ಮೀನು ತಿನ್ನಲೂ ಸರ್ಕಾರ ನಿಷೇಧ ಹೇರಬಹುದು: ಪೂಜಾರಿ
 
ಬೆಂಗಳೂರು, ಗುರುವಾರ, 25 ಮಾರ್ಚ್ 2010( 11:41 IST )
  -->
ವಿಷ್ಣು ಪರಮಾತ್ಮ ಮತ್ಸ್ಯಾವತಾರ ಎತ್ತಿದ್ದಾನೆಂದು ನೆಪ ಒಡ್ಡಿ, ಬಿಜೆಪಿ ಸರ್ಕಾರ, ಮೀನು ತಿನ್ನುವುದನ್ನು ನಿಷೇಧಿಸಿ ಕಾಯ್ದೆ ಜಾರಿಗೆ ತಂದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಬಿಜೆಪಿ ಸರ್ಕಾರ ಮುಂದಾಗಿರುವುದನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಮುಂದೊಂದು ದಿನ ಮೀನು ತಿನ್ನಬಾರದೆಂದು ನಿಷೇಧ ಹೇರಿದರೂ ಆಶ್ಚರ್ಯ ಪಡಬೇಕಿಲ್ಲ ಎಂದರು.ಅಲ್ಪಸಂಖ್ಯಾತರನ್ನು ಮಟ್ಟ ಹಾಕಲೆಂದೇ ಈ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು. ಸುಪ್ರೀಂನ ತೀರ್ಪುಗಳನ್ನು ಉಲ್ಲಂಘಿಸಿ ಈ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಇದು ನ್ಯಾಯಾಲಯದ ನಿಂದನೆಯಾಗಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಜೈಲಿಗೆ ಹೋಗಬೇಕಾದ ಸ್ಥಿತಿ ಬರಬಹುದು ಎಂದು ಹೇಳಿದರು.ಈ ಕಾಯ್ದೆ ಹಿಂದೂಗಳು, ದಲಿತರು, ರೈತರು ಮತ್ತು ಅಲ್ಪಸಂಖ್ಯಾತರ ವಿರೋಧಿಯಾಗಿದ್ದು, ಸಂಘ ಪರಿವಾರದವರ ಒಳ ಸಂಚಿನಂತೆ ಕಾಯ್ದೆ ರೂಪಿಸಲಾಗಿದೆ ಎಂದು ಪೂಜಾರಿ ಕಿಡಿಕಾರಿದರು.
-webdunia
No comments:
Post a Comment