VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 28, 2010

ಗುಪ್ತಚರ ವರದಿ: ಬಿಬಿಎಂಪಿ ಚುನಾವಣೆ ಸ್ಪಷ್ಟ ಬಹುಮತವಿಲ್ಲ

ಗುಪ್ತಚರ ವರದಿ: ಬಿಬಿಎಂಪಿ ಚುನಾವಣೆ ಸ್ಪಷ್ಟ ಬಹುಮತವಿಲ್ಲ
ಬೆಂಗಳೂರು: ಸರ್ಕಾರದ ವಿರುದ್ಧದ ಜನಾಭಿಪ್ರಾಯ ಮತಗಳಾಗಿ ಪರಿವರ್ತನೆಯಾದರೆ ಪ್ರಸಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ. ಕಳೆದ ಮೂರುವರೆ ವರ್ಷಗಳ ನಂತರ ಪಾಲಿಕೆ 198 ವಾರ್ಡ್ಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವ ಮುನ್ಸೂಚನೆ ಸಿಕ್ಕಿಲ್ಲ. ರಾಜ್ಯ ಗುಪ್ತಚರ ವಿಭಾಗ ನೀಡಿ ರುವ ವರದಿಯಂತೆ ಹೆಚ್ಚು ಮತದಾನ ವಾದಲ್ಲಿ, ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕುವ ಸ್ಥಿತಿ ಇದೆ ಎಂದು ತಿಳಿಸಿದೆ.
ಶೇಕಡಾವಾರು ಮತದಾನ ಹೆಚ್ಚಾದಲ್ಲಿ ಬಿಜೆಪಿಗೆ 70 ಸ್ಥಾನಗಳಿಗೂ ಮೀರುವ ಸಾಧ್ಯತೆ ಇಲ್ಲ. ಇದರ ಲಾಭ ಕಾಂಗ್ರೆಸ್ಗೆ ದಕ್ಕುವ ಸಾಧ್ಯತೆಯಿದೆ ಎಂದು ಹೇಳಿದೆ.
ಈ ವರದಿಯ ಹಿನ್ನೆಲೆಯಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಮೊನ್ನೆ ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣದಲ್ಲಿ ನಗರದ ಶಾಸಕರು ಹಾಗೂ ಸಚಿವರ ತುರ್ತು ಸಭೆ ಕರೆದು ಸಮಾಲೋಚನೆ ನಡೆಸಿದರು.
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಮುಖ್ಯಮಂತ್ರಿ ಅವರು, ತುರ್ತು ಪತ್ರಿಕಾಗೋಷ್ಠಿ ಕರೆದು ಕೆಲವು ಯೋಜನೆಗಳನ್ನು ಪ್ರಕಟಿಸಿ ಮತದಾರರನ್ನು ಆಕರ್ಷಿಸುವ ಪ್ರಯತ್ನ ಮಾಡಿದ್ದಾರೆ. ನಂತರ ಪಕ್ಷದ ಎಲ್ಲ ಶಾಸಕರು ಮತ್ತು ಮುಖಂಡರಿಗೂ ಅಧಿಕಾರಕ್ಕೆ ಬರಲು ಕೊರತೆ ಉಂಟಾ ಗುವ ಸ್ಥಾನ ಭರ್ತಿ ಮಾಡಿಕೊಳ್ಳಲು ಕೆಲವು ರಾಜಕೀಯ ಮಾರ್ಗೋಪಾ ಯಗಳನ್ನು ನೀಡಿದ್ದಾರೆ ಎಂದು ಉನ್ನತ ಮೂಲ ಗಳು ತಿಳಿಸಿವೆ. ಇಷ್ಟಾದರೂ ಕಾಂಗ್ರೆಸ್-ಜೆಡಿಎಸ್ಗಿಂತ ಬಿಜೆಪಿಯೇ ಹೆಚ್ಚು ಸ್ಥಾನಗಳಿಸಲಿದೆ.
ಒಂದು ವೇಳೆ ಮತದಾನ ಹೆಚ್ಚಾ ದರೆ ಕಾಂಗ್ರೆಸ್ಗೆ ಅನುಕೂಲವಾಗುವುದು ಎಂಬ ವರದಿ ನೀಡಲಾಗಿದೆ. ಗಣ ನೀಯ ಪ್ರಮಾಣದಲ್ಲಿ ಪಕ್ಷೇತರರು ಚುನಾಯಿತವಾಗಲಿದ್ದು, ಮೇಯರ್ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸ ಲಿದ್ದಾರೆ ಎಂಬ ಸಂಗತಿ ವರದಿಯಲ್ಲಿದೆ.
ವಾಡಿಕೆಯ ಮತದಾನವಾದರೆ, ಬಿಜೆಪಿಗೆ 80-85 ಸ್ಥಾನ, ಕಾಂಗ್ರೆಸ್ಗೆ 60-65 ಸ್ಥಾನ ಹಾಗೂ ಜೆಡಿಎಸ್ಗೆ 20-25 ಸ್ಥಾನ ದೊರೆಯುವ ಸಂಭವವಿದ್ದು, ಉಳಿದವು ಪಕ್ಷೇತರರ ಪಾಲಾಗಲಿವೆ. ಕಾಂಗ್ರೆಸ್ನ 16 ವಾರ್ಡ್ಗಳಲ್ಲಿ ಪ್ರಬಲ ಬಂಡಾಯ ಗಾರರಿರುವುದೇ ಅಧಿಕೃತ ಅಭ್ಯರ್ಥಿ ಹಿನ್ನಡೆಗೆ ಕಾರಣ ವಾಗಲಿದೆ. ಈ ಕ್ಷೇತ್ರಗಳಲ್ಲಿ ಬಿಜೆಪಿಗೆ ಲಾಭವಾಗಲಿದೆ.
ಹಳೆ ಪಾಲಿಕೆ ವಾರ್ಡ್ಗಳಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದು, ಬಿಜೆಪಿಗೆ ಪೈಪೋಟಿ ಕೊಡುತ್ತಿದೆ. ಹೊಸದಾಗಿ ಸೇರಿರುವ ವಾರ್ಡ್ಗಳಲ್ಲಿ ಬಿಜೆಪಿ-ಜೆಡಿಎಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.

-jayakirana

No comments: