ಮಂಗಳೂರು: ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಮಹಿಳೆಯೊಬ್ಬರು ಈಗಾಗಲೇ ಎರಡು ಮದುವೆಯಾಗಿ ಮೂರು ಮಕ್ಕಳು ಪಡೆದ ಮಹಾ ಮಕ್ಕಳ ತಾಯಿಯೊಬ್ಬರು ಎರಡು ಗಂಡಂದಿರನ್ನು ಬಿಟ್ಟು ಮೂರನೇ ಮದುವೆಯಾದ ಘಟನೆ ನಡೆದಿದೆ.
ರಾಮಕುಂಜ ಗ್ರಾಮದ ಬಾಂತೊಟ್ಟು ನಿವಾಸಿ ದಿ.ಲಿಂಗಪ್ಪ ದೇವಾಡಿಗೆ ಪುತ್ರಿ ಭವಾನಿ(32) ಎಂಬಾಕೆಯೇ ಮೂರು ಮದುವೆಯಾದ ಮಹಾತಾಯಿ. ಈಕೆಗೆ ಮೊದಲು ಸದಾಶಿವ ಎಂಬವರೊಂದಿಗೆ ಮೊದಲು ಮದುವೆಯಾಗಿ ಕೆಲವು ವರ್ಷಗಳ ಕಾಲ ಸಂಸಾರವನ್ನೂ ನಡೆಸಿದ್ದರು. ಅವರಿಗೆ ಒಂದು ಹೆಣ್ಣು ಮಗುವೂ ಜನಿಸಿತ್ತು. ಅನಂತರ ಗಂಡನಲ್ಲಿ ವಿನಾ ಕಾರಣ ಬೇಸರಗೊಂಡ ಭವಾನಿ ಮಗುವನ್ನು ಗಂಡನ ಬಳಿಯೇ ಬಿಟ್ಟು ತವರು ಮನೆ ಸೇರಿಕೊಂಡಿದ್ದಳು. ನಂತರ ಈಕೆಯನ್ನು ಮದುವೆಯಾಗಳು ಮುಂದೆ ಬಂದವ ಕೋಡಿಂಬಾಳದ ಸಂಜೀವ. ಇವರ ಸಂಸಾರದ ಫಲವಾಗಿ ಎರಡು ಗಂಡು ಮಕ್ಕಳು ಹುಟ್ಟಿಕೊಂಡಿತ್ತು. ಕೆಲವು ವರ್ಷದ ಬಳಿಕ ಎರಡನೆಯ ಗಂಡನೊಂದಿಗೆಯೂ ಸಂಸಾರ ನಡೆಸಲು ಬೇಸರಗೊಂಡ ಆಕೆ ಎರಡೂ ಮಕ್ಕಳನ್ನು ಗಂಡನ ಬಳಿಯೇ ಬಿಟ್ಟು ಹೋಗಿದ್ದಾಳೆ, ಎರಡು ಗಂಡಂದಿರನ್ನು ಬಿಟ್ಟ ನಂತರ ಈಕೆಗೆ ಪರಿಚಯ ವಾದದ್ದು ಮುರ ನಿವಾಸಿ ನವೀನ್ ಪೂಜಾರಿ.
ಇತ್ತೀಚೆಗೆ ಇವರಿಬ್ಬರ ಮದುವೆ ನಡೆದು ಪ್ರಣಯ ಮಿತಿ ಮೀರಿದಾಗ ಸ್ಥಳಿಯರು ಅವರಿಬರನ್ನೂ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಆದರೆ ಭವಾನಿ ನಾನು ಕಾನೂನು ಪ್ರಕಾರವಾಗಿಯೇ ನವೀನ್‌ನನ್ನು ಮದುವೆಯಾಗಿದ್ದೇನೆ ಎಂದು ಹೇಳಿದಾಗ ಕಡಬ ಪೊಲೀಸರು ಅವರಿಬ್ಬರನ್ನು ಬಿಡುಗಡೆಗೊಳಿಸಿದ್ದಾರೆ. ಇದೀಗ ಭವಾನಿ ಹಾಗೂ ಮೂರನೇ ಗಂಡ ಹನಿಮೂನ್‌ಗಾಗಿ ಮುಂಬಾಯಿಗೆ ತೆರಳಿದ್ದಾರೆಂದು ತಿಳಿದು ಬಂದಿದೆ.
Showing posts with label ಕೃಪೆ: ಜಯಕಿರಣ. Show all posts

May 27, 2010
ಮದುಮಗ ಪೊಲೀಸ್ ನಾಪತ್ತೆ
ಬಂಟ್ವಾಳ: ಮದುವೆಯ ದಿನವೇ ಮದುಮಗ ಪೊಲೀಸ್ ಕಾನ್ಸ್ಟೇಬಲ್ ದಿಢೀರ್ ನಾಪತ್ತೆಯಾದ ಪ್ರಸಂಗವೊಂದು ಬಿ.ಸಿ.ರೋಡಿನಲ್ಲಿ ನಿನ್ನೆ ನಡೆದಿದೆ. ಬಳಿಕ ಬಂಟ್ವಾಳ ಪೊಲೀಸರು ಬೆಂಗಳೂರಿನಲ್ಲಿ ಆತನನ್ನು ಪತ್ತೆ ಹಚ್ಚಿದ್ದು, ಮದುಮಗ ಮತ್ತು ಮದುಮಗಳ ಕಡೆಯವರ ಪಂಚಾಯಿತಿಕೆ ನಡೆಸಿ ಮದುವೆಯನ್ನು ಮುಂದೂಡಿದರು. ನಿನ್ನೆ ಮೊಡಂಕಾಪು ಚರ್ಚ್ ಹಾಲ್ನಲ್ಲಿ ನಡೆಯಬೇಕಾಗಿದ್ದ ಪೊಲೀಸನ ಶುಭ ವಿವಾಹ ಮೇ 30ರಂದು ಕಟೀಲಿನಲ್ಲಿ ನೆರವೇರಲಿದೆ.
ನಾಪತ್ತೆಯಾದ ಮದುಮಗ ಸುರತ್ಕಲ್ ಠಾಣೆಯ ಸಿಬ್ಬಂದಿಯಾಗಿದ್ದು, ಕೆಲವು ವರ್ಷಗಳ ಹಿಂದೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸುಬ್ರಹ್ಮಣ್ಯದ ಯುವತಿಯೊಂದಿಗೆ ಪ್ರೇಮ ಬೆಳೆದು ವಿವಾಹವೂ ನಿಶ್ಚಯವಾಗಿತ್ತು. ಸಮಾರಂಭಕ್ಕೆ ಮದುಮಗಳು, ಆಕೆಯ ಕಡೆಯವರು ಆಗಮಿಸಿದ್ದು, ಹಾಲ್ನಲ್ಲಿ ಮದುಮಗನ ಪತ್ತೆಯೇ ಇರಲಿಲ್ಲ. ಬಳಿಕ ಗ್ರಾಮಾಂತರ ಠಾಣೆಗೆ ದೂರು ನೀಡಿದರೆನ್ನಲಾಗಿದೆ.
ಆಗ ಪೊಲೀಸ್ ಸಿಬ್ಬಂದಿ ಎರಡು ದಿನಗಳ ಹಿಂದೆಯೇ ನಾಪತ್ತೆಯಾಗಿರುವ ವಿಷಯ ತಿಳಿಯಿತು. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಕೊನೆಗೆ ಬೆಂಗಳೂರಿನಲ್ಲಿ ಪತ್ತೆ ಹಚ್ಚಿದ ಪೊಲೀಸರು ಠಾಣೆಗೆ ಕರೆದೊಯ್ದು ಸಂಧಾನ ನಡೆಸಿದರು. ಕಾಂಗ್ರೆಸ್ ಮುಖಂಡ ಜನಾರ್ದನ ಚೆಂಡ್ತಿಮಾರ್ ಸಹಿತ ಪೊಲೀಸ್ ಅಧಿಕಾರಿಗಳು ಮಾತುಕತೆ ನಡೆಸಿದರು.
ವಿವಾಹ ನಿಶ್ಚಯವಾದರೂ ಮದುಮಗ ನಾಪತ್ತೆಯಾಗಲು ಹಣಕಾಸಿನ ತೊಡಕೇ ಕಾರಣ ಎಂದು ತಿಳಿದು ಬಂದಿದೆ. ಕುಟುಂಬ ನಿರ್ವಹಣೆಯ ಹೊರೆಯಿಂದಾಗಿ ಕಂಗಾಲಾಗಿದ್ದ ಸಿಬ್ಬಂದಿ ಯಾರಿಗೂ ಹೇಳದೆ ಓಡಿ ಹೋಗಿದ್ದ ಎಂದು ಮದುಮಗನ ಸಂಬಂಧಿಕರು ತಿಳಿಸಿದ್ದಾರೆ.

May 25, 2010
ಕೋಮುವಾದಿಗಳ ಕಣ್ಣು ತೆರೆಸೀತೇ ವಿಮಾನ ದುರಂತ?
ಬಜಪೆಯಲ್ಲಿ ಸಂಭವಿಸಿರುವ ವಿಮಾನ ಅಪಘಾತ ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ. ಸಂತಾಪ, ಅನುಕಂಪ, ಸ್ಪಂದನೆ ಹರಿದು ಬಂದಿದೆ. ಕೆಲವು ಮೃತದೇಹಗಳನ್ನು ಇನ್ನೂ ಗುರುತಿಸಲಾಗಿಲ್ಲ. ಅದು ಯಾವ ಮತದ ವರದ್ದು ಎಂದು ಹೇಳಲಾಗುವುದಿಲ್ಲ. ತಮ್ಮ ವರನ್ನೇ ಗುರುತಿಸಲಾಗದ ದೌರ್ಭಾಗ್ಯದ ಸಂದರ್ಭದಲ್ಲಿ ಯಾರಿಗೂ ಅವರವರ ಧರ್ಮ ಸಹಾಯಕ್ಕೆ ಬಂದಿಲ್ಲ. ಇಲ್ಲಿ ಅನಿವಾ ರ್ಯವಾಗಿರುವುದು ಡಿಎನ್‌ಎ ಪರೀಕ್ಷೆ. ಧರ್ಮ, ಕೋಮು ಎಂದು ಹೊಡೆದಾಡಿ ಕೊಳ್ಳುವ ಕೋಮುವಾದಿಗಳಿಗೆ ಅವರ ಸಂಕುಚಿತತೆಯನ್ನು ಎತ್ತಿ ತೋರಿಸಲು ಈ ದುರಂತಕ್ಕೆ ಸಾಧ್ಯವಾಗುತ್ತದೆ. ಆದರೆ ನಾವು ಅದನ್ನು ತಿಳಿದುಕೊಳ್ಳಲು ಸಮರ್ಥರಿದ್ದೇವೆಯೇ? ಹುಟ್ಟು ಸಾವಿನ ಮಧ್ಯೆಯಿರುವ ಧರ್ಮದ ವಿಷಯದಲ್ಲಿ ನಾವು ಲಾಭಕ್ಕಿಂತ ಹೆಚ್ಚು ಹಾನಿ ಮಾಡಿಕೊಳ್ಳುತ್ತಿದ್ದೇವೆ. ಬದುಕಿನ ಶಿಸ್ತಿಗೆ ಸಹಾಯ ಮಾಡಬೇಕಾದ ಧರ್ಮವನ್ನು ನಾವು ಅಶಿಸ್ತು, ಅನ್ಯಾಯ, ಹಿಂಸೆಗೆ ಬಳಸುತ್ತಿ ದ್ದೇವೆ. ಶಾಂತಿಯ ಸಂದೇಶವಿರುವ ಪ್ರತಿಯೊಂದು ಧರ್ಮ ದಲ್ಲೂ ಇರುವ ಕೆಲವು ಮತಾಂಧರು ವಿಶಾಲ ಧರ್ಮದ ವ್ಯಾಖ್ಯಾನವನ್ನು ಸಂಕುಚಿತಗೊಳಿಸುತ್ತಿರುತ್ತಾರೆ. ಜಗತ್ತಿನ ಮಾನವ ಸಮೂಹದ ಸೊತ್ತಾಗಿರುವ ಧರ್ಮವನ್ನು ತನ್ನ ಅಂಕೆಯ ಲ್ಲಿಟ್ಟುಕೊಳ್ಳಲು ಮುಂದಾಗುವವರೂ ಇಲ್ಲದಿಲ್ಲ. ಅಂಥವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿದೆ. ಸುಟ್ಟು ಕರಕಲಾಗಿರುವ ಶವವನ್ನು ಧರ್ಮದ ಆಧಾರದಲ್ಲಿ ವಿಂಗಡಿಸಿ ಅದರ ಗುರುತು ಹಿಡಿಯಲಾಗುತ್ತಿಲ್ಲವಲ್ಲಾ, ಅದು ಯಾಕೆ?
ನಾವು ಮೊದಲು ಮಾನವರಾಗಬೇಕು. ಮಾನವನಾಗದಿದ್ದರೆ ಧರ್ಮದಿಂದ ಏನೂ ಸಾಧಿಸಲಾಗದು. ಧರ್ಮ ಮಾನವನಿಗೆ ಬೇಕೇ ಹೊರತು ಪ್ರಾಣಿಗಳಿಗಲ್ಲ. ಮೊನ್ನೆ ಸ್ಫೋಟಿಸಿದ ವಿಮಾನ ದಲ್ಲಿ ಎಲ್ಲಾ ಧರ್ಮದವರೂ ಇದ್ದರು. ಆ ಬೆಂಕಿಗೆ ಆಹುತಿಯಾ ಗುವಾಗ ಅದು ಧರ್ಮದ ಪಕ್ಷಪಾತ ಮಾಡಿಲ್ಲ. ಯಾವ ದೇವರೂ ಪ್ರಯಾಣಿಕರ ಮೊರೆಗೆ ಸ್ಪಂದಿಸಲಿಲ್ಲ. ಪುಟ್ಟ ಮಕ್ಕಳ ಮೇಲೂ ಕರುಣೆ ತೋರಿಸಿಲ್ಲ. ಹಸಿಹಸಿ ಜೀವಗಳು ದಹನಗೊಂ ಡವು. ಅಲ್ಲಿ ಸಹಾಯಕ್ಕೆ ಬಂದುದು ದೇವರಲ್ಲ. ಮಾನವರು. ಅವರಿಗೆ ಶಕ್ತಿಮೀರಿ ಸಹಾಯಹಸ್ತ ನೀಡಿದ್ದು ಅಲ್ಲಿನ ಸ್ಥಳೀಯರು. ಧರ್ಮ ಯಾರಿಗೂ ಸಹಾಯ ಮಾಡಿಲ್ಲ. ಅಲ್ಲಿ ಮೆರೆದುದು ಮಾನವೀಯತೆ. ಸಹಾಯ ಮಾಡುವ ಹೊತ್ತು ಯಾರೂ ಯಾರ ಧರ್ಮವನ್ನೂ ಕೇಳಿಲ್ಲ. ಅನ್ಯಕೋಮಿನವರು ಎಂದು ತಿಳಿದರೂ ಸಹಾಯಹಸ್ತದಲ್ಲಿ ಏರಿಳಿತವಾಗಿಲ್ಲ. ಕೆಲವು ಜೀವ ವನ್ನು ರಕ್ಷಿಸಿದ ಸಮಾಧಾನ ಅವರಲ್ಲಿ ಎದ್ದು ಕಾಣುತ್ತಿತ್ತೇ ಹೊರತು ಅವರು ಯಾವ ಧರ್ಮದವರು ಎಂಬುದು ಅಲ್ಲಿ ಮುಖ್ಯವಾಗಿಲ್ಲ. ಆ ದುರಂತದ ಹೊತ್ತು ಅವರೆಲ್ಲರೂ ಒಂದೇ ತಾಯಿಯ ಮಕ್ಕಳಂತೆ, ಒಂದೇ ಮನೆಯ ಸದಸ್ಯರಂತೆ ವರ್ತಿಸಿದರು.
ದುರಂತದ ಬಳಿಕ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮನೆಗಳೆ ಲ್ಲವೂ ರೋಧಿಸಿತು. ಎಲ್ಲರ ಮನೆಯಲ್ಲೂ ಸಾವು ವಿಜೃಂಭಿಸಿದೆ. ಗುರುತು ಹಿಡಿಯಲಾಗದೆ ಉಳಿದಿರುವ ಪ್ರತಿಯೊಂದು ಶವವೂ ತಮ್ಮವರದ್ದಾಗಿರಬಹುದು ಎಂದು ಪ್ರತಿ ಸಂತ್ರಸ್ತ ಮನೆಯವರೂ ಭಾವನಾತ್ಮಕವಾಗಿ ಅವುಗಳನ್ನು ನೋಡುತ್ತಿದ್ದರು. ಧರ್ಮದ ಆಧಾರದಲ್ಲಿ ಅವುಗಳನ್ನು ಗುರುತಿಸುವುದು ಸಾಧ್ಯವಾಗಲೇ ಇಲ್ಲ. ಇಂಥ ಧರ್ಮದ ಹೆಸರಲ್ಲಿ ನಾವು ಹೊಡೆದಾಡಿಕೊಳ್ಳುವುದು ಅಗತ್ಯವೇ? ನಾವು ಮೊದಲು ಮಾನವರಾಗಿ, ಸಹೋದರರಾಗಿ ಬಾಳಿದರೆ ಅದಕ್ಕಿಂತ ಸುಂದರ ಬದುಕು ಬೇರೊಂದಿದೆಯೇ? ಕಷ್ಟದ ಸಂದರ್ಭದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದರೆ ಈ ಸಮಾಜದಲ್ಲಿ ಶಾಂತಿ, ಪ್ರೀತಿ ಅಕ್ಷಯವಾಗದೇ? ಕೋಮುವಾದಿಗಳು ಒಂದಿಷ್ಟು ಚಿಂತಿಸಬೇಕಾಗಿದೆ.
ಯಾವ ಧರ್ಮೀಯರೂ ಕಷ್ಟದಿಂದ ಮುಕ್ತರಲ್ಲ. ಯಾವ ದೇವರ ಮೇಲೂ ಭಾರ ಹಾಕಿ ಸಾವನ್ನು ಗೆದ್ದು ಬರುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಮಾನವೀಯತೆ ವಿಜೃಂಭಿಸಿದರೆ, ಮಾನವ ಶಕ್ತಿ ಸೆಟೆದು ನಿಂತರೆ, ಪ್ರೀತಿವಿಶ್ವಾಸ ಗಟ್ಟಿಗೊಂಡರೆ ಕಷ್ಟದುಃಖಗಳನ್ನು ಗರಿಷ್ಠ ಪ್ರಮಾಣದಲ್ಲಿ ದೂರ ಇರಿಸಲು ಸಾಧ್ಯವಿದೆ. ಇದು ಯಾಕೆ ನಮಗೆ ಅರ್ಥವಾಗುವುದಿಲ್ಲ.
ಒಮ್ಮೆ ನಾವು ಅನ್ಯ ಕೋಮಿನವರಿಗೆ ಸಹಾಯ ಮಾಡಿ ನೋಡೋಣ. ಅವರ ಹಬ್ಬಗಳಲ್ಲಿ ಭಾಗವಹಿಸೋಣ. ಅವರನ್ನೂ ನಮ್ಮ ಮನೆಗೆ ಕರೆದು ಆತಿಥ್ಯ ನೀಡೋಣ. ಆಗ ಎರಡು ಮನಸ್ಸುಗಳ ನಡುವೆ ಮೂಡುವ ಪ್ರೀತಿಯ ಸಂಬಂಧದ ಆಳವನ್ನು ಗ್ರಹಿಸಲೂ ಸಾಧ್ಯವಿಲ್ಲ. ಆದರೆ ಹಾಗೆ ಕರೆಯುವ ಮನಸ್ಸುಗಳು ಬೇಕಲ್ಲಾ? ಅದು ಇಲ್ಲದಿರುವುದೇ ಒಂದು ಕೊರತೆ. ಮನಸ್ಸುಗಳನ್ನು ಬೆಸೆಯುವವರು ಇಲ್ಲವಾಗಿದ್ದಾರೆ, ಒಡೆಯುವವರೇ ತುಂಬಿದ್ದಾರೆ. ಅಂಥವರು ಇಂಥ ದುರಂತದ ಬಳಿಕವಾದರೂ ಮನಸ್ಸಿನ ತಪ್ಪು ಕಲ್ಪನೆಯನ್ನು ದೂರ ಮಾಡಲು ಶ್ರಮಿಸಬೇಕಾಗಿದೆ.

