ಭಾರತದ ಹಡಗಿಗೆ ಯುಎಇ ತಡೆ
ಕುರಿ, ಮೇಕೆಗೆ ಕಾಲು-ಬಾಯಿ ರೋಗ
ಯುಎಇಗೆ ಕುರಿ ಹಾಗೂ ಮೇಕೆಗಳನ್ನು ಸಾಗಿಸುತ್ತಿದ್ದ ಭಾರತದ ಸರಕು ಸಾಗಣೆ ಹಡಗಿನಲ್ಲಿ ಕೆಲವು ಕುರಿಗಳು ಕಾಲು ಬಾಯಿ ರೋಗಕ್ಕೆ ತುತ್ತಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ, ದೇಶದೊಳಕ್ಕೆ ಆ ಹಡಗು ಪ್ರವೇಶಿಸುವುದನ್ನು ಯುಎಇ ತಡೆಹಿಡಿದಿದೆ.
ದುಬೈ (ಪಿಟಿಐ): ಸುಮಾರು 950 ಕುರಿ ಹಾಗೂ ಮೇಕೆಗಳಿದ್ದ ಹಡಗನ್ನು ಸೋಮವಾರ ರಾತ್ರಿ ರಾಸ್ ಅಲ್ ಖೈಮಾಹ್ ಮೂಲಕ ಯುಎಇ ಪ್ರವೇಶಿಸಲು ಹಡಗು ಯತ್ನಿಸಿದಾಗ, ಸಂಪರ್ಕ ತಡೆ ಹಾಗೂ ಕಸ್ಟಮ್ಸ್ ಅಧಿಕಾರಿಗಳು ತಡೆಯೊಡ್ಡಿ ದರು ಎಂದು ಸರ್ಕಾರಿ ಸ್ವಾಮ್ಯದ ಡಬ್ಲ್ಯು ಎಎಂ ಸುದ್ದಿಸಂಸ್ಥೆ ವರದಿ ಮಾಡಿದೆ.ಕುವೈತ್‌ನಲ್ಲಿರುವ ಪಶುವೈದ್ಯಕೀಯ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಸಂಪರ್ಕ ತಡೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಈ ಹಡಗನ್ನು ತಡೆದರು.
ಕಾಲು ಬಾಯಿ ರೋಗ ಸೋಂಕು ಸ್ಥಳೀಯ ಸಾಕು ಪ್ರಾಣಿಗಳಿಗೂ ಹರಡುವ ಭಯದಿಂದ ಈ ಮೊದಲು ಕುವೈತ್‌ನಲ್ಲೂ ಈ ಹಡಗಿನಿಂದ ಕುರಿ ಹಾಗೂ ಮೇಕೆಗಳನ್ನು ಇಳಿಸಲು ಅನುಮತಿ ನಿರಾಕರಿಸಲಾಗಿತ್ತು.
ಕೂಡಲೇ ಕಾರ್ಯಪ್ರವೃತ್ತವಾದ ಯುಎಇಯ ಪರಿಸರ ಹಾಗೂ ಜಲ ಸಂಪನ್ಮೂಲ ಸಚಿವಾಲಯ ಆ ಹಡ ಗನ್ನು ದೇಶದ ಗಡಿಯಿಂದ ಹೊರಗಡೆ ಕಳುಹಿಸುವಂತೆ ಆದೇಶ ಹೊರಡಿಸಿದೆ.
ಕುವೈತ್: ಸ್ಥಳೀಯರಿಗೆ ಉದ್ಯೋಗ ಚಿಂತನೆ
ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋ ಗಕ್ಕೆ ವಿದೇಶಿಯರನ್ನು ನೇಮಿ ಸಿಕೊಳ್ಳುವುದಕ್ಕೆ ಬದಲಾಗಿ ಸ್ಥಳೀ ಯ ರಿಗೆ ಉದ್ಯೋಗ ಕಲ್ಪಿಸಲು ಕುವೈತ್ ಚಿಂತನೆ ನಡೆಸಿದೆ.
ದುಬೈ, (ಪಿಟಿಐ) : ತೈಲ ಉತ್ಪಾದಿಸುವ ಪ್ರಮುಖ ದೇಶ ವಾದ ಕುವೈತ್‌ಗೆ ಉದ್ಯೋಗ ಹುಡುಕಿ ಕೊಂಡು ಬಹಳ ಮಂದಿ ಭಾರತೀ ಯರು ಹೋಗುತ್ತಿದ್ದರು. ಆದರೆ, ಸರ್ಕಾರಿ ಸಂಸ್ಥೆ ಗಳಲ್ಲಿ ವಿದೇ ಶಿ ಯರ ಬದಲಿಗೆ ಸ್ಥಳೀ ಯರನ್ನು ನೇಮಿಸಿಕೊಳ್ಳುವ ಬಗ್ಗೆ ಆಲೋ ಚನೆ ನಡೆಸಿದೆ ಎಂದು ಮಾಧ್ಯಮ ವರದಿ ಮಾಡಿದೆ.
