ಮಂಗಳೂರು: ಮನೆಯಂಗಳದಲ್ಲಿ ಉಯ್ಯಾಲೆಯಾಡುತ್ತಿದ್ದ ವೇಳೆ ಬಾಲಕಿ ಸೀರೆಯ ಕುಣಿಕೆಗೆ ಸಿಲುಕಿ ದಾರುಣವಾಗಿ ಮೃತ್ಯುವಶವಾದ ಘಟನೆ ಕಾಸರಗೋಡು ಬಳಿಯ ಪೆರಿಯ ಎಂಬಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಪೆರಿಯ ಸರಕಾರಿ ಹೈಯರ್ ಶಾಲೆ ವಿದ್ಯಾರ್ಥಿನಿ ಫೆಮಿನಾ(11) ಎಂದು ಗುರುತಿಸಲಾಗಿದೆ. ಪೆರಿಯ ಬಜಾರಿನ ಅಬೂಬಕ್ಕರ್-ಪೌಝಿಯಾ ದಂಪತಿಯ ಪುತ್ರಿಯಾದ ಈಕೆಯ ಕುತ್ತಿಗೆಗೆ ಉಯ್ಯಾಲೆಯ ಕುಣಿಕೆ ಸಿಕ್ಕಿ ಒದ್ದಾಡುತ್ತಿದ್ದಾಗ ಸ್ಥಳೀಯರು ರಕ್ಷಿಸಲು ಯತ್ನಿಸಿದರೂ ಫಲಪ್ರದವಾದರೆ ಮೃತಪಟ್ಟಿರುತ್ತಾಳೆ.
ಚೆಕ್ ಅಮಾನ್ಯ: ಆರೋಪಿಗೆ ಶಿಕ್ಷೆ
ಬಜಪೆ: ಚೆಕ್ ಅಮಾನ್ಯ ಪ್ರಕರಣವೊಂದರಲ್ಲಿ ಶಿಕ್ಷೆಗೊಳಪಟ್ಟ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಮರವೂರು ನಿವಾಸಿ ಮಯ್ಯದ್ದಿ ಎಂಬಾತ ಬಜಪೆಯ ವ್ಯಕ್ತಿಯೊಬ್ಬರಿಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 87,000ರೂ. ನೀಡಲು ಬಾಕಿ ಇದ್ದು ಈ ಬಗ್ಗೆ ನೀಡಿದ್ದ ಚೆಕ್ಗಳು ಅಮಾನ್ಯಗೊಂಡಿದ್ದವು. ಫಿರ್ಯಾದಿದಾರರು ಈ ಬಗ್ಗೆ ಮೊಕದ್ದಮೆ ದಾಖಲಿಸಿದ್ದು ಆರೋಪಿ ತಲೆಮರೆಸಿಕೊಂಡಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಎರಡೂ ಪ್ರಕರಣಗಳಲ್ಲೂ ಆರೋಪಿಗೆ ತಲಾ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ ನ್ಯಾಯಾಲಯದ ಶಿಕ್ಷೆ ಘೋಷಣೆಯಾದ ನಂತರವೂ ಆರೋಪಿಯ ಪತ್ತೆಯಾಗಿರಲಿಲ್ಲ. ಇದೀಗ ಬಜಪೆ ಪೊಲೀಸರು ಸದ್ರಿ ಆರೋಪಿಯನ್ನು ಮಂಚಕಲ್ನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯದಲ್ಲಿ ಹಣ ಹಿಂತಿರುಗಿಸಿ ಶಿಕ್ಷೆಯಿಂದ ಪಾರಾಗುವ ಅವಕಾಶ ನೀಡಿದಾಗಲೂ ಆರೋಪಿ ಇದಕ್ಕೆ ನಿರಾಕರಿಸಿದ್ದರಿಂದ ಜೈಲು ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ಬಜ್ಪೆ ಎಸ್ಐ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ಹೆಡ್ ಕಾನ್ಸ್ಟೇಬಲ್ ಅರುಣ್ ಕುಮಾರ್, ಪಿಸಿಗಳಾದ ಜಬ್ಬಾರ್, ಬಾಬು ಹಾಗೂ ಕೃಷ್ಣ ಭಾಗವಹಿಸಿದ್ದರು.