May 21, 2010
ಅಸ್ಪಷ್ಟ ಉತ್ತರಗಳ ಸುದ್ದಿಗೋಷ್ಠಿ

ಮಂಗಳೂರು: ಗ್ರಾಮ ಪಂಚಾ ಯತ್ ಚುನಾವಣೆಯ ಫಲಿತಾಂಶ ಬಳಿಕ ನಿನ್ನೆ ಡಿಸಿಸಿ ಅಧ್ಯಕ್ಷ ರಮಾನಾಥ ರೈ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಅಸ್ಪಷ್ಟ ಉತ್ತರ ಗಳೇ ದೊರೆತವು.
ರಾಜ್ಯದಲ್ಲಿ ಧರ್ಮಸಿಂಗ್ ನೇತೃತ್ವದ ಸರಕಾರ ಇದ್ದಾಗ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಗಳಿಸಿ ದ್ದಕ್ಕಿಂತಲೂ ಅಧಿಕ ಸ್ಥಾನಗಳನ್ನು ಕಾಂಗ್ರೆಸ್ ಈ ಬಾರಿಯ ಚುನಾವಣೆ ಯಲ್ಲಿ ದ.ಕ. ಜಿಲ್ಲೆಯಲ್ಲಿ ಗಳಿಸಿದೆ. ರಾಜ್ಯ ಸರಕಾರದ ವಿರುದ್ಧ ಜನ ಭ್ರಮನಿರಸನಗೊಂಡಿರುವುದೇ ಇದಕ್ಕೆ ಕಾರಣ ಎಂದು ರೈ ಬೀಗಿದರು.
ಈ ಸಂದರ್ಭದಲ್ಲಿ ಪತ್ರಕರ್ತರು ಎಷ್ಟು ಗ್ರಾಮಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಪ್ರಶ್ನಿಸಿ ದಾಗ ಉತ್ತರಕ್ಕಾಗಿ ತಡಕಾಡಿದ ರೈ, ತಾಲೂಕುವಾರು ಲೆಕ್ಕಾಚಾರ ನೀಡಿ ಕೈತೊಳೆದುಕೊಂಡರು. ಕೆಲವು ಗ್ರಾಮಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಎಸ್‌ಡಿಪಿಐ ನಿರ್ಣಾ ಯಕವಾಗಿದ್ದು ಅದರ ಜೊತೆ ಮೈತ್ರಿ ಮಾಡುತ್ತೀರಾ ಎಂಬ ಪ್ರಶ್ನೆಗೂ ಉತ್ತರಿಸಲು ತಡವರಿಸಿದ ರೈ ಅಂತಹ ಪರಿಸ್ಥಿತಿ ಎಲ್ಲೂ ಇಲ್ಲ ಎಂದು ನುಣುಚಿ ಕೊಳ್ಳಲು ಯತ್ನಿಸಿದರು.
ಆದರೆ ಪಟ್ಟು ಬಿಡದ ಪತ್ರಕರ್ತರು ಪುರಾವೆ ನೀಡಿದಾಗ ಇದರ ಬಗ್ಗೆ ಪಕ್ಷದ ಮುಖಂಡರು ತೀರ್ಮಾನ ಕೈಗೊಳ್ಳು ತ್ತಾರೆ ಎನ್ನುವ ಬದಲು ಮತದಾರರು ತೀರ್ಮಾನ ಕೈಗೊಳ್ಳುತ್ತಾರೆಂದು ಅಸ್ಪಷ್ಟ ಉತ್ತರ ನೀಡಿದರು. ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್ ಮಾಡಿದ ಸಾಧನೆ ಲೋಕ ಸಭಾ ಚುನಾವಣೆಯಲ್ಲಿ ಏಕಾಗಿಲ್ಲ ಎಂದು ಪತ್ರಕರ್ತರು ಮರು ಪ್ರಶ್ನಿಸಿದಾಗ ಮತ್ತೆ ತಡಕಾಡಿದ ರೈ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಪ್ರಶ್ನೆಗೆ ಸಂಬಂಧವೇ ಇಲ್ಲದಂತೆ ಉತ್ತರಿಸಿದರು.ಪತ್ರಕರ್ತರು ಮತ್ತೆ ಮತ್ತೆ ಪ್ರಶ್ನೆಗಳ ಸುರಿಮಳೆಗೈದಾಗ ಉತ್ತರ ನೀಡಲು ಯು.ಟಿ. ಖಾದರ್ ಮುಂದಾದರೂ ಅವರನ್ನು ತಡೆದ ರೈ, ಪತ್ರಿಕಾಗೋಷ್ಠಿಯಲ್ಲಿ ಚರ್ಚೆ ಬೇಡ ಎಂದು ಸಮಜಾಯಿಷಿ ನೀಡಿ ಕೈತೊಳೆದುಕೊಂಡಾಗ ಪತ್ರಕರ್ತರೇ ಅವರ ಸ್ಥಿತಿ ಕಂಡು ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಿದರು.
ಬರುವಾಗಲೇ ಅರ್ಧ ಗಂಟೆ ತಡ
ನಿನ್ನೆಯ ಸುದ್ದಿಗೋಷ್ಠಿಯನ್ನು 3.30ಕ್ಕೆ ಕರೆಯಲಾಗಿತ್ತು. ಆದರೆ ರಮಾನಾಥ ರೈಯವರ ಪತ್ತೆಯೇ ಇರಲಿಲ್ಲ. ಇದರಿಂದ ಬೇಸತ್ತ ಪತ್ರಕರ್ತರು ಗೋಷ್ಠಿಯನ್ನು ಬಹಿಷ್ಕರಿಸಲು ಮುಂದಾದಾಗ ಅದುವರೆಗೂ ಹರಟೆ ಹೊಡೆಯುತ್ತಾ ಟೈಂಪಾಸ್ ಮಾಡುತ್ತಿದ್ದ ನಾಯಕರು ಕೊಂಚ ವಿಚಲಿತರಾಗಿ ಪತ್ರಕರ್ತರನ್ನು ಸಮಾಧಾನಪಡಿಸಿದರು.ಬಳಿಕ ಯು.ಟಿ. ಖಾದರ್ ಪತ್ರಿಕಾಗೋಷ್ಠಿ ಆರಂಭಿಸಿ ತನ್ನ ಕ್ಷೇತ್ರದಲ್ಲಿನ ಸಾಧನೆ ಬಗ್ಗೆ ವಿವರಿಸಿದರು.
ಅವರ ನಂತರ ಅಭಯಚಂದ್ರ ಜೈನ್ ತಮ್ಮ ಕ್ಷೇತ್ರದ ಸಾಧನೆ ಬಗ್ಗೆ ರಮಾನಾಥ ರೈ ಬರುವವರೆಗೂ ವಿವರಿಸಿದರು. ಅಂತೂ 3.30ಕ್ಕೆ ಬರಬೇಕಿದ್ದ ರಮಾನಾಥ ರೈ ನಾಲ್ಕು ಗಂಟೆಗೆ ಆಗಮಿಸಿ ಟ್ರಾಫಿಕ್ ಜಾಮ್ ಇದ್ದ ಕಾರಣ ತಡವಾಯಿತೆಂದು ಕ್ಷಮೆಯಾಚಿಸಿದರು.
ಕಾರ್ಯಕರ್ತರ ಸಭೆಯಂತಾದ ಸುದ್ದಿಗೋಷ್ಠಿ
ಕಾಂಗ್ರೆಸ್ ಪಕ್ಷದ ಅಶಿಸ್ತು ನಿನ್ನೆಯೂ ಮುಂದುವರಿಯಿತು. ನಿನ್ನೆಯ ಸುದ್ದಿಗೋಷ್ಠಿಯಲ್ಲಿ 20ಕ್ಕೂ ಅಧಿಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.
ಪತ್ರಕರ್ತರ ಪ್ರಶ್ನೆಗೆ ಕಾರ್ಯಕರ್ತರು ಉತ್ತರಿಸುವುದು, ಜಿಲ್ಲಾಧ್ಯಕ್ಷರು ಉತ್ತರಿಸಿದಾಗ ಕಾರ್ಯಕರ್ತರು ಚಪ್ಪಾಳೆ ತಟ್ಟುವುದು, ಜೋರಾಗಿ ಮಾತನಾಡುತ್ತಿದ್ದುದರಿಂದ ಪತ್ರಕರ್ತರು ಬಹಳಷ್ಟು ಕಿರಿಕಿರಿ ಅನುಭವಿಸುವಂತಾಯಿತು. ಸುದ್ದಿಗೋಷ್ಠಿಯಲ್ಲಿ ಫಾರೂಕ್ ಉಳ್ಳಾಲ್, ಟಿ.ಕೆ. ಸುಧೀರ್, ಅರುಣ್ ಕುವೆಲ್ಲೋ ಸಹಿತ ಹಲವು ಮುಖಂಡರು ಉಪಸ್ಥಿತರಿದ್ದರು.
ಎಸ್‌ಡಿಪಿಐ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಿಲ್ಲ: ಅಬ್ದುಲ್ ಮಜೀದ್

ಮಂಗಳೂರು: ಚುನಾವಣೆಗಳಲ್ಲಿ ಎಸ್‌ಡಿಪಿಐ ಸ್ಪರ್ಧಿಸುವುದರಿಂದ ಬಿಜೆಪಿಗೆ ಲಾಭವಾಗುತ್ತದೆ ಎಂಬ ಆರೋಪ ಸುಳ್ಳು. ಇದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರ ಕಪೋಲಕಲ್ಪಿತ ಆರೋಪ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸ್ಪಷ್ಟಪಡಿಸಿದರು.
ಅವರು ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು ಹಿಂದಿನಿಂದಲೂ ಎಲ್ಲಾ ಚುನಾವಣೆಗಳಲ್ಲೂ ಸ್ಪರ್ಧಿಸುತ್ತಿದೆ. ಈ ಸಂದರ್ಭದಲ್ಲಿ ಎಸ್‌ಡಿಪಿಐ ಇಲ್ಲದಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಸೋಲನುಭವಿಸಿದೆ. ಹೀಗಿರುವಾಗ ತಮ್ಮ ಪಕ್ಷ ಸ್ಪರ್ಧಿಸುವುದರಿಂದ ಬಿಜೆಪಿಗೆ ಲಾಭ ಎನ್ನುವ ಮಾತಲ್ಲಿ ಹುರುಳಿಲ್ಲ ಎಂಬ ವಾದ ಮಜೀದ್‌ರದ್ದಾಗಿದೆ.
ಎಸ್‌ಡಿಪಿಐ ಕಳೆದ ಅಕ್ಟೋಬರ್‌ನಲ್ಲಿ ಉದಯವಾದ ಪಕ್ಷವಾಗಿದ್ದು, ಇತ್ತೀಚೆಗೆ ನಡೆದ ಬಿಬಿಎಂಪಿ ಚುನಾವಣೆಯಲ್ಲಿ 11 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ಒಂದು ಸ್ಥಾನದಲ್ಲಿ ಜಯಗಳಿಸಿದೆ. ಈ ಚುನಾವಣೆಯಲ್ಲಿ ಇತರ ಪಕ್ಷಗಳು ಒಂದರಿಂದ ಎರಡು ಕೋಟಿ ರೂ. ಖರ್ಚು ಮಾಡಿದ್ದರೂ ಎಸ್‌ಡಿಪಿಐ ಜನರಿಂದ ಹಣ ಸಂಗ್ರಹಿಸಿ ಕೇವಲ 1,80,000 ಖರ್ಚು ಮಾಡಿದೆ ಎಂದು ಮಜೀದ್ ಮಾಹಿತಿ ನೀಡಿದರು.
ಬಂಡವಾಳಶಾಹಿಗಾರರ ಹಣ, ಹೆಂಡ, ತೋಳ್ಬಲದ ವಿರುದ್ಧವಾಗಿ ಪಕ್ಷ ನಿಂತಿದ್ದು ಇದೇ ಆಧಾರದಲ್ಲಿ ಜನಪರ ಆಡಳಿತ ನೀಡುವ ಸಲುವಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದೆ. ಮೊನ್ನೆ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷವು ರಾಜ್ಯದ 368 ಸ್ಥಾನಗಳಲ್ಲಿ ಸ್ಪರ್ಧಿಸಿ 67 ಸ್ಥಾನಗಳಲ್ಲಿ ಜಯ ಸಾಧಿಸಿದೆ. ದ.ಕ.ದಲ್ಲಿ 273 ಸ್ಥಾನಗಳಲ್ಲಿ ಸ್ಪರ್ಧಿಸಿ 41 ಸ್ಥಾನಗಳಲ್ಲಿ ಜಯ ಸಾಧಿಸಿದ್ದರೆ, ಉಡುಪಿಯಲ್ಲಿ 31 ಸ್ಥಾನಗಳ ಪೈಕಿ 13ರಲ್ಲಿ, ಕೊಡಗು ಜಿಲ್ಲೆಯಲ್ಲಿ 34 ಸ್ಥಾನಗಳ ಪೈಕಿ 9ರಲ್ಲೂ, ತುಮಕೂರಿನಲ್ಲಿ ಒಂಭತ್ತು ಸ್ಥಾನಗಳಲ್ಲಿ ಮೂರರಲ್ಲೂ ಜಯ ಸಾಧಿಸಿದೆ. ಕೊಡಗು ಜಿಲ್ಲೆಯ ಬೇಡಕೊಳ್ಮ ಗ್ರಾ.ಪಂ.ನಲ್ಲಿ ಅಧಿಕಾರಕ್ಕೆ ಬಂದಿದ್ದು ಇಲ್ಲಿ ಒಂಭತ್ತು ಸ್ಥಾನಗಳನ್ನು ಪಕ್ಷ ಪಡೆದಿದ್ದು ಇದರಲ್ಲಿ ಏಕೈಕ ಮುಸ್ಲಿಂ ಅಭ್ಯರ್ಥಿ ಇದ್ದರೆ ಉಳಿದವರು ಮುಸ್ಲಿಮೇತರರಾಗಿದ್ದಾರೆ.
ಇದೇ ತಿಂಗಳ 25ರಂದು ಮಂಗಳೂರು ಪುರಭವನದಲ್ಲಿ ಪಕ್ಷದಿಂದ ಸ್ಪರ್ಧಿಸಿ ಗೆದ್ದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮವಿದ್ದು ಇದರಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಭಾಗವಹಿಸಲಿದ್ದಾರೆ ಎಂದು ಮಜೀದ್ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹನ್ನಾನ್, ದ.ಕ. ಜಿಲ್ಲಾಧ್ಯಕ್ಷ ಹನೀಫ್ ಖಾನ್ ಮತ್ತು ರಾಜ್ಯ ಸದಸ್ಯ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.
ಪ್ರಸಾದ್ ಅತ್ತಾವರಗೆ ರಾಷ್ಟ್ರವಾದಿ ಯುವ ಕಾಂಗ್ರೆಸ್ ಬೆಂಬಲ

ಮಂಗಳೂರು: ಶ್ರೀರಾಮಸೇನೆ ರಾಜ್ಯ ಸಂಚಾಲಕ ಪ್ರಸಾದ್ ಅತ್ತಾವರ ಅವರನ್ನು ಸುಳ್ಳು ಮೊಕದ್ದಮೆ ಹಾಕಿ ಜೈಲಿಗೆ ಹಾಕಲಾಗಿದೆ ಎಂದು ಆರೋಪಿಸಿರುವ ಕರ್ನಾಟಕ ಪ್ರದೇಶ ರಾಷ್ಟ್ರವಾದಿ ಯುವ ಕಾಂಗ್ರೆಸ್, ಸರ್ಕಾರದ ಈ ಕ್ರಮವನ್ನು ದಮನಕಾರಿ ಕ್ರಮ ಎಂದು ಟೀಕಿಸಿದೆ. ರಾಜ್ಯದ ಬಿಜೆಪಿ ಸರ್ಕಾರದ ನೀತಿಗಳನ್ನು ಪ್ರತಿಭಟಿಸುವ ಸಂಘಟನೆಗಳ ಪದಾಧಿಕಾರಿಗಳ ಮೇಲೆ ಸರ್ಕಾರ ಸುಳ್ಳು ಮೊಕದ್ದಮೆ ಹೂಡುತ್ತಿದೆ ಎಂದು ಎನ್‌ಸಿಪಿ ರಾಜ್ಯ ಯುವ ಘಟಕ ಆರೋಪಿಸಿದೆ. ಸರ್ಕಾರದ ನೀತಿಯಿಂದಾಗಿ ಮಂಗಳೂರಿನಂತಹ ಮಹಾ ನಗರಗಳಲ್ಲಿ ಸ್ವಂತ ಮನೆ ನಿರ್ಮಿಸದಂತಹ ವಾತಾವರಣವನ್ನು ಹುಟ್ಟುಹಾಕಿರುವ ಬಿಜೆಪಿ ಸರ್ಕಾರ ಬಿಲ್ಡರ್‌ಗಳ ಫ್ಲಾಟ್‌ಗಳು ಮಾರಾಟವಾಗುವ ನೀತಿ ರೂಪಿಸುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರದ ಇಂತಹ ಜನ ವಿರೋಧಿ ನೀತಿಗಳ ವಿರುದ್ದ ರಾಷ್ಟ್ರವಾದಿ ಯುವ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಪಕ್ಷದ ಯುವ ವಿಭಾಗದ ಅಧ್ಯಕ್ಷ ಧೀರಜ್ ಕುಮಾರ್ ಶೆಟ್ಟಿ ಸರ್ಕಾರವನ್ನು ಎಚ್ಚರಿಸಿದ್ದಾರೆ.
May 19, 2010
ಎಸ್‌ಡಿಪಿಐ ಕಾರ್ಯಕರ್ತನ ಕೊಲೆ ಯತ್ನ

ಮಂಗಳೂರು: ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದ ಎಸ್.ಡಿ.ಪಿ.ಐ ಅಭ್ಯರ್ಥಿಯನ್ನು ಯುವಕರಿಬ್ಬರು ಕೊಲೆ ಮಾಡಲು ಯತ್ನಿಸಿದ ಘಟನೆ ನಿನ್ನೆ ಪುತ್ತೂರಿನಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ಸಿರಾಜ್ ಎಂದು ಗರುತಿಸಲಾಗಿದೆ. ಇವರು ನರಿ ಮೊಗರು ಗ್ರಾಮದ ಸಿಬಾರ್ ವಾರ್ಡಿನಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಆದರೆ ಇವರ ಸ್ಪರ್ಧೆಯಿಂದಾಗಿ ಈ ಗ್ರಾಮದಲ್ಲಿ ಕಾಂಗ್ರೆಸ್ ಸೋಲನುಭವಿಸಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರುವಂತಾಗಿತ್ತು.
ನಿನ್ನೆ ಮಧ್ಯಾಹ್ನದ ವೇಳೆ ಸಿರಾಜ್ ಮುಕ್ವೆಯಲ್ಲಿರುವ ತನ್ನ ಬಾಬಾ ಫರ್ನಿಚರ್ ಅಂಗಡಿಯಲ್ಲಿ ಒಬ್ಬಂಟಿಯಾಗಿ ಇದ್ದಾಗ ಅಲ್ಲಿಗೆ ಬೈಕ್‌ನಲ್ಲಿ ಬಂದ ಆರೋಪಿಗಳಾದ ಹರೀಶ್ ಮತ್ತು ಲಕ್ಷ್ಮಣ್ ರಾಡ್ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು.
ಈ ಸಂದರ್ಭದಲ್ಲಿ ಅಪಾಯವರಿತ ಸಿರಾಜ್ ಬೊಬ್ಬೆ ಹೊಡೆದಾಗ ಇತರ ಅಂಗಡಿಯವರು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಆರೋಪಿಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿರಾಜ್‌ಗೆ ಹಿಗ್ಗಾಮುಗ್ಗ ಥಳಿಸುತ್ತಿದ್ದುದನ್ನು ಕಂಡು ಸಾರ್ವಜನಿಕರು ಆರೋಪಿ ಹರೀಶ್‌ನನ್ನು ಹಿಡಿದರೆ ಇನ್ನೋರ್ವ ಆರೋಪಿ ಲಕ್ಷ್ಮಣ ಎಂಬಾತ ಪರಾರಿಯಾಗಿದ್ದಾನೆ.
ಆರೋಪಿ ಹರೀಶ್ ಬಂಟ್ವಾಳದವನಾಗಿದ್ದರೆ, ಲಕ್ಷ್ಮಣ ಮಂಗಳೂರಿನವನಾಗಿದ್ದಾನೆ. ಸೋಮವಾರದಂದು ಸಿರಾಜ್‌ನ ಅಂಗಡಿಗೆ ಬಂದು ಫರ್ನಿಚರ್‌ಗಳ ಬೆಲೆಯನ್ನು ಕೇಳಿ ಹೋಗಿದ್ದರೆನ್ನಲಾಗಿದೆ. ಕೊಲೆ ಯತ್ನ ಕೃತ್ಯ ಪೂರ್ವಭಾವಿಯಾಗಿತ್ತೆಂದು ಹೇಳಲಾಗುತ್ತಿದೆ. ಸಿರಾಜ್ ಸ್ಪರ್ಧೆಯಿಂದಾಗಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲನುಭವಿಸಿದ್ದು ಬಿಜೆಪಿ ಅಧಿಕಾರಕ್ಕೇರುವಂತಾಗಿತ್ತು. ಇದೇ ದ್ವೇಷದಿಂದ ಸಿರಾಜ್‌ನ ಕೊಲೆಯತ್ನ ನಡೆದಿದೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಎಸ್.ಡಿ.ಪಿ.ಐ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಆರೋಪಿ ಮೇಲೆ ಮುಗಿಬಿದ್ದಿದ್ದರು. ವಿಷಯ ಅರಿತ ಪುತ್ತೂರು ಠಾಣಾಧಿಕಾರಿ ಶ್ರೀಕಾಂತ್ ಸ್ಥಳಕ್ಕೆ ಆಗಮಿಸಿ ಎಸ್.ಡಿ.ಪಿ.ಐ ಕಾರ್ಯಕರ್ತರಿಂದ ಆರೋಪಿಯನ್ನು ಪಾರುಗೊಳಿಸಿದ್ದಾರೆ.

May 16, 2010
ಪ್ರೇಮಿಗಾಗಿ ಹಿಂದೂವಾದಳು ಈಗ ಆತನೇ ನಾಪತ್ತೆ!

