VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 25, 2010

ಮುಸ್ಲಿಂ ಮೀಸಲಾತಿ : ಸುಪ್ರೀಂ ಕೋರ್ಟ್ ತೀರ್ಪಿಗೆ ಡಿ.ಕೆ.ಎಸ್.ಸಿ. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕನ್ನಂಗಾರ್ ಸ್ವಾಗತ.


ತಬೂಕ್: ಸೌದಿ ಅರೇಬಿಯಾ . ಮಾರ್ಚ್ ೨೫ : ಮುಸ್ಲಿಮರಿಗೆ ಶೇ ೪ ರಷ್ಟು ಮೀಸಲಾತಿ ನೀಡುವ ಆಂಧ್ರ ಪ್ರದೇಶ ಸರ್ಕಾರದ ತೀರ್ಮಾನಕ್ಕೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ದಕ್ಷಿಣ ಕನ್ನಡ ಸುನ್ನೀ ಸೆಂಟರ್ ತಬೂಕ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕನ್ನಂಗಾರ್ ಸ್ವಾಗತಿಸಿದ್ದಾರೆ.

ವಿಶ್ವ ಕನ್ನಡಿಗ ನ್ಯೂಸ್ ನೊಂದಿಗೆ ಮಾತನಾಡಿದ ಅವರು ಈ ತೀರ್ಪು ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಹಿಂದುಳಿದ ಮುಸ್ಲಿಮರ ಏಳಿಗೆಗೆ ಸಹಕಾರಿಯಾಗಲಿದ್ದು ಇಷ್ಟು ಮಾತ್ರವಲ್ಲ ಈ ಜನಾಂಗದ ಸರ್ವತ್ತೊಮುಖ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ರಂಗನಾಥ ಮಿಶ್ರ ಆಯೋಗದ ವರದಿಯಂತೆ ಶೇ ೧೦ ರಷ್ಟು ಮೀಸಲಾತಿಯನ್ನು ಜಾರಿ ಗೊಳಿಸಬೇಕೆಂದು ಒತ್ತಾಯಿಸಿದರು. ಜೊತೆಗೆ ಸಾಚಾರ್ ಸಮಿತಿ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ನೀಡಿರುವ ಸಲಹೆಗಳನ್ನು ಜಾರಿಗೊಳಿಸುವುದರ ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ಬಗ್ಗೆ ತನಗಿರುವ ನೈಜ ಕಾಳಜಿಯನ್ನು ಪ್ರದರ್ಶಿಸಬೇಕೆಂದು ಹೇಳಿದರು.

No comments: