ಉಪನ್ಯಾಸಕಿ-ಹಳೆ ವಿದ್ಯಾರ್ಥಿ ಲವ್ ಸುಖಾಂತ್ಯ; ಆರ್ಯ ಸಮಾಜದಲ್ಲಿ ಮದುವೆ
ಮೂಡಬಿದ್ರೆ: ಆಳ್ವಾಸ್ ಕಾಲೇಜು ಪ್ರಾಧ್ಯಾಪಕಿ ಹಾಗೂ ಅದೇ ಕಾಲೇಜಿನ ಹಳೆ ವಿದ್ಯಾರ್ಥಿ ನಡುವಿನ ಕಳೆದ ಹಲವು ಸಮಯಗಳ ಪ್ರೇಮಾಯಣಕ್ಕೆ ನ್ಯಾಯ ಸಿಕ್ಕಿದ್ದು ಅವರಿಬ್ಬರೂ ಮಂಗಳೂರಿನ ಆರ್ಯ ಸಮಾಜದಲ್ಲಿ ಮದುವೆಯಾಗಿರುವುದಾಗಿ ತಿಳಿದು ಬಂದಿದೆ.
ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕಿ ಸೌಮ್ಯ ಹಾಗೂ ಅದೇ ಕಾಲೇಜಿನ ಹಳೆ ವಿದ್ಯಾರ್ಥಿ ಗಣೇಶ್ ಎಂಬವರು ಕಳೆದ ಹಲವು ಸಮಯಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇತ್ತೀಚೆಗೆ ಹುಡುಗಿ ಮನೆಯವರಿಗೆ ಈ ವಿಷಯ ತಿಳಿದು ಕೊಂಚ ಮಟ್ಟಿನ ವಿರೋಧ ಉಂಟಾಗಿತ್ತು.
ಅವರಿಬ್ಬರೂ ಕೇರಳ ಮೂಲದವರಾಗಿದ್ದು ಸೌಮ್ಯ ಮೂಡಬಿದ್ರೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗಣೇಶ್ ಆಗಾಗ ಇಲ್ಲಿಗೆ ಭೇಟಿ ನೀಡುತ್ತಿದ್ದು, ಇತ್ತೀಚೆಗೆ ಸೌಮ್ಯರ ಮನೆಯವರು ಮೂಡಬಿದ್ರೆಗೆ ಬಂದಿದ್ದ ವೇಳೆ ಇಬ್ಬರೂ ಒಟ್ಟಿಗಿದ್ದರು. ಇದನ್ನು ಸೌಮ್ಯ ಹೆತ್ತವರು ವಿರೋಧಿಸಿದ್ದರಲ್ಲದೆ ಮೂಡಬಿದ್ರೆ ಪೊಲೀಸರಿಗೂ ದೂರು ನೀಡಿದ್ದರು. ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಿಸಿದಾಗ ಪ್ರೇಮ ಸಂಬಂಧದ ಬಗ್ಗೆ ಒಪ್ಪಿಕೊಂಡಿದ್ದರು.
ಸೌಮ್ಯ ತನ್ನ ಹೆತ್ತವರೊಂದಿಗೆ ಹೋಗಲು ನಿರಾಕರಿಸಿರುವುದರಿಂದ ಅವರನ್ನು ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ ಸೌಮ್ಯ ಪ್ರಜ್ಞಾದಿಂದ ಮತ್ತೆ ಮೂಡಬಿದ್ರೆ ಠಾಣೆಗೆ ಬಂದು ತಾನು ಗಣೇಶನನ್ನೇ ಮದುವೆಯಾಗುವುದಾಗಿ ಹೇಳಿಕೆ ನೀಡಿರುವುದರಿಂದ ಅವರಿಬ್ಬರನ್ನೂ ಮಂಗಳೂರಿನ ಆರ್ಯ ಸಮಾಜಕ್ಕೆ ಕಳುಹಿಸಿಕೊಡಲಾಗಿದ್ದು ಸೋಮವಾರ ಮದುವೆಯಾಗಿರುವುದಾಗಿ ತಿಳಿದು ಬಂದಿದೆ.ಈ ಮದುವೆಗೆ ಹುಡುಗಿ ಕಡೆಯವರ ಒಪ್ಪಿಗೆ ಇತ್ತೆಂದು, ಹುಡುಗನ ಕಡೆಯಿಂದ ಯಾರೂ ಬಂದಿರಲಿಲ್ಲವೆಂದು ತಿಳಿದು ಬಂದಿದೆ.
-jayakirana
No comments:
Post a Comment