ಮಂಗಳೂರು: ತಾನು ಕ್ರೈಸ್ತಳಾಗಿದ್ದರೂ ಆತನ ಮಾವನ ಮಾತಿಗೆ ಬೆಲೆ ಕೊಟ್ಟು ಹಿಂದೂ ಧರ್ಮ ಪ್ರಕಾರ ರಿಜಿಸ್ಟ್ರಾರ್ ಮತ್ತು ದೇವಸ್ಥಾನದಲ್ಲಿ ಮದುವೆಯಾದೆ. ಆದರೂ ನನ್ನನ್ನು ವಂಚಿಸಿದ ಯುವಕ ಹಾಗೂ ಆತನ ಕುಟುಂಬಸ್ಥರು ನನ್ನ ಮೇಲೆಯೇ ಮತಾಂತರದ ಆರೋಪ ಹೊರಿಸಿ ದರು. ಇದು ಶಕ್ತಿನಗರದ ಯುವಕನೋರ್ವನಿಂದ ವಂಚನೆಗೆ ಒಳಗಾದ ಕ್ರೈಸ್ತ ಯುವತಿಯ ಕಥೆ-ವ್ಯಥೆ.
ಶಕ್ತಿನಗರದಲ್ಲಿ ಬ್ಯೂಟಿಶಿಯನ್ ಆಗಿದ್ದ ರೇಖಾ ತನ್ನ ನೆರೆಯ ಹಿಂದೂ ಯುವಕ ಕಿಶೋರ್‌ನನ್ನು ತಾಯಿಯ ಒಪ್ಪಿಗೆಯೊಂದಿಗೆ ಮದುವೆಯಾಗಿ ದ್ದರೂ ಆಕೆಯನ್ನು ವಂಚಿಸಿದ ಯುವಕನ ಕುಟುಂಬಸ್ಥರು ಆಕೆಯ ಮೇಲೆಯೇ ಮತಾಂತ ರದ ಆರೋಪ ಹೊರಿಸಿದ್ದರಿಂದ ನೊಂದ ಆಕೆ ಫೆಬ್ರವರಿ 25ರಂದು ಆತ್ಮಹತ್ಯೆಗೂ ಯತ್ನಿಸಿದ್ದಳು. ಈಗ ಬೆಂದೂರ್‌ವೆಲ್‌ನಲ್ಲಿರುವ ಸಮಾಜ ಸೇವಾ ಕಾರ್ಯಕರ್ತೆಯೋರ್ವರ ಮನೆಯಲ್ಲಿ ಆಶ್ರಯ ಪಡೆದಿದ್ದು ನಿನ್ನೆ ಪತ್ರಕರ್ತರೊಂದಿಗೆ ತನ್ನ ಹಾಗೂ ಕಿಶೋರ್‌ನ ವೃತ್ತಾಂತವನ್ನು ತೆರೆದಿಟ್ಟಿದ್ದಾಳೆ.
ಕಿಶೋರ್‌ನ ಮಾವನ ವಿನಂತಿ ಮೇರೆಗೆ ನಾನು ಫೆ. 13, 2007ರಲ್ಲಿ ಆತನನ್ನು ಮಂಗಳೂರಿನಲ್ಲಿ ರಿಜಿಸ್ಟ್ರಾರ್ ವಿವಾಹ ಆಗಿ ಬಂದರ್‌ನಲ್ಲಿರುವ ದೇವಿ ದೇವಸ್ಥಾನವೊಂದರಲ್ಲಿ ಹಿಂದೂ ಧರ್ಮದ ಪ್ರಕಾರ ಮದುವೆಯಾಗಿದ್ದವು. ಆ ಸಂದರ್ಭದಲ್ಲಿ ಅಲ್ಲಿನ ಅರ್ಚಕ ತಮ್ಮಿಬ್ಬರ ಸಹಿಯನ್ನು ಪಡೆದುಕೊಂಡರು. ಆಗ ನನ್ನ ಪರವಾಗಿ ತಾಯಿ ಆಶಾ ಹಾಗೂ ಕಿಶೋರ್ ಪರ ವಾಗಿ ಆತನ ಸ್ನೇಹಿತರಾದ ಗಣೇಶ್ ಮತ್ತು ಭರತ್ ಸಾಕ್ಷಿಗೆ ನಿಂತಿದ್ದರು. ಮದುವೆಯ ಬಳಿಕ ನಾನು ಒಂದೂವರೆ ಲಕ್ಷ ಹಣವನ್ನು ಸೈಟ್ ಖರೀದಿಸಲೆಂದು ನೀಡಿದೆ.
ಫೆ. 23ರಂದು ಆತ ಕತಾರ್‌ಗೆ ಹೋದ. ನಂತರ ನಾನು ನನ್ನ ಮನೆಯಲ್ಲಿ ತಾಯಿ ಜೊತೆ ಇದ್ದೆ. ನಮ್ಮ ಮದುವೆ ವಿಷಯ ಕಿಶೋರ್ ತಾಯಿಗೆ ತಿಳಿದಾಗ ಆತ ಅದನ್ನು ತಾಯಿ ಬಳಿ ನಿರಾಕರಿ ಸಿದ್ದ. ಆದರೂ ಆತ ತನ್ನೊಂದಿಗೆ ಫೋನ್ ಮೂಲಕ ಸಂಪರ್ಕ ಇಟ್ಟುಕೊಂಡಿದ್ದ. ಕಳೆದ ಎಪ್ರಿಲ್ 19ರಂದು ಆತ ಊರಿಗೆ ಬಂದಿದ್ದು ಆಗಲೂ ನನ್ನ ಜೊತೆ ಸಂಪರ್ಕ ಇಟ್ಟುಕೊಂಡು ಮನೆಗೆ ಬಂದು ಹೋಗುತ್ತಿದ್ದ. ಆದರೂ ಆತನ ತಾಯಿ ನಮ್ಮ ಮದುವೆಯನ್ನು ನಿರಾಕರಿಸಿದ್ದರಿಂದ ನಾನು ಕಂಕನಾಡಿ ಠಾಣೆಗೆ ದೂರು ನೀಡಿ ಆತ್ಮಹತ್ಯೆಗೂ ಯತ್ನಿಸಿದೆ.
ಕಂಕನಾಡಿ ಎಸ್‌ಐ ಪ್ರಕಾಶ್ ಆತನನ್ನು ಠಾಣೆಗೆ ಕರೆಸಿ ಮದುವೆ ಯಾಗುವುದಾಗಿ ಮುಚ್ಚಳಿಕೆ ಪಡೆದಿದ್ದರು. ಆ ಸಂದರ್ಭದಲ್ಲಿ ಆತನ ತಾಯಿ ಸುನಿತಾ ವಿದೇಶದಲ್ಲಿದ್ದು ಮಾರ್ಚ್‌ನಲ್ಲಿ ತಾನು ಊರಿಗೆ ಬಂದಾಗ ಹಿಂದೂ ಧರ್ಮದ ಪ್ರಕಾರ ಇಬ್ಬರಿಗೂ ಮದುವೆ ಮಾಡುವ ಭರವಸೆ ನೀಡಿದ್ದರು.
ಅವರು ಹೇಳಿದಂತೆ ನಾನು ಮದುವೆಗಾಗಿ ಕಾಲುಂಗರ, ಕರಿಮಣಿ ಸರ, ಮೂಗುಬೊಟ್ಟು ಎಲ್ಲವನ್ನು ಖರೀದಿಸಿದ್ದೆ. ಕಿಶೋರ್ ಕಟೀಲು ದೇವಸ್ಥಾನಕ್ಕೆ ಹೋಗಿ ಮಾರ್ಚ್ 29ಕ್ಕೆ ಮದುವೆಗಾಗಿ ದಿನ ಕೂಡಾ ನಿಗದಿಗೊಳಿಸಿ ಬಂದಿದ್ದರು. ತಾನು ಆಮಂತ್ರಣ ಪತ್ರಿಕೆ ಮುದ್ರಿಸಿ 24ರಂದು ಎಸ್‌ಐ ಪ್ರಕಾಶ್‌ಗೆ ನೀಡಿದ್ದೆ. ಕಿಶೋರನೂ ಆಮಂತ್ರಣ ಪತ್ರಿಕೆ ಮುದ್ರಿಸಿದ್ದ.
ಆದರೆ 25ಕ್ಕೆ ಠಾಣೆಗೆ ಹೋದ ಕಿಶೋರ್ ರೇಖಾಗೆ ಬೇರೆಯವರ ಜೊತೆ ಮದುವೆ ಫಿಕ್ಸ್ ಆಗಿದೆ ಎಂದು ಕಂಕನಾಡಿ ಠಾಣಾಧಿಕಾರಿ ಪ್ರಕಾಶ್‌ಗೆ ಹೇಳಿದಾಗ ಅದನ್ನವರು ನಿರಾಕರಿಸಿದ್ದರು. 28ಕ್ಕೆ ಕಟೀಲಿಗೆ ಹೋದ ಕಿಶೋರ್‌ನ ತಂಗಿ ವಿದ್ಯಾ ಮತ್ತು ಆಕೆಯ ಗಂಡ, ರೇಖಾಳ ತಂದೆ ತೀರಿ ಹೋಗಿದ್ದು ನಾಳಿನ ಮದುವೆ ರದ್ದು ಮಾಡಿ ಎಂದಿದ್ದರು. ಇದೇ ದಿನ ನಾನು ಕೂಡಾ ಕಟೀಲಿಗೆ ಹೋಗಿದ್ದರಿಂದ ಈ ವಿಷಯ ತಿಳಿಯಿತು. 29ಕ್ಕೆ ಮಧ್ಯಾಹ್ನ 11.25ಕ್ಕೆ ಮುಹೂರ್ತ ನಿಗದಿ ಮಾಡಿದ್ದು ನಾನು ತಾಯಿ ಹಾಗೂ ಕುಟುಂಬಸ್ಥರ ಜೊತೆ ಮದುಮಗಳಾಗಿ ಬೆಳಿಗ್ಗೆ ಒಂಭತ್ತು ಗಂಟೆಗೆ ಹೋಗಿದ್ದೆ. ಆದರೆ ಮಧ್ಯಾಹ್ನ ಒಂದು ಗಂಟೆಯವರೆಗೂ ಕಿಶೋರ್ ಹಾಗೂ ಆತನ ಮನೆಯವರ ಪತ್ತೆ ಇರಲಿಲ್ಲ.
ನಾನು ಮತ್ತೆ ಕಂಕನಾಡಿ ಠಾಣೆಗೆ ಹೋದಾಗ ಅಲ್ಲಿ ಡಿವೈಎಸ್ಪಿ ಗಿರೀಶ್ ಇದ್ದರು. ಅವರಿಗೆ ವಿಷಯ ತಿಳಿಸಿ ಅವರ ಜೊತೆ ಕಿಶೋರ್‌ನ ಮನೆಗೆ ಹೋದಾಗ ಅಲ್ಲಿ ಗಂಡಸರ್ಯಾರೂ ಇರಲಿಲ್ಲ. ಕಿಶೋರ್‌ನ ತಾಯಿಯನ್ನು ಠಾಣೆಗೆ ತಂದ ಡಿವೈಎಸ್ಪಿ ಗಿರೀಶ್ ಮರುದಿನ ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ಹೋಂಗೆ ಹಾಕಿದರು. ಬಳಿಕ ಅವರು ಜಾಮೀನಿನಲ್ಲಿ ಹೊರಬಂದಿದ್ದಾರೆ.
ನಾನು ಕಿಶೋರ್, ಆತನ ತಾಯಿ ಸಹಿತ 11 ಮಂದಿ ಮೇಲೆ ದೂರು ನೀಡಿದ್ದೇನೆ. ಆದರೂ ಅವರನ್ನು ಬಂಧಿಸಿಲ್ಲ. ಕಿಶೋರ್ ಇದುವರೆಗೂ ನಾಪತ್ತೆಯಾಗಿದ್ದಾನೆ. ಆತ ಕಳೆದ ತಿಂಗಳು 15ಕ್ಕೆ ಮತ್ತೆ ವಿದೇಶಕ್ಕೆ ಹೋಗಬೇಕಿತ್ತು. ಈ ಬಗ್ಗೆ ಪಾಸ್‌ಪೋರ್ಟ್ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಆತ ಹೋಗಿಲ್ಲ ಎಂದರು. ಬಜಪೆ ಎಸ್‌ಐ ಪ್ರಮೋದ್ ಬಳಿ ವಿಷಯ ಹೇಳಿದಾಗ ಅವರು ಹಳದಿ ಕಾರ್ಡ್ ತರುವಂತೆ ಹೇಳಿದ್ದರು. ಅದಕ್ಕಾಗಿ ಐ.ಜಿ. ಕಚೇರಿಗೆ ಹೋದಾಗ ಅವರ ಭೇಟಿಗೆ ಕಾರ್ಯದರ್ಶಿ ಅವಕಾಶ ನೀಡಲಿಲ್ಲ ಎಂದೂ ರೇಖಾ ಪತ್ರಕರ್ತರೆದುರು ತನ್ನ ಗೋಳಿನ ಕಥೆ ಹೇಳಿದ್ದಾಳೆ.
ತಾನು ಆತನನ್ನು ಮದುವೆಯಾದ ಸಂದರ್ಭದಲ್ಲೇ ಹಿಂದೂ ಆಗಿದ್ದೇನೆ. ಈಗಲೂ ಆತನ ಜೊತೆ ಬದುಕಲು ಸಿದ್ಧನಿದ್ದೇನೆ. ಆದರೆ ನನಗೆ ಎಸ್‌ಐ ಪ್ರಕಾಶ್ ಮತ್ತು ಡಿವೈಎಸ್ಪಿ ಗಿರೀಶ್ ಹೊರತುಪಡಿಸಿದರೆ ಇತರರ ಕಾನೂನು ನೆರವು ಸಿಗುತ್ತಿಲ್ಲ. ಇದರ ಹಿಂದೆ ರಾಜಕಾರಣಿಗಳ ಒತ್ತಡ ಅಡಗಿದೆ ಎಂದು ದೂರಿದ್ದಾಳೆ.