ದೇಶದಲ್ಲಿ ಹಲವು ದಶಕಗಳಿಂದ ನಿರುದ್ಯೋಗ ಸಮಸ್ಯೆ ತೀವ್ರವಾಗಿರುವ ಹಿನ್ನೆ ಲೆಯಲ್ಲಿ ಹೊರಗಿನವರನ್ನು ನೇಮಕ ಮಾಡಿಕೊಳ್ಳುವುದನ್ನು ಸ್ಥಗಿತ ಗೊಳಿಸು ವತ್ತ ಚಿಂತನೆಗೆ ಹಚ್ಚಿದೆ ಎಂದು ಹೇಳಿದೆ. ದೇಶದಲ್ಲಿ ಕಾರ್ಯನಿರ್ವ ಹಿಸುತ್ತಿ ರುವ 60,000 ಮಂದಿ ವಿದೇಶಿ ಯ ರನ್ನು ಬದಲಿಸಿ ಸ್ಥಳೀ ಯರಿಗೆ ಅವ ಕಾಶ ಕಲ್ಪಿ ಸುವ ಸಲುವಾಗಿ ಕಾಯ್ದೆಗೆ ತಿದ್ದು ಪಡಿ ತರಬೇಕು ಎಂದು ಕುವೈತ್‌ನ ಸಂಸ ದೀಯ ಮಾಹಿತಿ ಮತ್ತು ಸಂಶೋಧನಾ ಸಮಿತಿ ಕಳೆದ ತಿಂಗಳು ಸಲ್ಲಿಸಿದ ವರದಿ ಯಲ್ಲಿ ಸಲಹೆ ಮಾಡಿತ್ತು.ಕೊಲ್ಲಿ ರಾಷ್ಟ್ರಗಳಲ್ಲಿ ಸ್ಥಳೀಯರಿಗೆ ಉದ್ಯೋಗ ದೊರೆಯದಿರುವುದರಿಂದ ಸಾಮಾ ಜಿಕ ಮತ್ತು ಭದ್ರತಾ ಸಮಸ್ಯೆಗಳು ಕಾಣಿಸಿಕೊಂಡಿವೆ. ಗಲ್ಫ್ ಕೋಆಪರೇಷನ್ ಕೌನ್ಸಿಲ್ (ಜಿಸಿಸಿ) ರಾಷ್ಟ್ರಗಳಂತೆಯೇ ಕುವೈತ್ ಕೂಡ ಹಲವಾರು ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಇತ್ತೀಚೆಗೆ ಮುಂದಾಗಿದೆ. ಕೊಲ್ಲಿ ರಾಷ್ಟ್ರಗಳು ಕೂಡ ಕ್ರಮೇಣ ವಿದೇಶಿಯರನ್ನು ನಿಯಂತ್ರಿಸಲು ನೂತನ ಕಾಯ್ದೆ ಮೊರೆ ಹೋಗಿವೆ.
ಚೆಂಡು ಭಾರತದ ಅಂಗಳದಲ್ಲಿ - ಪಾಕ್
ಇಸ್ಲಾಮಾಬಾದ್, (ಪಿಟಿಐ) : ‘ಕಾಶ್ಮೀರ ಸಮಸ್ಯೆ ಸೇರಿದಂತೆ ಎಲ್ಲ ವಿವಾದಗಳ ಇತ್ಯರ್ಥ ವಿಚಾರದಲ್ಲಿ ಚರ್ಚೆ ಆರಂಭಿ ಸು ವುದು ಅಥವಾ ಬಿಡುವುದು ಭಾರತಕ್ಕೆ ಸೇರಿದ ವಿಷಯ. ಈಗ ಚೆಂಡು ಅದರ ಅಂಗ ಳ ದಲ್ಲಿದೆ’ ಎಂದು ಪಾಕ್ ಮಂಗಳವಾರ ಹೇಳಿದೆ.
