ಬಿಬಿಎಂಪಿ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈಗಾಗಲೇ ಪ್ರಣಾಳಿಕೆ ಬಿಡುಗಡೆ ಮಾಡಿದ್ದರೆ, ಸದಾ ಒಂದಿಲ್ಲೊಂದು ವಿಶಿಷ್ಟತೆಯೊಂದಿಗೆ ಸುದ್ದಿಯಲ್ಲಿರುವ ವಾಟಾಳ್ ನಾಗರಾಜ್ ಅವರು, ಉಚಿತ ಕ್ಷೌರ ಸೌಲಭ್ಯ, ಕತ್ತೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ವಾಟಾಳ್ ಪಕ್ಷದ ವತಿಯಿಂದ ಘೋಷಿಸಿದ್ದಾರೆ.ವಾಟಾಳ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಪ್ರಕಾರ, ಪ್ರತಿವರ್ಷ ಬಡ ಮಹಿಳೆಯರಿಗೆ ಎರಡು ಜೊತೆ ಸೀರೆ, ಬಡವರಿಗೆ 2ಜೊತೆ ಪಾದರಕ್ಷೆಯನ್ನು ನೀಡಲಾಗುವುದು ಎಂದು ತಿಳಿಸಿದೆ.ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಈ ವಿಶಿಷ್ಟ ರೀತಿಯ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷದ ಹುರಿಯಾಳುಗಳು ಜಯಗಳಿಸಿದ್ದಲ್ಲಿ, ಪ್ರಣಾಳಿಕೆಯಲ್ಲಿನ ಭರವಸೆ ಈಡೇರಿಸುವುದಾಗಿ ಹೇಳಿದ್ದಾರೆ.ಉಚಿತ ಕ್ಷೌರ ಸೌಲಭ್ಯದ ಜೊತೆ ಉಚಿತ ಉಪ್ಪು ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಐದು ಸಾವಿರ ಶೌಚಾಲಯಗಳ ನಿರ್ಮಾಣ ಸೇರಿದಂತೆ ಜನಸಾಮಾನ್ಯರಿಗೆ ಅಗತ್ಯವಿರುವಂತಹ ಸೌಲಭ್ಯಗಳ ಬಗ್ಗೆ ಆದ್ಯತೆ ನೀಡಲಾಗಿದೆ ಎಂದು ವಾಟಾಳ್ ಈ ಸಂದರ್ಭದಲ್ಲಿ ತಿಳಿಸಿದರು.
-webdunia
Mar 25, 2010
Subscribe to:
Post Comments (Atom)
No comments:
Post a Comment