Mar 26, 2010
ಸಬ್ಜೈಲ್ ಖೈದಿ ಸಾವು. ಕತ್ತು ಸೀಳಿ ಕೊಲೆಗೈದಿದ್ದ ಆರೋಪಿ

ಮಂಗಳೂರು: ಯುವಕನೊಬ್ಬನನ್ನು ಚೂರಿಯಿಂದ ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾಧೀನ ಖೈದಿಯಾಗಿ ನಗರದ ಸಬ್ ಜೈಲಿನಲ್ಲಿದ್ದ ಆರೋಪಿ ಯೋರ್ವ ಅಸ್ತಮಾ ಖಾಯಿಲೆ ಉಲ್ಬಣಿಸಿ ಮೃತಪಟ್ಟ ಘಟನೆ ನಡೆದಿದೆ.
ಕಾಲಿನಲ್ಲಿ ಕೆಟ್ಟನೀರು ಶೇಖರಣೆಯಾಗಿ, ತೀವ್ರ ರೀತಿಯ ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದ ಆರೋಪಿಯನ್ನು ಕಳೆದ ಮಾರ್ಚ್ 6 ರಂದು ಚಿಕಿತ್ಸೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಆರೋಪಿ ಮೊನ್ನೆ ತಡರಾತ್ರಿ ಮೃತ ಪಟ್ಟಿದ್ದಾನೆ.
2008 ನೇ ಡಿಸೆಂಬರ್ 18ರಂದು ನಗ ರದ ಲೇಡಿಗೋಷನ್ ಆಸ್ಪತ್ರೆಯ ಮುಂಭಾಗ ದಲ್ಲಿ ಪೃಥ್ವಿರಾಜ್ ಯಾನೆ ಮಾಧವ್ ಎಂಬವರನ್ನು ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿ ಚೂರಿಯಿಂದ ಇರಿದು ಕೊಲೆಗೈದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕೇರಳದ ತ್ರಿಶೂರ್ನ ಅಬೂಬಕ್ಕರ್(45)ಎಂಬಾತನೇ ಇದೀಗ ಮೃತ ಪಟ್ಟ ಖೈದಿಯಾಗಿದ್ದಾನೆ.
ಕೊಲೆ ನಡೆದ ದಿನ ಲೇಡಿಗೋಷನ್ ಆಸ್ಪತ್ರೆಯ ಆವರಣದಲ್ಲಿ ನಿಂತಿದ್ದ ಅಬೂಬಕ್ಕರ್ ಆಸ್ಪತ್ರೆಗೆ ಬರುತ್ತಿದ್ದ ಮಹಿಳೆ ಯರನ್ನು ಚುಡಾಯಿಸುತ್ತಿದ್ದು ಇದನ್ನು ಪೃಥ್ವಿರಾಜ್ ಪ್ರಶ್ನಿಸಿದ್ದನ್ನೇ ನೆಪಮಾಡಿಕೊಂಡ ಆರೋಪಿ ಅಬೂಬಕ್ಕರ್ ಬ್ಲೇಡ್ ನಿಂದ ಪೃಥ್ವಿರಾಜ್ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿದ್ದಲ್ಲದೆ ಇದನ್ನು ತಡೆಯಲು ಬಂದಿದ್ದ ಇನ್ನಿಬ್ಬರ ಮೇಲೂ ಆರೋಪಿ ಹಲ್ಲೆ ನಡೆಸಿ ಬಳಿಕ ತಲೆ ಮರೆಸಿಕೊಂಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬಂದರು ಪೊಲೀಸರು ಕೆಲ ದಿನಗಳ ಅವಧಿಯಲ್ಲೆ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು, ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಕಾರಣ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಕಳೆದ ಒಂದೂವರೆ ವರುಷದಿಂದ ಆರೋಪಿ ಜೈಲಿನಲ್ಲಿದ್ದು ಕಳೆದ ಕೆಲ ಸಮಯದಿಂದ ಆರೋಪಿಯ ಆರೋಗ್ಯದಲ್ಲಿ ತೀವ್ರ ವೈಪರಿತ್ಯ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜೈಲಿನಲ್ಲಿರುವಾಗ ಈತನಲ್ಲಿ ತೀವ್ರವಾದ ಅಸ್ತಮಾ ಕಾಯಿಲೆ ಕಂಡು ಬಂದಿತ್ತಲ್ಲದೆ, ಒಂದು ಕಾಲು ಕೆಟ್ಟ ನೀರು ತುಂಬಿಕೊಂಡು ಊದಿಕೊಂಡಿತ್ತು, ಆದರೆ ಈತನ ಸಾವಿಗೆ ಇದೊಂದೆ ಕಾರಣ ಅಲ್ಲ ಎಂದಿರುವ ವೈದ್ಯರು ಈತ ಏಡ್ಸ್ ಪೀಡಿತನಾಗಿದ್ದ ಎಂದು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕ ಮನೆ ಮಂದಿ ಶವವನ್ನು ಊರಿಗೆ ತೆಗೆದುಕೊಂಡು ಹೋಗಿದ್ದಾರೆಂದು ತಿಳಿದು ಬಂದಿದೆ.
ಮಗಳ ರಕ್ಷಣೆಗೆ ತಂದೆಯ ಮೊರೆ:ಕಡೆಕಾರ್ ಪ್ರಕರಣದ ಹಿಂದೆ ವೇಶ್ಯಾವಾಟಿಕೆ ಜಾಲದ ಶಂಕೆ
ಉಡುಪಿ: ಮಗಳ ಮೇಲೆ ತಂದೆ ಅತ್ಯಾಚಾರವೆಸಗಿದ ಎಂಬ ಆರೋಪ ಮತ್ತು ನಂತರ ನಡೆದ ಹಲ್ಲೆ ಇತ್ಯಾದಿ ಪ್ರಕರಣದ ಹಿಂದೆ ಹೆಣ್ಣು ಮಾರಾಟ ಹಾಗೂ ಹೈಟೆಕ್ ವೇಶ್ಯಾವಾಟಿಕೆ ಜಾಲವೊಂದು ಅತ್ಯಂತ ವ್ಯವಸ್ಥಿತವಾಗಿ ಕೆಲಸ ಮಾಡಿರುವ ಬಗ್ಗೆ ಭಾರೀ ಶಂಕೆ ವ್ಯಕ್ತವಾಗಿದೆ.
ಕಟಪಾಡಿ, ಕಲ್ಯಾಣಪುರ ಕಡೆಕಾರು ಕಿದಿಯೂರು ಮತ್ತು ಅಂಬಲಪಾಡಿ ಗ್ರಾಮಗಳಿಗೆ ಸೇರಿದ ಹಾಗೂ ಈ ವ್ಯಾಪ್ತಿಗಳಲ್ಲಿ ಗುಪ್ತವಾಗಿ ಕಾರ್ಯಾಚರಿ ಸುತ್ತಿರುವ ಕೆಲವು ಮಂದಿ ಸಂಶಯಾಸ್ಪದ ವ್ಯಕ್ತಿಗಳು ಈ ಇಡೀ ಪ್ರಕರಣದ ಹಿಂದೆ ಕೈಯಾಡಿಸಿರುವುದು ಇದೀಗ ಸ್ಪಷ್ಟವಾಗಿದೆ.
ಗಂಡ ಸೇಸಪ್ಪ ಸಾಲ್ಯಾನ್ (41) ಹಾಗೂ ಹೆಂಡತಿ ಅನಿತಾ ಇವರ ನಡುವಿನ ಜಗಳವನ್ನು ಈ ವ್ಯಕ್ತಿಗಳು ತಮ್ಮ ಸ್ವಾರ್ಥ ಲಾಭಕ್ಕಾಗಿ ದುರುಪಯೋಗಪಡಿಸಿರುವುದು ಪ್ರಸ್ತುತ ಖಚಿತವಾಗಿದೆ. ಗಂಡನ ಮೇಲೆ ಹೆಂಡತಿಗಿದ್ದ ಅಸಮಾಧಾನ ಮತ್ತು ಅಪನಂಬಿಕೆಯನ್ನು ಸಮರ್ಥವಾಗಿ ದುರ್ಬಳಕೆ ಮಾಡಿಕೊಂಡು ಈ ವ್ಯಕ್ತಿಗಳು ಹೆಂಡತಿಯ ಮೂಲಕವೇ ಗಂಡನನ್ನು ರಹಸ್ಯವಾಗಿ ಕೊಲೆ ಮಾಡಿಸುವ ಸಂಚು ರೂಪಿಸಿ ಅಂತಿಮ ಹಂತದಲ್ಲಿ ಈ ಪ್ರಯತ್ನದಲ್ಲಿ ವಿಫಲರಾದರು ಎಂದು ಶಂಕಿಸಲಾಗಿದೆ.
ವಿವಿಧ ಆಸೆ ಆಮಿಷಗಳನ್ನು ಒಡ್ಡಿ ಮಗಳನ್ನು ಸಹ ತಂದೆಯ ವಿರುದ್ಧ ಎತ್ತಿ ಕಟ್ಟಲು ಯಶಸ್ವಿಯಾದ ಈ ವ್ಯಕ್ತಿಗಳು ತಾವು ರೂಪಿಸಿದ ಸೇಸಪ್ಪ ಸಾಲ್ಯಾನ್ ಹತ್ಯೆ ಸಂಚನ್ನು ಅವರ ಪತ್ನಿ ಹಾಗೂ ಮಗಳ ಮೂಲಕವೇ ಕಾರ್ಯರೂಪಕ್ಕಿಳಿಸಲು ಯತ್ನಿಸಿ ವಿಫಲ ರಾದರು.
ರಾತ್ರಿಯ ಊಟದ ಜೊತೆಗೆ ಸೇಸಪ್ಪರ ಅರಿವಿಗೆ ಬಾರದಂತೆ ಸಯನೈಡ್ ಬೆರೆಸಿ ಕೊಡುವ ಮೂಲಕ ಅವರನ್ನು ಕೊಲೆ ಮಾಡುವುದು ಹಾಗೂ ಕೊನೆಗೆ ಸೇಸಪ್ಪ ಸಾಲ್ಯಾನ್ ಆತ್ಮಹತ್ಯೆ ಮಾಡಿಕೊಂಡರೆಂದು ಕತೆ ಕಟ್ಟಿ, ಪ್ರಕರಣಕ್ಕೆ ಮಂಗಳ ಹಾಡುವುದು ಈ ಸಂಚಿನ ಉದ್ದೇಶವಾಗಿರಬಹುದೆಂದು ಸಂಶಯಿಸಲಾಗಿದೆ.
ತಾಯಿ ಹಾಗೂ ಮಗಳು ಸೇಸಪ್ಪರನ್ನು ಕೊಲ್ಲುವ ಉದ್ದೇಶದಿಂದ ಸಯನೈಡ್ ಸಂಗ್ರ ಹಿಸಲು ಗುಟ್ಟಾಗಿ ಪ್ರಯತ್ನಿಸಿದ ರಾದರೂ, ಈ ಗುಟ್ಟು ಗುಟ್ಟಾಗಿಯೇ ಉಳಿಯದೆ ಬಯಲಾದ ಹಿನ್ನಲೆಯಲ್ಲಿ ಹತ್ಯೆ ಸಂಚು ವಿಫಲಗೊಂಡಿತೆಂದು ಹೇಳಲಾಗಿದೆ. ಸೇಸಪ್ಪರ ಪ್ರಕಾರ ಪತ್ನಿ ಅನಿತಾ ಕಳೆದ ಕೆಲವು ವರ್ಷಗಳಿಂದ ಪರ ಪುರುಷರೊಂದಿಗೆ ಅಕ್ರಮ ಸಂಬಂಧದಲ್ಲಿದ್ದಾಳೆ. ಐದು ವರ್ಷಗಳ ಹಿಂದೆ ಈ ಬಗ್ಗೆ ಬಂಧುಗಳನ್ನು ಸೇರಿಸಿ ಮನೆಯಲ್ಲಿ ಮಾತುಕತೆ ನಡೆಸಲಾಗಿದೆ. ಮಾತ್ರವಲ್ಲ, ಮಾತುಕತೆ ಬಳಿಕ ಸಂಬಂಧಿಗಳ ಸಮ್ಮುಖವೇ ಪತ್ನಿ ಅನಿತಾ ವರ್ತೆ ಪಂಜುರ್ಲಿ ದೈವದ ಎದುರು ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ಪ್ರಮಾಣವನ್ನೂ ಮಾಡಿದ್ದಳಂತೆ.
ಅನಿತಾ, ಸೇಸಪ್ಪ ಸಾಲ್ಯಾನ್ರವರ ಮಾವನ ಮಗಳು. ಸೇಸಪ್ಪರನ್ನು ಮದುವೆ ಆಗುವ ಮೊದಲಿನಿಂದಲೂ ಈಕೆಯ ಗುಣ ನಡತೆ ಅಷ್ಟೇನೂ ಚೆನ್ನಾಗಿರಲಿಲ್ಲ ಎಂಬುದು ಇವರ ಸಂಬಂಧಿಕರ ಅಭಿಪ್ರಾಯ.
ಮದುವೆಯಾಗಿ ಪತ್ನಿಯಿಂದಲೇ ತಿರಸ್ಕರಿಸಲ್ಪಟ್ಟ ನಮ್ಮ ನೆಂಟನೇ ಕಳೆದ ವರ್ಷದಿಂದ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟು ಕೊಂಡಿದ್ದಾನೆ. ನಾನಿಲ್ಲದ ವೇಳೆ ಮನೆಗೆ ಬರುವ ಈತನ ಹಿಡಿತಕ್ಕೆ ಸಿಲುಕಿರುವ ಪತ್ನಿ ಇದೀಗ ಆತನ ಆಣತಿಯಂತೆ ತನ್ನ ವಿರುದ್ದ ತಿರುಗಿ ಬಿದ್ದಿದ್ದಾಳೆ ಎಂದು ಸೇಸಪ್ಪ ದೂರಿದ್ದಾರೆ. ಪತ್ನಿಯನ್ನು ಹಿಡಿತದಲ್ಲಿಟ್ಟುಕೊಂಡಿರುವ ಈ ವ್ಯಕ್ತಿ ಪ್ರಸ್ತುತ ಮಗಳನ್ನೂ ಒಳಗೆ ಹಾಕಿದ್ದಾನೆಂದು ಆರೋಪಿಸಿರುವ ಸೇಸಪ್ಪ ಇದೀಗ ಈತನೇ ತನ್ನ ಪತ್ನಿ ಹಾಗೂ ಮಕ್ಕಳನ್ನು ಹಿಡಿತದಲ್ಲಿಟ್ಟು ಕೊಂಡು ತನ್ನ ವಿರುದ್ದ ಷಡ್ಯಂತ್ರ ರೂಪಿಸುತ್ತಿದ್ದಾನೆಂದು ಅಪಾದಿಸಿದ್ದಾರೆ. ಇಬ್ಬರು ಅಪ್ರಾಪ್ತ ಪ್ರಾಯದ ಹೆಣ್ಣು ಮಕ್ಕಳು (ಒಬ್ಬಾಕೆ 10ನೇ ತರಗತಿ, ಹಾಗೂ ಇನ್ನೊಬ್ಬಾಕೆ ಎಂಟನೆ ತರಗತಿ ಹಾಗೂ ಪತ್ನಿಯನ್ನು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಈತ ಹಾಗೂ ಇನ್ನಿಬ್ಬರು ವ್ಯಕ್ತಿಗಳು ಮುಂದಿನ ದಿನಗಳಲ್ಲಿ ಇವರನ್ನು ತಮ್ಮ ದಂಧೆಗಳಿಗೆ ದುರುಪಯೋಗಪಡಿಸುವ ಸಾಧ್ಯತೆಗಳಿವೆ ಎಂದೂ ಸೇಸಪ್ಪ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಮಗಳ ರಕ್ಷಣೆಗೆ ಮೊರೆ
ಅಪ್ರಾಪ್ತ ಪ್ರಾಯದ ಮಗಳನ್ನು ಪತ್ನಿ ಹಾಗೂ ಪರ ಪುರುಷರ ಹಿಡಿತದಿಂದ ಕೂಡಲೇ ಬಿಡುಗಡೆಗೊಳಿಸುವಂತೆ ಸೇಸಪ್ಪ ಸಿಡಬ್ಲ್ಯುಸಿಗೆ ದೂರು ನೀಡಿದ್ದಾರೆ.
ದಂಧೆಕೋರರು ಮಗಳನ್ನು ಶಾಲೆಗೆ ಕಳುಹಿಸುತ್ತಿಲ್ಲ, ಎಪ್ರಿಲ್ ಒಂದರಿಂದ ಆರಂಭಗೊಳ್ಳುವ 10ನೇ ತರಗತಿ ಪರೀಕ್ಷೆಗೂ ಕಳುಹಿಸದೇ ಮಗಳ ಶೈಕ್ಷಣಿಕ ಭವಿಷ್ಯವನ್ನು ಹಾಳು ಮಾಡುವ ಸಂಚು ಹೆಣೆದಿದ್ದಾರೆ. ಈ ಸಂಚು ಯಶಸ್ವಿಯಾದರೆ ಇದೇ ವ್ಯಕ್ತಿಗಳು ಮಗಳನ್ನು ತಮ್ಮ ಸ್ವಾರ್ಥ ಲಾಭಗಳಿಗೆ ದುರ್ಬಳಕೆ ಮಾಡಬಹುದು. ಆದುದರಿಂದ ಮಗಳನ್ನು ರಕ್ಷಿಸಿ ಶಾಲೆಗೆ ಕಳುಹಿಸುವಂತೆ ಮಾಡಬೇಕೆಂದು ಸೇಸಪ್ಪ ಮನವಿ ಮಾಡಿದ್ದಾರೆ.

Mar 25, 2010
ಉಯ್ಯಾಲೆಗೆ ಸಿಲುಕಿ ಬಾಲಕಿ ಮೃತ್ಯುವಶ
ಮಂಗಳೂರು: ಮನೆಯಂಗಳದಲ್ಲಿ ಉಯ್ಯಾಲೆಯಾಡುತ್ತಿದ್ದ ವೇಳೆ ಬಾಲಕಿ ಸೀರೆಯ ಕುಣಿಕೆಗೆ ಸಿಲುಕಿ ದಾರುಣವಾಗಿ ಮೃತ್ಯುವಶವಾದ ಘಟನೆ ಕಾಸರಗೋಡು ಬಳಿಯ ಪೆರಿಯ ಎಂಬಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಪೆರಿಯ ಸರಕಾರಿ ಹೈಯರ್ ಶಾಲೆ ವಿದ್ಯಾರ್ಥಿನಿ ಫೆಮಿನಾ(11) ಎಂದು ಗುರುತಿಸಲಾಗಿದೆ. ಪೆರಿಯ ಬಜಾರಿನ ಅಬೂಬಕ್ಕರ್-ಪೌಝಿಯಾ ದಂಪತಿಯ ಪುತ್ರಿಯಾದ ಈಕೆಯ ಕುತ್ತಿಗೆಗೆ ಉಯ್ಯಾಲೆಯ ಕುಣಿಕೆ ಸಿಕ್ಕಿ ಒದ್ದಾಡುತ್ತಿದ್ದಾಗ ಸ್ಥಳೀಯರು ರಕ್ಷಿಸಲು ಯತ್ನಿಸಿದರೂ ಫಲಪ್ರದವಾದರೆ ಮೃತಪಟ್ಟಿರುತ್ತಾಳೆ.
ಚೆಕ್ ಅಮಾನ್ಯ: ಆರೋಪಿಗೆ ಶಿಕ್ಷೆ
ಬಜಪೆ: ಚೆಕ್ ಅಮಾನ್ಯ ಪ್ರಕರಣವೊಂದರಲ್ಲಿ ಶಿಕ್ಷೆಗೊಳಪಟ್ಟ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಮರವೂರು ನಿವಾಸಿ ಮಯ್ಯದ್ದಿ ಎಂಬಾತ ಬಜಪೆಯ ವ್ಯಕ್ತಿಯೊಬ್ಬರಿಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 87,000ರೂ. ನೀಡಲು ಬಾಕಿ ಇದ್ದು ಈ ಬಗ್ಗೆ ನೀಡಿದ್ದ ಚೆಕ್ಗಳು ಅಮಾನ್ಯಗೊಂಡಿದ್ದವು. ಫಿರ್ಯಾದಿದಾರರು ಈ ಬಗ್ಗೆ ಮೊಕದ್ದಮೆ ದಾಖಲಿಸಿದ್ದು ಆರೋಪಿ ತಲೆಮರೆಸಿಕೊಂಡಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಎರಡೂ ಪ್ರಕರಣಗಳಲ್ಲೂ ಆರೋಪಿಗೆ ತಲಾ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ ನ್ಯಾಯಾಲಯದ ಶಿಕ್ಷೆ ಘೋಷಣೆಯಾದ ನಂತರವೂ ಆರೋಪಿಯ ಪತ್ತೆಯಾಗಿರಲಿಲ್ಲ. ಇದೀಗ ಬಜಪೆ ಪೊಲೀಸರು ಸದ್ರಿ ಆರೋಪಿಯನ್ನು ಮಂಚಕಲ್ನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯದಲ್ಲಿ ಹಣ ಹಿಂತಿರುಗಿಸಿ ಶಿಕ್ಷೆಯಿಂದ ಪಾರಾಗುವ ಅವಕಾಶ ನೀಡಿದಾಗಲೂ ಆರೋಪಿ ಇದಕ್ಕೆ ನಿರಾಕರಿಸಿದ್ದರಿಂದ ಜೈಲು ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ಬಜ್ಪೆ ಎಸ್ಐ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ಹೆಡ್ ಕಾನ್ಸ್ಟೇಬಲ್ ಅರುಣ್ ಕುಮಾರ್, ಪಿಸಿಗಳಾದ ಜಬ್ಬಾರ್, ಬಾಬು ಹಾಗೂ ಕೃಷ್ಣ ಭಾಗವಹಿಸಿದ್ದರು.
ಮೆಕ್ಯಾನಿಕ್ ಸಾವು: ಕೊಲೆ ಪ್ರಕರಣ ದಾಖಲು
ಬಂಟ್ವಾಳ : ದ್ವಿಚಕ್ರ ವಾಹನ ಮೆಕ್ಯಾನಿಕ್ ಬಿಸಿರೋಡ್ ಭಂಡಾರಿಬೆಟ್ಟುವಿನ ಸದಾಶಿವ ಆಚಾರ್ಯರವರ ಶಂಕಾಸ್ಪದ ಸಾವು ಕೊಲೆ ಪ್ರಕರಣವಾಗಿ ಪರಿವರ್ತನೆಯಾಗುವ ಮೂಲಕ ಹೊಸ ತಿರುವು ಪಡೆದುಕೊಂಡಿದೆ.
ಉಜಿರೆಗೆ ಕೆಲಸಕ್ಕೆಂದು ಹೋದ ಸದಾಶಿವ ಆಚಾರಿಯವರ ಮೃತ ದೇಹ 18 ದಿನಗಳ ಬಳಿಕ ಮಹಾರಾಷ್ಟ್ರದ ರತ್ನಗಿರಿ ಪೊಲೀಸ್ ಠಾಣಾ ವ್ಯಾಪ್ತೀಯ ಚಿಪ್ಲೋನ್ ಎಂಬಲ್ಲಿನ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಸದಾಶಿವರವರ ಪತ್ನಿ ಸಂಶಯಾಸ್ಪದ ಸಾವಿನ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಎಸ್ಪಿಯ ಸೂಚನೆಯಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಕನಿಷ್ಟ 4 ರಿಂದ 6ಜನ ಶಾಮೀಲಾಗಿರುವ ಬಗ್ಗೆ ಗುಮಾನಿ ಇದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದಾಶಿವ ಆಚಾರ್ಯರವರ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಕೂಡಾ ಬಂಟ್ವಾಳ ಪೊಲೀಸರಿಗೆ ತಲುಪಿಲ್ಲವೆನ್ನಲಾಗಿದ್ದು, ಅವರನ್ನು ಯಾವ ರೀತಿ ಕೊಲೆಗೈಯ್ಯಲಾಯಿತು ಅಥವಾ ಅವರೇ ನೀರಿಗೆ ಬಿದ್ದು ಸತ್ತರೇ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಿಂದ ಗೋತ್ತಾಗಬೇಕಾಗಿದ್ದು ಪೊಲೀಸರು ಈ ವರದಿಗಾಗಿ ಕಾಯುತ್ತಿದ್ದಾರೆ. ಒಟ್ಟಿ ನಲ್ಲಿ ಈ ಸಾವು ಸ್ಥಳಿಯವಾಗಿ ಕುತೂಹಲ ಸೃಷ್ಟಿಸಿದೆ.
ಕೋರ್ಟ್ಗೆ ಗೈರು: ಪ್ರಕರಣ ದಾಖಲು
ಮಂಗಳೂರು: ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಂಟ್ವಾಳದ ಪರ್ವೇಜ್(27) ಎಂಬಾತನ ವಿರುದ್ಧ ಮಂಗಳೂರಿನ 2ನೇ ಹೆಚ್ಚುವರಿ ನ್ಯಾಯಾಲಯ ವಾರಂಟ್ ಹೊರಡಿಸಿದೆ. ಅಲ್ಲದೆ ಆತನ ವಿರುದ್ಧ ಬಂದರು ಪೊಲೀಸರು ತಲೆಮರೆಸಿದ ಬಗ್ಗೆ ನಿನ್ನೆ ಪ್ರಕರಣ ದಾಖಲಿಸಿದ್ದಾರೆ. ಹಳೆ ಪ್ರಕರಣದಲ್ಲಿ ಜಾಮೀನು ಬಿಡುಗಡೆಯಾಗಿದ್ದ ಆರೋಪಿ ಫರ್ವೇಜ್, 2009 ಡಿ.10ರಿಂದ 2010 ಮಾ. 24ರವರೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿದ್ದಾಗಿ ಎಸ್ಐ ಮಂಜುನಾಥ್ ನ್ಯಾಯಾಲಯ ನಿರ್ದೇಶನದಂತೆ ಪ್ರಕರಣ ದಾಖಲಿಸಿದ್ದಾರೆ.

