‘ಸರ್ಕಾರವನ್ನು ಮುನ್ನಡೆಸುತ್ತಿ ರುವವರ ಅನುಭವದ ಕೊರತೆಯ ಪರಿಣಾಮವಾಗಿ ಇಡೀ ರಾಜ್ಯ ಕತ್ತಲಲ್ಲಿ ಮುಳುಗಿದೆ. ನಿಮಗೆ ಸರ್ಮಪಕವಾಗಿ ಆಡಳಿತ ನಿರ್ವಹಿಸಲು ಸಾಧ್ಯವಾಗ ದಿದ್ದರೆ ಅಧಿಕಾರದಿಂದ ಕೆಳಗಿಳಿಯಬೇಕು’ .
ಬೆಂಗಳೂರು: ‘ವಿದ್ಯುತ್ ಕೊರತೆಯ ಸಮಸ್ಯೆಗೆ ಪರಿಹಾರ ದೊರಕಿಸಲು ಸಾಧ್ಯವಾಗದೇ ಇದ್ದರೆ ಅಧಿಕಾರ ಬಿಟ್ಟು ನಡೆಯಿರಿ’ ಎಂದು ವಿಧಾನ ಪರಿಷತ್‌ನ ವಿರೋಧಪಕ್ಷದ ನಾಯಕಿ ಮೋಟಮ್ಮ ಸರ್ಕಾರವನ್ನು ಒತ್ತಾಯಿಸಿದರು.
ಮಂಗಳವಾರ ಪರಿಷತ್‌ನಲ್ಲಿ ವಿದ್ಯುತ್ ಕ್ಷಾಮ ಕುರಿತು ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದ ಅವರು, ‘ಸರ್ಕಾರವನ್ನು ಮುನ್ನಡೆಸುತ್ತಿ ರುವವರ ಅನುಭವದ ಕೊರತೆಯ ಪರಿಣಾಮವಾಗಿ ಇಡೀ ರಾಜ್ಯ ಕತ್ತಲಲ್ಲಿ ಮುಳುಗಿದೆ. ನಿಮಗೆ ಸರ್ಮಪಕವಾಗಿ ಆಡಳಿತ ನಿರ್ವಹಿಸಲು ಸಾಧ್ಯವಾಗ ದಿದ್ದರೆ ಅಧಿಕಾರದಿಂದ ಕೆಳಗಿಳಿಯಬೇಕು’ ಎಂದರು.
ಹಿಂದೆ ಹಲವು ಬಾರಿ ರಾಜ್ಯವು ಭೀಕರ ಬರಗಾಲವನ್ನು ಎದುರಿಸಿದೆ. ಅಂತಹ ಯಾವುದೇ ಸಂದರ್ಭದಲ್ಲೂ ವಿದ್ಯುತ್ ಕೊರತೆ ಈ ಪ್ರಮಾಣದಲ್ಲಿ ಉಲ್ಬಣಗೊಂಡಿರಲಿಲ್ಲ. ಈಗ ಗ್ರಾಮೀಣ ಪ್ರದೇಶಗಳ ರೈತರು ಬೆಳೆ ಮತ್ತು ಬದುಕು ಎರಡನ್ನೂ ಕಳೆದು ಕೊಂಡು, ಅಪಾಯಕ್ಕೆ ಸಿಲುಕಿ ್ದದಾರೆ. ಸರ್ಕಾರವೇ ಕಳೆದುಹೋಗಿದೆ ಎಂದು ಟೀಕಿಸಿದರು.
‘ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರು ಈಗ ತಾವು ಇಂಧನ ಖಾತೆಯನ್ನು ವಹಿಸಿಕೊಂಡ ಬಳಿಕ ವಿದ್ಯುತ್ ಖರೀದಿಗೆ ಹಣ ಒದಗಿಸುವ ಮಾತನ್ನಾಡುತ್ತಿದ್ದಾರೆ. ಸಮಸ್ಯೆಯ ಅರಿವಿದ್ದರೂ ಮುಂಚಿತ ವಾಗಿ ಅಂತಹ ಕ್ರಮವನ್ನು ಕೈಗೊಳ್ಳಲು ಯಾರು ಅಡ್ಡಿಯಾಗಿದ್ದರು ಎಂಬುದನ್ನು ಜನತೆಯ ಮುಂದಿಡಬೇಕು’ ಎಂದು ಆಗ್ರಹಿಸಿದರು.
ಶೆಡ್‌ಗಳಿಗೆ ಬೆಳಕು ನೀಡಿ: ‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ತಾತ್ಕಾಲಿಕ ವಸತಿ ಕಲ್ಪಿಸಲು ನಿರ್ಮಿಸಿರುವ ಶೆಡ್‌ಗಳಿಗೆ ಪೂರೈಸುವ ಕೆಲಸಕ್ಕೆ ಸರ್ಕಾರ ಆದ್ಯತೆ ನೀಡಬೇಕು.
Mar 3, 2010
Subscribe to:
Post Comments (Atom)
No comments:
Post a Comment