ಕಾಶ್ಮೀರದ ಮೇಲಿನ ಸಂಸ ದೀಯ ಸಮಿತಿ ಸದಸ್ಯರನ್ನು ಉದ್ದೇಶಿಸಿ ಮಾತ ನಾಡಿದ ವಿದೇಶಾಂಗ ಸಚಿವ ಷಾ ಮಹ ಮೂದ್ ಖುರೇಷಿ ಈ ಹೇಳಿಕೆ ನೀಡಿದರು.
ಉಗ್ರರನ್ನು ಹತ್ತಿಕ್ಕಲು ಪಾಕ್‌ಗೆ ಅಮೆರಿಕ ನೆರವು
ವಾಷಿಂಗ್ಟನ್, (ಐಎಎನ್‌ಎಸ್) : ಉಗ್ರರನ್ನು ಹತ್ತಿಕ್ಕಲು ಮುಂದಾಗಿರುವ ಪಾಕಿಸ್ತಾನಕ್ಕೆ ನೆರವಾಗಲು ಅಮೆರಿಕವು ಎಂಟು ಯೋಧರನ್ನು ಸಾಗಿಸುವ ವಾಹನ, ಕಣ್ಗಾವಲು ಸಾಧನವನ್ನು ಒದಗಿಸಿದೆ.
ರಾತ್ರಿ ವೇಳೆಯಲ್ಲೂ ದೂರದಿಂದಲೇ ಉಗ್ರರ ಚಲನವಲನವನ್ನು ಗಮನಿಸಲು ಅನುವಾಗುವಂತಹ ಬೈನಾಕ್ಯುಲರುಗಳನ್ನು ಸಹ ಅಮೆರಿಕ ಪಾಕಿಸ್ತಾನಕ್ಕೆ ಪೂರೈಕೆ ಮಾಡಿದೆ. ಇವನ್ನು ವಾಯವ್ಯ ಪ್ರಾಂತ್ಯದ ಪೊಲೀಸ್ ಇನ್‌ಸ್ಪೆಕ್ಟರ್ ಜನರಲ್ ಮಲಿಕ್ ನವೀದ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಒಬಾಮ ಸಲಹಾ ಸಮಿತಿಗೆ ಭಾರತೀಯ ನೇಮಕ
ವಾಷಿಂಗ್ಟನ್, (ಪಿಟಿಐ) : ಕಲೆಗೆ ಸಂಬಂಧಿಸಿದ ಅಮೆರಿಕ ಅಧ್ಯಕ್ಷರ ಸಲಹಾ ಸಮಿತಿಗೆ ಭಾರತೀಯ ಅಮೆರಿಕ ಪ್ರಜೆ ಆಮಿ ಕೆ.ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಪ್ರತಿಷ್ಠಿತ ಜಾನ್ ಎಫ್.ಕೆನಡಿ ಕಲಾ ಕೇಂದ್ರದ ಸಲಹಾ ಸಮಿತಿಗೆ ಸಿಂಗ್ ಅವರನ್ನು ಅಧ್ಯಕ್ಷ ಬರಾಕ್ ಒಬಾಮ ನೇಮಕ ಮಾಡಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.
ದಕ್ಷಿಣ ಕೊರಿಯಾ ಯುದ್ಧ ವಿಮಾನ ಅಪಘಾತ
ಸೋಲ್ (ಎಪಿ) : ತರಬೇತಿಯಲ್ಲಿ ನಿರತವಾದ್ದ ದಕ್ಷಿಣ ಕೊರಿಯಾ ವಾಯು ಪಡೆಯ ಎರಡು ಜೆಟ್ ವಿಮಾನಗಳು ಪರ್ವತಕ್ಕೆ ಡಿಕ್ಕಿ ಹೊಡೆದಿವೆ. ಈ ವಿಮಾನಗಳಲ್ಲಿದ್ದ ಮೂವರು ಪೈಲಟ್‌ಗಳ ಬಗ್ಗೆ ತಕ್ಷಣವೇ ಯಾವುದೇ ಮಾಹಿತಿ ದೊರೆತಿಲ್ಲ.
ಸೋಲ್‌ನಿಂದ 110 ಮೈಲಿ ದೂರವಿರುವ ಈ ಪರ್ವತಕ್ಕೆ ಎಫ್-5 ವಿಮಾನವು ಡಿಕ್ಕಿ ಹೊಡೆದಿವೆ. ಅಪಘಾತಕ್ಕೆ ನಿಖರವಾದ ಕಾರಣವೂ ತಿಳಿದುಬಂದಿಲ್ಲ ಎಂದು ವಾಯುಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Mar 3, 2010
Subscribe to:
Post Comments (Atom)
No comments:
Post a Comment