Mar 24, 2010
ಎಎಸ್ಐ ಪತ್ನಿ ಆತ್ಮಹತ್ಯೆ: ಕಾನ್ಸ್ಟೇಬಲ್ ಅಮಾನತು
ಕಾಸರಗೋಡು: ಎ.ಎಸ್.ಐಯ ಪತ್ನಿ ರೈಲಿನಡಿಗೆ ಹಾರಿ ಆತ್ಮಹತ್ಯೆಗೈದ ಘಟನೆಗೆ ಸಂಬಂಧಿಸಿ ಪೊಲೀಸ್ ಪೇದೆಯೋರ್ವನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಹಿರಿಯ ಅಧಿಕಾರಿಯ ಪತ್ನಿಯನ್ನೇ ಚಕ್ಕಂದಕ್ಕೆ ಬಳಸಿ ಆಕೆಯ ಆತ್ಮಹತ್ಯೆಗೆ ಕಾರಣನಾದ ಆರೋಪದಲ್ಲಿ ಕಾನ್ಸ್ಟೇಬಲ್ ಅಮಾನತಾಗಿದ್ದಾನೆ. ಕಾಸರಗೋಡು ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್ಸ್ಟೇಬಲ್, ಪಿಲಿಕ್ಕೋಡು ನಿವಾಸಿಯೂ ಆಗಿರುವ ಸುರೇಶ್ ಬಾಬು ಅಮಾನತು ಶಿಕ್ಷೆಗೊಳಗಾದವ. ಜಿಲ್ಲಾ ಪೊಲೀಸಧಿಕಾರಿ ಪಿ. ಪ್ರಕಾಶ್ ಈ ಕ್ರಮ ತೆಗೆದುಕೊಂಡಿದ್ದಾರೆ.
ಕಾಸರಗೋಡು ಕಂಟ್ರೋಲ್ ರೂಂನ ಎಎಸ್ಐ ರವೀಂದ್ರನ್ ಎಂಬವರ ಪತ್ನಿ ಪ್ರಸೀದಾ(34) ಆತ್ಮಹತ್ಯೆಗೈದವರು. ಈ ತಿಂಗಳ 12ರಂದು ಬೆಳಿಗ್ಗೆ ನೀಲೇಶ್ವರ ಪಳ್ಳಿಕೆರೆ ಗೇಟ್ ಸಮೀಪ ರೈಲು ಹಳಿಯಲ್ಲಿ ಇವರ ಶವ ಪತ್ತೆಯಾಗಿತ್ತು. ಇದರ ಹಿಂದಿನ ದಿನ ತಡರಾತ್ರಿ ಎಎಸ್ಐ ರವೀಂದ್ರನ್ ಮನೆಗೆ ಬಂದಾಗ, ಕಾನ್ಸ್ಟೇಬಲ್ ಸುರೇಶ್ ಬಾಬುನನ್ನು ಇವರ ಮನೆಯೊಳಗೆ ಕಾಣಬಾರದ ಸ್ಥಿತಿಯಲ್ಲಿ ಕಂಡಿದ್ದರು. ಪರಾರಿಯಾಗಲೆತ್ನಿಸಿದ ಸುರೇಶ್ ಬಾಬುವಿನ ಮುಖ ಹಾಗೂ ಕೈಗೆ ರವೀಂದ್ರನ್ ಕಚ್ಚಿ ಗಾಯಗೊಳಿಸಿದ್ದರು. ಮನೆಯಿಂದ ಸುರೇಶ್ ಬಾಬುವಿನ ಮೊಬೈಲ್ ಕೂಡ ಪತ್ತೆಯಾಗಿತ್ತು.
ರವೀಂದ್ರನ್ ನೀಡಿದ ದೂರಿನಂತೆ ಸುರೇಶ್ ಬಾಬುವನ್ನು ನೀಲೇಶ್ವರ ಸರ್ಕಲ್ ಇನ್ಸ್ಪೆಕ್ಟರ್ ವಿಚಾರಣೆಗೆ ಒಳಪಡಿಸಿ ಜಿಲ್ಲಾ ಪೊಲೀಸ್ ಅಧಿಕಾರಿಗೆ ವರದಿ ಸಲ್ಲಿಸಿದ್ದರು. ಇದರಂತೆ ಇದೀಗ ಕ್ರಮ ಜರಗಿಸಲಾಗಿದೆ.

ಮಂಗಳೂರು: ಉರೂಸ್ ಕಮಿಟಿಯಿಂದ ವಜಾ
ಮಂಗಳೂರು: ಅವ್ಯವಹಾರದಲ್ಲಿ ತೊಡಗಿದ್ದ ಆರೋಪ ಎದುರಿಸುತ್ತಿದ್ದ ಉಳ್ಳಾಲ ದಗರ್ಾ ಆಡಳಿತ ಸಮಿತಿಯ ಉಪಾಧ್ಯಕ್ಷ ಹಾಗೂ ಉರೂಸ್ ಸಮಿತಿಯ ಸಂಚಾಲಕ ಅಹ್ಮದ್ ಬಾವಾ ರನ್ನು ಅಧಿಕಾರದಿಂದ ಕಿತ್ತೊಗೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ದರ್ಗಾದ ಕಟ್ಟಡವೊಂದನ್ನು ಬಾಡಿಗೆ ನೀಡಲು 10 ಸಾವಿರ ರೂ. ಅಡ್ವಾನ್ಸ್ ಪಡೆದು ಹಾಗೂ ಬ್ಲ್ಯಾಂಕ್ ಸಿ.ಡಿ.ಗಾಗಿ ಸಾವಿರ ರೂ. ಪಡೆದ ಆರೋಪವೂ ಸೇರಿದಂತೆ ದರ್ಗಾದ ಆಡಳಿತಕ್ಕೆ ಕಳಂಕ ತರುವ ರೀತಿಯಲ್ಲಿ ವ್ಯವಹರಿಸುತ್ತಿದ್ದ ಆರೋಪದಲ್ಲಿ ಅಹ್ಮದ್ ಬಾವಾ ದರ್ಗಾದ ಆಡಳಿತಾ ತ್ಮಕ ಎಲ್ಲಾ ಹುದ್ದೆಗಳನ್ನು ಕಳೆದು ಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ವಿಷಯವಾಗಿ ಕಳೆದ ಮೂರು ವಾರಗಳಿಂದ ಗಲಾಟೆ ಗದ್ದಲ ಗಳು ನಡೆಯುತ್ತಿದ್ದು, ಕಳೆದ ಶುಕ್ರವಾರ ವಿಶೇಷ ಸಮಿತಿ ನಡೆಸಿದ ವಿಚಾರಣೆಯ ನಂತರ ಅಹ್ಮದ್ ಬಾವಾರನ್ನು ಉರೂಸ್ ಕಮಿಟಿ, ದರ್ಗಾ ಕಮಿಟಿ ಹಾಗೂ ಅರೆಬಿಕ್ ಟ್ರಸ್ಟ್ನ ಆಡಳಿತಾತ್ಮಕ ಹುದ್ದೆಗಳಿಂದ ವಜಾಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ. ಇನ್ನು ಚುನಾವಣೆಯ ಮೂಲಕ ಆಯ್ಕೆ ಯಾದ ದರ್ಗಾ ಕಮಿಟಿಯ ಸದಸ್ಯತ್ವ ಸ್ಥಾನದಿಂದಲೂ ವಜಾಗೊಳಿಸುವ ಬಗ್ಗೆ ನಿರ್ಧರಿಸಲಾಗಿದ್ದು, ಇದರ ಅಧಿಕಾರವನ್ನು ಖಾಝಿಯವರಿಗೆ ನೀಡಲಾಗಿದೆ. ಈಗ ಕೇರಳದಲ್ಲಿರುವ ಖಾಝಿ ಇಂದು ಅಥವಾ ನಾಳೆ ಉಳ್ಳಾಲಕ್ಕೆ ಬರಲಿದ್ದು, ಅವರು ತೆಗೆದುಕೊಳ್ಳುವ ನಿರ್ಣಯವೇ ಅಂತಿಮವಾಗಲಿದೆ.
ಒಂದು ಕಾಲದಲ್ಲಿ ಒಳ್ಳೆಯ ವ್ಯವಹಾರದೊಂದಿಗೆ ಜನರ ಮಧ್ಯೆದಲ್ಲಿ ಗುರುತಿಸಿಕೊಂಡಿದ್ದ ಅಹ್ಮದ್ ಬಾವಾ ಇತ್ತೀಚಿನ ದಿನಗಳಲ್ಲಿ ವ್ಯತಿರಕ್ತ ವ್ಯವ ಹಾರಗಳಿಂದ ದರ್ಗಾದಲ್ಲಿ ಹಂಗಾಮಕ್ಕೆ ಕಾರಣರಾಗಿದ್ದಾರೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಿದ್ದಾರೆ. ಅಹ್ಮದ್ ಬಾವಾರ ವರ್ತನೆಯ ಬಗ್ಗೆ ದಗರ್ಾ ಸಮಿತಿಯಲ್ಲಿ ಬಹಳ ಹಿಂದಿ ನಿಂದಲೂ ಆಕ್ಷೇಪಗಳಿತ್ತು.
ದರ್ಗಾದಲ್ಲಿ ಅವ್ಯವಹಾರ ನಡೆಸಿದರೆ ಅದು ಬೇಗನೇ ಬಹಿರಂಗಕ್ಕೆ ಬರುತ್ತದೆ. ಹಿಂದಿನ ಅಧ್ಯಕ್ಷ ಇಬ್ರಾಹಿಂ ಹಾಜಿ ಇಂತಹ ಸಂದರ್ಭದಲ್ಲಿ ಅವ್ಯವ ಹಾರದ ಭಾಗಿದಾರರಿಗೆ ಕೂಡಲೇ ಶಿಕ್ಷೆ ವಿಧಿಸಿ ಪ್ರಕರಣ ಹೆಚ್ಚು ಚರ್ಚೆಗೆ ಒಳಗಾಗದಂತೆ ಗಮನ ಹರಿಸುತ್ತಿದ್ದರು ಎಂದು ಹೇಳುವ ದರ್ಗಾದ ಭಕ್ತರು ಈಗಿನ ಅಧ್ಯಕ್ಷರಾದ ಯು.ಕೆ. ಮೋನು ಅವರು ಕೂಡಾ ಇಂತಹದ್ದೇ ಆಡಳಿತ ನಡೆಸಲಿ ಎಂದು ಆಶಯ ವ್ಯಕ್ತಪಡಿ ಸುತ್ತಾರೆ.
ಮೋನು ಅವರು ದರ್ಗಾದ ಅಧ್ಯಕ್ಷರಾದ ಬಳಿಕ ಬಹಳಷ್ಟು ಅಭಿವೃದ್ಧಿ ಕೆಲಸಗಳು ನಡೆದಿರುವುದನ್ನು ಇಲ್ಲಿಯ ಭಕ್ತರು ಶ್ಲಾಘಿಸಿದ್ದಾರೆ.
ಸುಳ್ಳು ಹೇಳಿ ನಿಯೋಗಕ್ಕೆ ವಂಚಿಸಿದ ಶಾಸಕ ಭಟ್
ಉಡುಪಿ: ತನ್ನನ್ನು ಭೇಟಿ ಮಾಡಲು ಬಂದ ನಿಯೋಗವೊಂದಕ್ಕೆ ಶಾಸಕ.ಕೆ. ರಘುಪತಿ ಭಟ್ ಸುಳ್ಳು ಹೇಳಿ ವಂಚಿಸಿದ ಘಟನೆ ನಡೆದಿದೆ.
ಅಂಬಲಪಾಡಿ ಶ್ರೀಮಹಾಕಾಳಿ ಜನಾರ್ದನ ದೇವಾಲಯದ ಆವರಣದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದ ದಿನವಾದ ಮಾರ್ಚ್ 21ರಂದು ಈ ಪ್ರಸಂಗ ನಡೆದಿದೆ.
ಉದ್ಘಾಟನಾ ಸಮಾರಂಭದಲ್ಲಿ ರಘುಪತಿ ಭಟ್ಟರು ಅತಿಥಿಯಾಗಿ ಉಪಸ್ಥಿತರಿ ದ್ದರು. ಸಮಾರಂಭ ಮುಗಿದ ಬಳಿಕ ಶಾಸಕರನ್ನು ಕಂಡು ಮಾತನಾಡುವ ಉದ್ದೇಶದಿಂದ ಮೂರು ಮಂದಿಯ ನಿಯೋಗ ಭಟ್ಟರ ಬಳಿಗೆ ತೆರಳಿತ್ತು.
ಉಡುಪಿ ಜಿಲ್ಲಾ ಎಸ್ಡಿಎಂಸಿ ಮತ್ತು ಸಿಎಸಿ ಸಾಧನಾ ಸಮಾವೇಶ ಸಂಚಲನಾ ಸಮಿತಿ ಮೂವರು ಪ್ರಮುಖರಿದ್ದ ಈ ನಿಯೋಗದ ಜೊತೆಗೆ ಅಂಬಲಪಾಡಿಯಲ್ಲಿ ಮಾತನಾಡಲೊಪ್ಪದ ಶಾಸಕರು ಕಿದಿಯೂರು ಶಾಲೆಯಲ್ಲಿ ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮಕ್ಕೆ ನಾನು ಹೋಗುತ್ತಿದ್ದೇನೆ. ನೀವು ಅಲ್ಲಿಗೆ ಬನ್ನಿ ಅಲ್ಲಿ ಮಾತನಾಡೋಣ ಎಂದು ಹೇಳಿದ್ದರೆನ್ನಲಾಗಿದೆ.
ಕಾರ್ಕಳ ಮತ್ತು ಕುಂದಾಪುರ ದಿಂದ ಆಗಮಿಸಿದ ಎಸ್ಡಿಎಂಸಿ ಶಾಲಾಭಿ ವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರುಗಳಿಬ್ಬರ ಜೊತೆಗೆ ಎಸ್ಡಿಎಂಸಿ ಅಧ್ಯಕ್ಷರೂ ಆದ ಮಂಜುನಾಥ್ ಕೊಡಮಾರು, ಕಿದಿಯೂರು ಶಾಲೆಗೆ ಹೋಗಿ ಕಾದು ನಿಂತರೆ, ಕಾದು ನಿಂತದಷ್ಟೇ ಬಂತು. ಭಟ್ಟರು ಬರಲೇ ಇಲ್ಲ ಎಂದು ಹೇಳಲಾಗಿದೆ. ಕಿದಿಯೂರು ಶಾಲೆಯಲ್ಲಿ ನಡೆಯುತ್ತಿದ್ದ ಜನಸ್ಪಂದನಕ್ಕೆ ರಘುಪತಿ ಭಟ್ಟರಿಗೆ ಅಧಿಕೃತ ಆಹ್ವಾನ ಇರಲಿಲ್ಲ. ಕಾಪು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಕಿದಿಯೂರು ಬರುವುದರಿಂದ ಲಾಲಾಜಿ ಮೆಂಡನ್ ಅವರನ್ನಷ್ಟೇ ಆಹ್ವಾನಿಸಲಾಗಿತ್ತು. ರಘುಪತಿ ಭಟ್ಟರು ಅಂಬಲಪಾಡಿಯಲ್ಲಿ ನಿಯೋಗಕ್ಕೆ ಕಿದಿಯೂರಿಗೆ ಹೊಗುವುದಾಗಿ ಸುಳ್ಳು ಹೇಳಿ ಬೇರೆ ಕಡೆಗೆ ಹೋಗಿ ಮೋಸ ಮಾಡಿದ ಬಗ್ಗೆ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಉಡುಪಿ ಬೋರ್ಡ್ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಎಸ್ಡಿಎಂಸಿ -ಸಿಎಸಿ ಸಾಧನಾ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಂಜುನಾಥ ಕೊಡವೂರು ಅವರು ಶಾಸಕ ಭಟ್ಟರ ವಿರುದ್ದ ಭಾಷಣದಲ್ಲಿ ತೀವ್ರವಾಗಿ ಹರಿಹಾಯ್ದುದ್ದರು. ಇದೇ ಕಾರಣಕ್ಕೆ ಭಟ್ಟರು ಎಸ್ಡಿಎಂಸಿ ಅಧ್ಯಕ್ಷರಿಗೆ ಸುಳ್ಳು ಹೇಳಿ ವಂಚಿಸಿ, ದ್ವೇಷ ಸಾಧಿಸಿದರೆಂದು ಶಂಕಿಸಲಾಗಿದೆ.

Mar 23, 2010
ಪೊಲೀಸರು ನನಗೆ ಮರ್ಯಾದೆ ಕೊಡುತ್ತಿಲ್ಲ: ಆಚಾರ್ಯ ಅಳಲು

ಬೆಂಗಳೂರು: ಪೊಲೀಸ್ ಅಧಿಕಾರಿಗಳಿಂದ ತಮ್ಮ ಮಾತಿಗೆ ಕನಿಷ್ಠ ಮನ್ನಣೆಯೂ ದೊರೆಯದ ಗೃಹ ಇಲಾಖೆ ಯಿಂದ ತಮ್ಮನ್ನು ಮುಕ್ತರಾಗಿಸುವಂತೆ ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ತಮ್ಮ ನೇತೃತ್ವದ ಸರ್ಕಾರದಲ್ಲಿ ಉತ್ತಮ ಆಡಳಿತ ನೀಡಬೇಕೆಂಬುದು ನನ್ನ ಬಯಕೆ. ಹಣಕಾಸು ಇಲ್ಲವೆ ಇಂಧನ ಖಾತೆ ನಿರ್ವಹಿಸಲು ಸಿದ್ಧನಿದ್ದೇನೆ. ಈ ಇಲಾಖೆಯಲ್ಲಂತೂ ತಮ್ಮನ್ನು ಮುಂದುವ ರೆಸಬೇಡಿ. ನಿಮ್ಮಿಂದ ಇದು ಸಾಧ್ಯವಾಗ ದಿದ್ದರೆ ನನ್ನನ್ನೂ ಜೂನ್ ವೇಳೆಗೆ ತೆರ ವಾಗಲಿರುವ ರಾಜ್ಯಸಭೆಗೆ ಕಳುಹಿಸಿಕೊ ಡುವಂತೆ ಮನವಿ ಮಾಡಿದ್ದಾರೆ.
ಗೃಹ ಸಚಿವರಾಗಿದ್ದರೂ ತಾವು ಖಾತೆಗೆ ಸಂಬಂಧಿಸಿದ ಯಾವ ವಿಷಯಗಳಲ್ಲೂ ಸ್ವತಂತ್ರರಲ್ಲ. ಪೋಲೀಸ್ ಮಹಾ ನಿರ್ದೇಶಕರಿಂದ ಹಿಡಿದು ಬೆಂಗ ಳೂರು ನಗರದ ಪೋಲೀಸ್ ಕಮೀಷನರ್ ಅವರಂತಹ ಅಧಿಕಾರಿಗಳು ತಮ್ಮ ಮಾತಿಗೆ ಕನಿಷ್ಟ ಮನ್ನಣೆ ನೀಡುತ್ತಿಲ್ಲ.
ಪ್ರಮುಖ ಜಾಗಗಳಲ್ಲಿರುವ ಅಧಿಕಾರಿ ಗಳು ತಾವು ಏನೇ ಸೂಚನೆ ನೀಡಲು ಹೋದರೂ, ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳೋಣ ಎಂದು ಹೇಳುತ್ತಾರೆ.
ಗೃಹ ಖಾತೆಯಂತಹ ಜಾಗದಲ್ಲಿ ಕುಳಿತು ತಾವು ಸರ್ಕಾರಕ್ಕೆ ಕಿರಿ ಕಿರಿ ಉಂಟು ಮಾಡುವ ಅಥವಾ ಮುಖ್ಯಮಂತ್ರಿಗಳಿಗೆ ಅಗೌರವ ಉಂಟು ಮಾಡುವ ಕೆಲಸ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಯಾವ ಕಾರಣಕ್ಕೂ ಗೃಹ ಸಚಿವರಾಗಿ ಕೆಲಸ ಮಾಡಲು ತಾವು ತಯಾರಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಗೃಹ ಖಾತೆ ಪಡೆದರೂ ಮುಕ್ತವಾಗಿ ಕಾರ್ಯ ನಿರ್ವಹಿಸಲಾಗದ ಪರಿಸ್ಥಿತಿ ಆಚಾರ್ಯ ಅವರ ನೋವಿಗೆ ಕಾರಣವಾಗಿದ್ದು ಈ ಅಂಶವನ್ನು ಅವರು ಸಂಘಪರಿವಾರದ ನಾಯಕರಿಗೂ ವಿವರಿಸಿದ್ದಾರೆ.ವಿಧಾನಸೌಧದಲ್ಲಿ ನೀಡಿರುವ ಕಛೇರಿ ಅಕ್ಷರಶಃ ಟಪಾಲು ಕೇಂದ್ರದಂತಾಗಿದೆಯೇ ಹೊರತು ಇನ್ನೇನೂ ಅಲ್ಲ ಎಂದೂ ಆಚಾರ್ಯ ಸಂಕಟ ತೋಡಿಕೊಂಡಿದ್ದಾರೆ.

ಉಡುಪಿ: ಮಧ್ಯರಾತ್ರಿ ಹೋಮ! ಪುತ್ತಿಗೆ ಮಠದಲ್ಲಿ ಅಚ್ಚರಿ ಹುಟ್ಟಿಸಿದ ವಿದ್ಯಮಾನ

ಉಡುಪಿ: ಕಲ್ಸಂಕ ಗುಂಡಿಬೈಲ್ ನಡುವೆ ಹಾಡಿಗಾರ್ ಗೇಟ್ ಬಳಿ ಇರುವ ಪುತ್ತಿಗೆ ಶಾಖಾಮಠದಲ್ಲಿ ಒಂದು ವಾರದಿಂದ ಮಧ್ಯರಾತ್ರಿ ವೇಳೆಯಲ್ಲಿ ಹೋಮ ಹವನ ನಡೆ ಯುತ್ತಿದ್ದು ನಿಜ ವಿಚಾರ ತಿಳಿಯದ ಸುತ್ತುಮುತ್ತಲಿನ ಜನ ಕುತೂಹಲ ಕಾರಿಯಾಗಿ ಮಾತನಾಡಲಾರಂಭಿ ಸಿದ್ದಾರೆ.
ಇತ್ತೀಚಿನವರೆಗೆ ಉಡುಪಿ ಶ್ರೀಕೃಷ್ಣ ಮಠದ ಬಳಿ ಇರುವ ಪುತ್ತಿಗೆ ಮಠದಲ್ಲಿಯೇ ವಾಸ್ತವ್ಯ ಇರುವ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಇತ್ತೀಚಿನ ಕೆಲವು ಸಮಯದಿಂದ ಹಾಡಿಗಾರ್ ಗೇಟ್ ಬಳಿ ಇರುವ ಅನಂತ ನಿಲಯ ಹೆಸರಿನ ಪುತ್ತಿಗೆ ಶಾಖಾಮಠದಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ನಡುವೆ ಕಳೆದ ಒಂದು ವಾರದಿಂದ ನಿರಂತರ ಹೋಮಹವನಗಳು ನಡೆಯುತ್ತಿದ್ದು, ಇದು ಮಧ್ಯರಾತ್ರಿ ನಂತರವೂ ಮುಂದುವರಿಯುತ್ತಿರುವುದು ಕುತೂಹಲ ಕೆರಳಿಸಿದೆ. ಈ ಹೋಮ ಹವನ ಮಾಡಲು ಬೇರೆ ಬೇರೆ ಪ್ರದೇಶಗಳಿಂದ ಋತ್ವಿಜರು ಮಠಕ್ಕೆ ಬಂದು ಇಳಿಯುತ್ತಿರುವುದು ಕಂಡು ಬರುತ್ತಿದೆ.
ಈ ನಡುವೆ ಪುತ್ತಿಗೆ ಮಠಾಧೀಶರಿಗೆ ಆರೋಗ್ಯ ಸರಿ ಇಲ್ಲ. ಮನಸ್ಸಿಗೆ ಸಮಾಧಾನ ಇಲ್ಲ, ಈ ಕಾರಣಕ್ಕಾಗಿ ಈ ಹೋಮ ಹವನ ಗಳು ನಡೆಯುತ್ತಿದೆ ಎನ್ನುವ ಸುದ್ದಿಯೂ ಕೇಳಿಬರುತ್ತಿದೆ.
ಈ ಶಾಖಾಮಠದಲ್ಲಿ ಈ ಹಿಂದೆ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ ತಮ್ಮ ಮತ್ತು ತಮ್ಮನ ಹೆಂಡತಿ ವಾಸ ಇದ್ದರು. ಅವರನ್ನು ಮಠದಿಂದ ಹೊರಗೆಹಾಕಲಾಗಿದೆ ಎನ್ನಲಾಗಿದೆ. ಈ ಮಠದಲ್ಲಿ ಹತ್ತಾರು ಎಕ್ರೆ ಸ್ಥಳಾವಕಾಶ ಇದೆ. ಈಗ ಈ ಶಾಖಾಮಠದ ಆವರಣವನ್ನು ತಕ್ಕ ಮಟ್ಟಿಗೆ ಚೊಕ್ಕ ಮಾಡಲಾಗಿದೆ.

Mar 22, 2010
ನಾಪತ್ತೆಯಾದ ಯುವತಿ ಪ್ರಿಯಕರನೊಂದಿಗೆ ಪತ್ತೆ

ಸುಳ್ಯ: ಕಲ್ಲುಗುಂಡಿ ಬಾಚಿಗದ್ದೆಯಿಂದ 2009ರ ನವಂಬರ್‌ನಲ್ಲಿ ಕಾಣೆಯಾದ ಯುವತಿಯೊಬ್ಬಳು ಪುತ್ತೂರಿ ನಲ್ಲಿ ಪ್ರಿಯಕರ ನೊಂದಿಗೆ ಪತ್ತೆಯಾದ ಘಟನೆ ನಡೆದಿದೆ.
ಸುಳ್ಯ ತಾಲೂಕಿನ ಕಲ್ಲುಗುಂಡಿಯ ಬಾಚಿಗದ್ದೆ ಚನಿಯ ಪುಜಾರಿಯವರ ಪುತ್ರಿ ದೀಪ ಯಾನೆ ಗೀತಾ(24) ಎಂಬ ಯುವತಿ ನವಂಬರ್ 11, 2009ರಂದು ನಾಪತ್ತೆ ಯಾಗಿದ್ದಳು. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯುವತಿ ಬೀಡಿಕಟ್ಟುವ ಕೆಲಸ ಮಾಡಿಕೊಂಡಿದ್ದು, ಬೀಡಿ ಕೊಡಲೆಂದು ಬ್ರಾಂಚಿಗೆ ಹೋದವಳು ನಾಪತ್ತೆಯಾಗಿದ್ದಳು. ನಾಪತ್ತೆಯಾದ ಯುವತಿ ಪುತ್ತೂರಿನಲ್ಲಿ ಪ್ರೀತಿಸಿದ ಯುವಕನನ್ನು ರಿಜಿಸ್ಟ್ಟರ್ಡ್ ವಿವಾಹವಾಗಿದ್ದಳು. ಪ್ರಿಯಕರ ಪುತ್ತೂರಿನ ಸುಳ್ಯ ಪದವು ಕನ್ನಡ್ಕ ನಿವಾಸಿ ವಾಸುದೇವ ಗೌಡರ ಪುತ್ರ ಬಾಲಕೃಷ್ಣ (40) ಎಂಬವರೊಂದಿಗೆ ಮಾ. 21ರಂದು ಪುತ್ತೂರಿನಲ್ಲಿ ಪತ್ತೆಯಾಗಿದ್ದಳು. ಯುವಕ ಈ ಹಿಂದೆ ಒಂದು ಮದುವೆಯಾಗಿದ್ದು, ಆ ಬಳಿಕ ಅವಳಿಗೆ ವಿಚ್ಛೇಧನ ಕೊಟ್ಟಿದ್ದನು. ವೃತ್ತಿಯಲ್ಲಿ ಮರದ ಕೆಲಸ ಮಾಡುತ್ತಿದ್ದ ಈತ ಕಲ್ಲುಗುಂಡಿಯ ದೀಪಗಳೊಂದಿಗೆ ಈಗ ಎರಡನೇ ಮದುವೆಯಾಗಿದ್ದಾನೆ. ಸುಳ್ಯ ಪೊಲೀಸರು ಯುವತಿ ಮನೆಯವರಿಗೆ ಹಸ್ತಾಂತರಿಸಿದ್ದಾರೆ.

ಗೋಹತ್ಯೆ ನಿಷೇಧ ಕಾನೂನಿಗೆ ಪಿಎಫ್ಐ ವಿರೋಧ
ಮಂಗಳೂರು: ರಾಜ್ಯ ಸರಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾನೂನು ಜನರಿಗೆ ವಿರುದ್ಧವಾಗಿದೆ ಎಂದು ಫಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆರೋಪಿಸಿದೆ.
ಈ ಕಾನೂನಿಗೆ ರಾಜ್ಯದಲ್ಲಿ ಭಾರೀ ವಿರೋಧವಿದ್ದರೂ ಕೂಡ ಬಿಜೆಪಿ ಸರಕಾರ ಇದನ್ನು ಜಾರಿಗೊಳಿಸಿದೆ. ಜನರ ಆಹಾರದ ಹಕ್ಕನ್ನು ಕಸಿದಿರುವ ರಾಜ್ಯ ಸರಕಾರ ದೇಶದ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಕ್ರಮ ತೆಗೆದುಕೊಂಡಿದೆ. ರಾಜ್ಯದಲ್ಲಿ ಅದು ತನ್ನ ಹಿಂದುತ್ವ ಅಜೆಂಡಾವನ್ನು ಜಾರಿಗೊಳಿಸುತ್ತಿದೆ ಎಂದು ಪಿಎಫ್ಐ ಹೇಳಿದೆ.
ರಾಜ್ಯದ ಜನರು ಭಷ್ಟಾಚಾರ, ಕಾನೂನು ಬಾಹಿರ ಗಣಿಗಾರಿಕೆ, ವಿದ್ಯುತ್ ಸಮಸ್ಯೆ, ಬೆಲೆಏರಿಕೆಯಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ರಾಜ್ಯ ಸರಕಾರ ಇದನ್ನೆಲ್ಲ ಬಗೆಹರಿಸಲು ಆಸಕ್ತಿಯನ್ನು ಹೊಂದಿಲ್ಲ. ಅದು ಕೇವಲ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸುವತ್ತ ದೃಷ್ಟಿಯನ್ನರಿಸಿದೆ ಎಂದು ಪಿಎಫ್ಐ ತಿಳಿಸಿದೆ.
ರಾಜ್ಯದ ಜನತೆ ಮತ್ತು ಜಾತ್ಯತೀತ ಪಕ್ಷಗಳು ಜೊತೆಗೂಡಿ ಈ ಜನವಿರೋಧಿ ಕಾನೂನಿನ ವಿರುದ್ಧ ಪ್ರತಿಭಟಿಸಬೇಕಾಗಿದೆ ಎಂದು ಪಿಎಫ್ಐ ಕರೆ ನೀಡಿದೆ.
ಸಾಹಿತಿ ದೇವನೂರು ಆಕೋಶ
ಗೋಹತ್ಯೆ ನಿಷೇಧ ಮಸೂದೆ ಜಾರಿಯ ಹಿಂದೆ ಸಂಘಪರಿವಾರದ ನರಹತ್ಯೆಯ ಗುಪ್ತ ಕಾರ್ಯಸೂಚಿ ಅಡಗಿದೆ ಎಂದು ಸಾಹಿತಿ ದೇವನೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋವಿನ ಸೆಗಣಿ-ಗಂಜಳ ಔಷಧಿಯಾದರೆ ಗೋಮಾಂಸ ಔಷಧಿಯಾಗುವುದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಶನಿವಾರ ಬೆಂಗಳೂರಿನ ಗಾಂಧಿಭವನದಲ್ಲಿ ಲೋಹಿಯಾ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ ಆಹಾರ ಸಂಸ್ಕೃತಿಯ ಅರಿವಿಲ್ಲದ ಸರಕಾರ ಗೋಹತ್ಯೆ ನಿಷೇಧಕ್ಕೆ ಮುಂದಾಗಿದೆ ಎಂದವರು ಕಿಡಿಕಾರಿದರು.

