ಮಂಗಳೂರು,ಮಾ.17: ನಗರದ ಕೆ.ಎಸ್.ರಾವ್. ರಸ್ತೆಯ "ಕನ್ನಡ ಪ್ರಭ" ಕಛೇರಿಗೆ ಇತ್ತೀಚೆಗೆ ದಾಳಿ ನಡೆಸಿ ಸೊತ್ತು ನಾಶ ಪಡಿಸಿದ ಅರೋಪಿಗಳಲ್ಲಿ ಒಬ್ಬನನ್ನು ನಗರದ ಬಂದರು ಪೊಲೀಸರು ಬಂಧಿಸಿವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಕೆ.ಎಸ್.ರಾವ್. ರಸ್ತೆಯ ಕನ್ನಡ ಪ್ರಭ ಕಛೇರಿಗೆ ದಿನಾಂಕ ೦೨-೦೩-೨೦೧೦ ರಂದು ರಾತ್ರಿ ೯ ಗಂಟೆಯ ಸಮಯ ದುಷ್ಕರ್ಮಿಗಳು ದಾಳಿ ನಡೆಸಿ ಪೆಟ್ರೋಲ್ ಬಾಂಬ್ ಎಸೆದು ಕಛೇರಿಯ ಸೋಪಾ ಚೇರ್‌ಗಳನ್ನು ಸುಟ್ಟಿದ್ದು ಹಾಗೂ ಕಂಪ್ಯೂಟರ್ ಉಪಕರಣಗಳನ್ನು ಕೆಳಗೆ ಎಸೆದು ಹಾನಿಗೊಳಿಸಿ ಸುಮಾರು 15 ಲಕ್ಷ ರೂಪಾಯಿಗಳಷ್ಟು ನಷ್ಟ ಉಂಟು ಮಾಡಿದ್ದು, ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಆರೋಪಿ ಪತ್ತೆ ಕಾರ್ಯ ಕೈಗೊಂಡು ದಿನಾಂಕ ೧೬-೦೩-೨೦೧೦ ರಂದು ಉತ್ತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ವಿನಯ್ ಎ.ಗಾಂವಕರ್ ಹಾಗೂ ಪೊಲೀಸ್ ಉಪ ನಿರೀಕ್ಷಕರಾದ ಮಂಜುನಾಥ ಕೆ.ಆರ್, ಬರ್ಕೆ ಠಾಣಾ ಪೊಲೀಸ್ ಪಿ.ಎಸ್.ಐ ಶಿವಪ್ರಕಾಶ್ ಹಾಗೂ ಉತ್ತರ ಮತ್ತು ಬರ್ಕೆ ಠಾಣಾ ಸಿಬ್ಬಂದಿಯವರ ಅವಿರತ ಪ್ರಯತ್ನದಿಂದ ಓರ್ವ ಆರೋಪಿ ವಳಚ್ಚಿಲ್ ಪದವಿನ ಉಬೆದುಲ್ಲಾ (೨೯ ವ) (ತಂದೆ: ಅಬ್ದುಲ್ ಖಾದರ್ ಯಾನೆ ಇಟ್ಟಿಗೆ ಖಾದರ್) ಈತನನ್ನು ರಾತ್ರಿ ೭.೨೦ ಗಂಟೆಗೆ ವಳಚ್ಚಿಲ್ ಎಂಬಲ್ಲಿ ದಸ್ತಗಿರಿ ಮಾಡಿ ಪ್ರಕರಣವನ್ನು ಪತ್ತೆ ಹಚ್ಚಿರುತ್ತಾರೆ.
ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ೭ ಜನ ಆರೋಪಿತರು ಹಾಗೂ ಇತರರನ್ನು ಅದಷ್ಟು ಶೀಘ್ರವಾಗಿ ದಸ್ತಗಿರಿ ಮಾಡಲಾಗುವುದು ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಡಾ ಸುಬ್ರಮಣ್ಯೇಶ್ವರ ರಾವ್ ಅವರು ಇಂದು ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಈ ಪ್ರಕರಣದ ಪತ್ತೆ ಕಾರ್ಯ ನಡೆಸಿದ ತಂಡಕ್ಕೆ ರೂ 5 ಸಾವಿರ ನಗದು ಬಹುಮಾನ ನೀಡುವುದಾಗಿ ಪಶ್ಚಿಮವಲಯ ಐ.ಜಿ.ಪಿ ಗೋಪಾಲ್ ಹೊಸೂರು ಅವರು ಈ ಸಂಧರ್ಭದಲ್ಲಿ ಪ್ರಕಟಿಸಿದರು.
ಈ ಪ್ರಕರಣದ ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಶ್ರೀ ವಿನಯ.ಎ.ಗಾಂವಕರ್, ಪೊಲೀಸ್ ನಿರೀಕ್ಷಕರು, ಉತ್ತರ ಠಾಣೆಯ ಪಿ.ಎಸ್.ಐ ಮಂಜುನಾಥ್ ಕೆ.ಆರ, ಬರ್ಕೆ ಠಾಣಾ ಪಿ.ಎಸ್.ಐ ಶಿವಪ್ರಕಾಶ್ ಹಾಗೂ ಸಿಬ್ಬಂದಿಯವರಾದ ಎ ಎಸ್ ಐ ಪುರೋಷತ್ತಮ್, ಚಂದ್ರಹಾಸ, ಪ್ರವೀಣ್, ವೇಣು, ಚಂದ್ರಶೇಖರ, ಚಿತ್ತರಂಜನ್, ಬಾಲಕ್ರಷ್ಣ, ರಾಜೇಶ್ ಹೆಗ್ಡೆ, ಜಯಂತ, ಲಕ್ಷ್ಮಣ, ಜಯರಾಮ, ಪ್ರದೀಪ್, ಸಂತೋಷ್, ಬಾಲಕ್ರಷ್ಣ ಭಾಗವಹಿಸಿರುತ್ತಾರೆ ಎಂದು ಎಸ್ಪಿಯವರು ತಿಳಿಸಿದರು.

No comments:
Post a Comment