ಮೆಕ್ಯಾನಿಕ್ ಸಾವು: ಕೊಲೆ ಪ್ರಕರಣ ದಾಖಲು
ಬಂಟ್ವಾಳ : ದ್ವಿಚಕ್ರ ವಾಹನ ಮೆಕ್ಯಾನಿಕ್ ಬಿಸಿರೋಡ್ ಭಂಡಾರಿಬೆಟ್ಟುವಿನ ಸದಾಶಿವ ಆಚಾರ್ಯರವರ ಶಂಕಾಸ್ಪದ ಸಾವು ಕೊಲೆ ಪ್ರಕರಣವಾಗಿ ಪರಿವರ್ತನೆಯಾಗುವ ಮೂಲಕ ಹೊಸ ತಿರುವು ಪಡೆದುಕೊಂಡಿದೆ.
ಉಜಿರೆಗೆ ಕೆಲಸಕ್ಕೆಂದು ಹೋದ ಸದಾಶಿವ ಆಚಾರಿಯವರ ಮೃತ ದೇಹ 18 ದಿನಗಳ ಬಳಿಕ ಮಹಾರಾಷ್ಟ್ರದ ರತ್ನಗಿರಿ ಪೊಲೀಸ್ ಠಾಣಾ ವ್ಯಾಪ್ತೀಯ ಚಿಪ್ಲೋನ್ ಎಂಬಲ್ಲಿನ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಸದಾಶಿವರವರ ಪತ್ನಿ ಸಂಶಯಾಸ್ಪದ ಸಾವಿನ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಎಸ್ಪಿಯ ಸೂಚನೆಯಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಕನಿಷ್ಟ 4 ರಿಂದ 6ಜನ ಶಾಮೀಲಾಗಿರುವ ಬಗ್ಗೆ ಗುಮಾನಿ ಇದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದಾಶಿವ ಆಚಾರ್ಯರವರ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಕೂಡಾ ಬಂಟ್ವಾಳ ಪೊಲೀಸರಿಗೆ ತಲುಪಿಲ್ಲವೆನ್ನಲಾಗಿದ್ದು, ಅವರನ್ನು ಯಾವ ರೀತಿ ಕೊಲೆಗೈಯ್ಯಲಾಯಿತು ಅಥವಾ ಅವರೇ ನೀರಿಗೆ ಬಿದ್ದು ಸತ್ತರೇ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಿಂದ ಗೋತ್ತಾಗಬೇಕಾಗಿದ್ದು ಪೊಲೀಸರು ಈ ವರದಿಗಾಗಿ ಕಾಯುತ್ತಿದ್ದಾರೆ. ಒಟ್ಟಿ ನಲ್ಲಿ ಈ ಸಾವು ಸ್ಥಳಿಯವಾಗಿ ಕುತೂಹಲ ಸೃಷ್ಟಿಸಿದೆ.
ಕೋರ್ಟ್ಗೆ ಗೈರು: ಪ್ರಕರಣ ದಾಖಲು
ಮಂಗಳೂರು: ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಂಟ್ವಾಳದ ಪರ್ವೇಜ್(27) ಎಂಬಾತನ ವಿರುದ್ಧ ಮಂಗಳೂರಿನ 2ನೇ ಹೆಚ್ಚುವರಿ ನ್ಯಾಯಾಲಯ ವಾರಂಟ್ ಹೊರಡಿಸಿದೆ. ಅಲ್ಲದೆ ಆತನ ವಿರುದ್ಧ ಬಂದರು ಪೊಲೀಸರು ತಲೆಮರೆಸಿದ ಬಗ್ಗೆ ನಿನ್ನೆ ಪ್ರಕರಣ ದಾಖಲಿಸಿದ್ದಾರೆ. ಹಳೆ ಪ್ರಕರಣದಲ್ಲಿ ಜಾಮೀನು ಬಿಡುಗಡೆಯಾಗಿದ್ದ ಆರೋಪಿ ಫರ್ವೇಜ್, 2009 ಡಿ.10ರಿಂದ 2010 ಮಾ. 24ರವರೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿದ್ದಾಗಿ ಎಸ್ಐ ಮಂಜುನಾಥ್ ನ್ಯಾಯಾಲಯ ನಿರ್ದೇಶನದಂತೆ ಪ್ರಕರಣ ದಾಖಲಿಸಿದ್ದಾರೆ.
Mar 25, 2010
Subscribe to:
Post Comments (Atom)
No comments:
Post a Comment