Mar 20, 2010
ಗುಹೆಯೊಳಗಿದ್ದ ಸ್ವಾಮಿಯ ಕೂದಲು, ಗಡ್ಡ ಮಾಯ!?

ಮಂಗಳೂರು: ಸ್ವಾಮಿಗಳ ಮೇಲಿನ ನಂಬಿಕೆ ಕಳಕೊಳ್ಳುತ್ತಿರುವಂ ತಹ ದಿನಗಳಲ್ಲಿ ಬೆಳಗಾವಿಯಲ್ಲೊಬ್ಬ ಸ್ವಾಮಿ ನೀರಿದ್ದ ಗುಹೆಯೊಳಗೆ ಎರಡು ತಿಂಗಳು ಕಳೆದು ಮರಳು ವಾಗ ಆತನ ಗಡ್ಡ ಫುಲ್ ಶೇವ್ ಮಾಡಿದ ಸ್ಥಿತಿಯಲ್ಲಿದ್ದು, ಆತನ ಚಡ್ಡಿ ಬಣ್ಣ ಕೂಡ ಬದಲಾಗಿರುವುದು ಎಲ್ಲರನ್ನು ಅಚ್ಚರಿಗೀಡು ಮಾಡಿದೆ.
ಬೆಳಗಾಗಿಯ ಅಥಣಿ ತಾಲೂ ಕಿನ ಜುಂಜುರವಾಡ ಧರ್ಮಪೀಠ ಮಠದ ಶಿವಯೋಗಿ ಸ್ವಾಮಿ (ಸಂಪೂರ್ಣ ಗಡ್ಡ ಮತ್ತು ಕೂದಲು ಇತ್ತು)ಯನ್ನು ಜನವರಿ 10ರಂದು ಕೈಕಾಲು ಸಂಪೂರ್ಣವಾಗಿ ಕಟ್ಟಿ ನೀರು ತುಂಬಿದ್ದ ಗುಹೆಯೊಳಗೆ ಬಿಡಲಾಗಿತ್ತು. ಬಳಿಕ ಗುಹೆಯನ್ನು ಕಲ್ಲಿನಿಂದ ಭದ್ರವಾಗಿ ಮುಚ್ಚಲಾಗಿತ್ತು. ಅಲ್ಲಿ ಅನ್ನಾಹಾರಗಳೆನ್ನೆಲ್ಲ ತ್ಯಜಿಸಿದ್ದ ಸ್ವಾಮಿ 65 ದಿನಗಳ ಬಳಿಕ ಮರಳಿ ದಾಗ ಅವರ ಕೂದಲು ಕಟ್ಟಿಂಗ್ ಮಾಡಲಾಗಿತ್ತು ಮತ್ತು ಗಡ್ಡ ಕ್ಲೀನ್ ಶೇವ್ ಮಾಡಲಾಗಿತ್ತು. ಇದು ಅಲ್ಲಿ ನೆರೆದಿದ್ದ ಭಕ್ತರಲ್ಲಿ ಕೆಲವು ಸಂಶಯ ಗಳನ್ನು ಹುಟ್ಟುಹಾಕಿದೆ.

ಇಷ್ಟೇ ಅಲ್ಲದೆ ಪ್ರಜ್ಞಾಹೀನ ಸ್ಥಿತಿ ಯಲ್ಲಿದ್ದ ಈ ಸ್ವಾಮಿಯನ್ನು ಮೇಲ ಕ್ಕೆತ್ತಿದ ಬಳಿಕ ಮಠದಲ್ಲಿ ತಂದು ಮಲಗಿ ಸಿದಾಗ ಅಲ್ಲಿಗೆ ಬಂದ ಗೋವು ಸ್ವಾಮಿ ಯನ್ನು ಸ್ಪರ್ಶಿಸಿದ ಕೂಡಲೇ ಆತ ತಕ್ಷಣ ಎದ್ದು ಕುಳಿತದ್ದು ಮತ್ತಷ್ಟು ಸಂಶಯಗಳನ್ನು ಸೃಷ್ಟಿಸಿದೆ. ಸ್ವಾಮಿ ಮೇಲೆ ಬಂದಾಗ ಮತ್ತೊಂದು ವಿಸ್ಮಯ ಸಂಭವಿಸಿದ್ದು, ಸ್ವಾಮಿ ಗುಹೆ ಯೊಳಗೆ ಇಳಿಯುವಾಗ ಹಾಕಿದ್ದ ನೀಲಿ ಚಡ್ಡಿ ಕೆಂಪು ಚಡ್ಡಿಯಾಗಿ ಪರಿವರ್ತನೆಯಾಗಿದೆ. ಕೆಲವು ತಜ್ಞರು ಸ್ವಾಮಿ ಕೇವಲ ನಾಟವಾಡುತ್ತಿದ್ದಾ ರೆಂದು ಹೇಳಿದರೆ, ಮತ್ತೆ ಕೆಲವರು ತಪಸ್ಸಿನಿಂದಾಗಿ ಸ್ವಾಮಿಯ ತಲೆ ಕೂದಲು ಮತ್ತು ಗಡ್ಡ ಶೇವ್ ಆಗಿದೆ ಎನ್ನುತ್ತಾರೆ. ಆದರೆ ಸ್ವಾಮಿಯ ಗಡ್ಡ ಮತ್ತು ತಲೆಕೂದಲು ಕ್ಷೌರಿಕ ತೆಗೆದಂತೆ ಇರುವುದು ಎಲ್ಲರಲ್ಲಿ ಅನುಮಾನವ ನ್ನುಂಟು ಮಾಡಿದೆ. 65 ದಿನ ನೀರಿನಲ್ಲಿ ಇದ್ದು, ಯಾವುದೇ ಅನ್ನಾಹಾರ ಇಲ್ಲ ದಿದ್ದರೆ ಸ್ವಾಮಿ ದೇಹ ನಿಶಕ್ತಿಯಿಂದ ಬಳಲಬೇಕಾಗಿತ್ತು. ಆದರೆ ಅಂತಹ ಯಾವುದೇ ಲಕ್ಷಣಗಳು ಕಾಣದಿರು ವುದು ಜನರನ್ನು ಸ್ವಾಮಿ `ಕುರಿಗಳ ನ್ನಾಗಿ ಮಾಡಿದರು ಎನ್ನುತ್ತಾರೆ. ಚಡ್ಡಿ ಬಣ್ಣ ಬದಲಾಯಿ ಸಿದ ಬಗ್ಗೆ ಸ್ವಾಮಿ ಯಲ್ಲಿ ಕೇಳಿದಾಗ, ಇದೆಲ್ಲ ತಪಸ್ಸಿನಿಂದ ಸಾಧ್ಯವೆನ್ನುತ್ತಾನೆ. ಇದೆಲ್ಲ ತಪಸ್ಸಿನಿಂದ ಸಾಧ್ಯವೇ? ಅಥವಾ ಕಪಟ ನಾಟಕವೇ? ಎನ್ನುವ ಹಲವಾರು ಪ್ರಶ್ನೆಗಳು ಜನರನ್ನು ಈಗಲೂ ಕಾಡುತ್ತಿದೆ.
Mar 19, 2010
ನಾಳೆ ಹೊಸ ಖಾಝಿ ಅಧಿಕಾರ ಸ್ವೀಕಾರ
ಮಂಗಳೂರು ಖಾಝಿಯಾಗಿ ಪ್ರಸಿದ್ಧ ಇಸ್ಲಾಮಿಕ್ ಮತ ಪಂಡಿತ, ಸೂಫಿವರ್ಯರು ಆದ ಅಲ್ ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ನಗರದ ಬಂದರ್‌ನಲ್ಲಿರುವ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಮಾ.20ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಙಳ್‌ರವರು ಖಾಝಿ ಪಟ್ಟವನ್ನು ನೀಡಲಿದ್ದಾರೆ. ಕಾಸರಗೋಡು ಸಂಯುಕ್ತ ಖಾಝಿ ಟಿ.ಕೆ.ಎಂ. ಬಾವಾ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ತ್ವಾಕಾ ಅಹ್ಮದ್ ಮುಸ್ಲಿಯಾರ್ ಕಾಸರಗೋಡು ಜಿಲ್ಲೆಯ ಚೆಂಬರಿಕ ಎಂಬಲ್ಲಿ 1947 ಆ. 10ರಂದು ಜನಿಸಿ ಉತ್ತರ ಪ್ರದೇಶದ ದೇವ್‌ಬಂದ್‌ನ ಅರೆಬಿಕ್ ಕಾಲೇಜಿನಲ್ಲಿ ದೌರ ಹದೀಸ್, ದೌರಾ ಮಹ್‌ಕೂಲತ್, ದೌರ ಅದಬ್ ಮತ್ತು ದೌರ ತಪ್ಲೀರ್ ಎಂಬ ನಾಲ್ಕು ಪದವಿಗಳನ್ನು ಗಳಿಸಿದ್ದಾರೆ.
ಈಜಿಪ್ಟ್‌ನ ಅಝ್‌ಹರ್ ವಿ.ವಿ.ಯಿಂದ ಅಡಿಸ್ಥಾನ ಕರ್ಮ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಸುಮಾರು 30ವರ್ಷಗಳ ಕಾಲ ಒಮಾನ್‌ನ ಸಲಾಲದ ತ್ವಾಕಾ ಎಂಬಲ್ಲಿ ಸುಲ್ತಾನರ ಮಸೀದಿಯಲ್ಲಿ ಇಮಾಮ್ ಮತ್ತು ಮುದ್ದರ್ರಿಸ್ ಆಗಿ ಸೇವೆ ಸಲ್ಲಿಸಿದ್ದರು. ತ್ವಾಕಾ ಉಸ್ತಾದರಿಗೆ ದ.ಕ. ಜಿಲ್ಲೆಯೊಂದಿಗೆ ಬಹಳ ಹಿಂದಿನಿಂದಲೇ ಸಂಪರ್ಕವಿದ್ದು, ಇವರು ಪುತ್ತೂರಿನ ಕಂಬ್ಲೋಟ್ ಮಹಮ್ಮದ್ ಮುಸ್ಲಿಯಾರ್ ಕುಟುಂಬದಿಂದ ವಿವಾಹವಾಗಿದ್ದಾರೆ. ಮಂಗಳೂರು ಖಾಝಿ ಚೆಂಬರಿಕ ಉಸ್ತಾದರ ಸಹೋದರಿಯ ಪುತ್ರ. ಪದಗ್ರಹಣ ಸಮಾರಂಭದಲ್ಲಿ ಮುಸ್ಲಿಂ ಧಾರ್ಮಿಕ ವಿದ್ವಾಂಸರು, ಸಾದಾತುಗಳು ಭಾಗವಹಿಸಲಿದ್ದಾರೆ ಎಂದು ಝೀನತ್ ಭಕ್ಷ್ ಕೇಂದ್ರ ಜುಮ್ಮಾ ಮಸೀದಿ ಕೋಶಾಧಿಕಾರಿ ಎಸ್.ಎಂ. ರಶೀದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Mar 18, 2010
ಮತಾಂತರಕ್ಕೆ ಯತ್ನಿಸಿದ ಪಾದ್ರಿಗೆ ನ್ಯಾಯಾಂಗ ಬಂಧನ
ಸುಳ್ಯ: ಜಟ್ಟಿಪಳ್ಳದ ಬಾಡಿಗೆ ಮನೆಯಲ್ಲಿದ್ದ ಕುಟುಂಬಗಳನ್ನು ಮತಾಂತರಕ್ಕೆ ಯತ್ನಿಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಪಾದ್ರಿ ವೆಲ್ಸಲನ್‌ಗೆ ನ್ಯಾಯಾಂಗ ಬಂಧನವಿಧಿಸಲಾಗಿದೆೆ. ಜಟ್ಟಿ ಪಳ್ಳ ಬೋರುಗುಡ್ಡೆಯಲ್ಲಿ ವಾಸವಾಗಿದ್ದ ಆರೋಪಿತ ಪಾದ್ರಿ ಬಾಡಿಗೆ ಮನೆಯಲ್ಲಿದ್ದ ಇತರ ಕುಟುಂಬಗಳಿಗೆ ತಮ್ಮ ಧರ್ಮದ ಪ್ರಕಾರ ನಡೆಯುತ್ತಿದ್ದ ಬಲಿಪೂಜೆಗೆ ಬರಲು ಒತ್ತಾಯಿಸುತ್ತಿದ್ದರೆನ್ನಲಾಗಿದೆ. ಜೋರಾಗಿ ಬೊಬ್ಬೆ ಹಾಕಿ ತಮ್ಮ ಧರ್ಮದ ಭಜನೆಮಾಡುತ್ತಿದ್ದ ಪಾದ್ರಿ ದಂಪತಿಗಳು, ಹತ್ತಿರದ ಮನೆಯವರಿಗೆ ಹಲವು ರೀತಿಯ ಪ್ರಲೋಭನೆ ಒಡ್ಡುತ್ತಿದ್ದರು.
ಕಾಯಿಲೆ ಇದ್ದವರಿಗೆ ಕಾಯಿಲೆ ವಾಸಿಮಾಡುತ್ತೇವೆ, ಕಷ್ಟ ಇದ್ದವರಿಗೆ ಹಣ ಕೊಡುತ್ತೇವೆ ಎಂದು ನಂಬಿಸಲು ಯತ್ನಿಸುತ್ತಿದ್ದರು ಪಕ್ಕದಲ್ಲೇ ವಾಸವಾಗಿದ್ದ ಧಾರವಾಡ ಮೂಲದ ಸಂಗಣ್ಣ ಎಂಬ ದಂಪತಿಯನ್ನೂ ಮತಾಂತರವಾಗಲು ಒತ್ತಾಯ ಮಾಡುತ್ತಿದ್ದರೆನ್ನಲಾಗಿದೆ. ಸನಿಹದಲ್ಲಿಯೇ ವಾಸವಾಗಿದ್ದ ಟೀಚರ್ ಚಂದ್ರವತಿ ಎಂಬವರಿಗೂ ಮತಾಂತರಕ್ಕೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಈ ವಿಚಾರಕೆಲ ಹಿಂದೂ ಸಂಘಟನೆಗಳ ಕಿವಿಗೆ ಬಿದ್ದು ಪಾದ್ರಿ ಮನೆ ಮುಂದೆ ಜನ ಸೇರಲಾರಂಭಿಸಿದರು. ವಿಷಯ ತಿಳಿದ ಸುಳ್ಯ ಪೊಲೀಸರು ಧಾವಿಸಿ ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದರು. ಚಂದ್ರಮತಿಯವರ ದೂರಿನನ್ವಯ ಕೇಸು ದಾಖಲಿಸಿಕೊಂಡ ಪಾದ್ರಿ ಹಾಗೂ ಹಿಂದೂ ಕುಟುಂಬಗಳನ್ನು ಪ್ರತ್ಯೇಕ ಪ್ರತ್ಯೇಕ ವಿಚಾರಣೆ ನಡೆಸಿ ಪಾದ್ರಿಯವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ನಿನ್ನೆ ಕೋರ್ಟಿಗೆ ಹಾಜರು ಪಡಿಸಿದರು. ನ್ಯಾಯಾಲಯ ಪಾದ್ರಿಯವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ

Subscribe to:
Posts (Atom)