ವಾಣಿ ವಿರುದ್ಧ ಐಪಿಎಸ್ ಅಧಿಕಾರಿ ಅಂಜಿ ಗುಪ್ತಾ ಸಾಕ್ಷ್ಯಾ ನುಡಿದಿದ್ದರು.
No comments:
Post a Comment