VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 15, 2010

ಉಡುಪಿ: ಮಗಳ ಮೇಲೆಯೇ ಅತ್ಯಾಚಾರ ಗೂಸಾ ತಿಂದ ಅಪ್ಪ!

ಸ್ವಂತ ಮಗಳ ಮೇಲೆಯೇ ಅತ್ಯಾಚಾರ ನಡೆಸಿದ ಅಪ್ಪನಿಗೆ ಸಾರ್ವಜನಿಕರೇ ಹಿಗ್ಗಾಮುಗ್ಗಾ ಥಳಿಸಿ ಗೂಸಾ ನೀಡಿದ ಘಟನೆ ಇಲ್ಲಿನ ಕಡೆಕಾರು ಗ್ರಾಮದಲ್ಲಿ ಸೋಮವಾರ ನಡೆದಿದೆ.ತನ್ನ ಮಗಳ ಮೇಲೆಯೇ ಕಳೆದ ಒಂದು ವರ್ಷದಿಂದ ಬಲವಂತದಿಂದ ಹೆದರಿಸಿ ಅತ್ಯಾಚಾರ ನಡೆಸುತ್ತಿದ್ದ ಗಂಡನ ನಡವಳಿಕೆಯ ಮಾಹಿತಿ ತಿಳಿದ ಪತ್ನಿಯೇ ಸಾರ್ವಜನಿಕರಿಗೆ ವಿಷಯ ತಿಳಿಸಿದ ಪರಿಣಾಮ, ಸಿಟ್ಟಿಗೆದ್ದ ಗುಂಪು ಸಾರ್ವಜನಿಕವಾಗಿಯೇ ಶೇಷಪ್ಪನಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು.ಕಡೆಕಾರು ಕಿದಿಯೂರು ಗ್ರಾಮದ ಶೇಷಪ್ಪ ಎಂಬಾತ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ ವಿಷಯವನ್ನು ಬೇರೆಯವರಿಗೆ ಹೇಳಿದರೆ ಜಾಗೃತೆ ಎಂಬುದಾಗಿ ಬೆದರಿಕೆ ಒಡ್ಡಿದ್ದ. ಕೊನೆಗೂ ತಾಯಿಯೇ ಸಂಶಯಗೊಂಡು ಮಗಳಲ್ಲಿ ವಿಚಾರಿಸಿದಾಗ ವಿಷಯ ಬಹಿರಂಗಗೊಂಡಿತ್ತು. ಇದರಿಂದ ಸಿಟ್ಟುಗೊಂಡ ಪತ್ನಿ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದಳು.ಶೇಷಪ್ಪನ ಕಾಮುಕತನಕ್ಕೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸುತ್ತಿದ್ದಾಗಲೇ ಉಡುಪಿ ನಗರ ಕ್ರೈಂ ಬ್ರ್ಯಾಂಚ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೀಗ ಶೇಷಪ್ಪನ ವಿರುದ್ಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

No comments: