


ಹೈದರಾಬಾದ್: ಮುಸ್ಲಿಂ ಮೀಸಲಾತಿಗಾಗಿ ಒತ್ತಾಯಿಸಿ ಆಂಧ್ರ ಪ್ರದೇಶದ ಹೈದರಾಬಾದಿನಲ್ಲಿ ಸರ್ವ ಪಕ್ಷಗಳ ಮುಸ್ಲಿಂ ನಾಯಕರ ನೇತೃತ್ವದಲ್ಲಿ ಬೃಹತ್ ಸಭೆ ನಡೆಯಿತು.
ಸಭೆಯಲ್ಲಿ ಮಜ್ಲಿಸೆ ಇತ್ತೆಹಾದ್ ಮುಸ್ಲಿಮೀನ್ , ತೆಲುಗು ದೇಶಂ , ಕಾಂಗ್ರೆಸ್ , ತೆಲಂಗಾಣ ಪಕ್ಷದ ಪ್ರಮುಖರ ಸಹಿತ ಅನೇಕ ಪಕ್ಷಗಳ ಶಾಸಕರು , ಲೋಕಸಭಾ ಸದಸ್ಯರು , ರಾಜ್ಯಸಭಾ ಸದಸ್ಯರು ಭಾಗವಹಿಸಿದ್ದರು.
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಹೈದರಾಬಾದಿನ ಲೋಕಸಭಾ ಸದಸ್ಯ ಅಸಾದುದ್ದೀನ್ ಒವೆಯ್ಸಿ ಭಾರತದಲ್ಲಿ ಮುಸ್ಲಿಮರ ಸ್ಥಿತಿಗತಿಗಳ ಕುರಿತು ಈಗಾಗಲೇ ಸಾಚಾರ್ ಸಮಿತಿ ವಿಸ್ತೃತ ವರದಿ ನೀಡಿ ಅವುಗಳ ಪರಿಹಾರಕ್ಕಾಗಿ ಹಲವು ಕ್ರಮಗಳನ್ನು ಶಿಫಾರಸು ಮಾಡಿದೆ. ಸರ್ಕಾರ ಇದನ್ನು ಕೂಡಲೇ ಜಾರಿ ಗೊಳಿಸಬೇಕು. ಮತ್ತು ರಂಗನಾಥ ಮಿಶ್ರ ವರದಿಯಂತೆ ಮುಸ್ಲಿಮರಿಗೆ ಶೆ೧೦ ರಷ್ಟು ಮೀಸಲಾತಿಯನ್ನು ಜಾರಿಗೊಳಿಸಬೇಕು , ಈಗಾಗಲೇ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಮುಸ್ಲಿಂ ಮಹಿಳೆಯರಿಗೆ ಒಳ ಮೆಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಸ್ವಾತಂತ್ರ್ಯಾ ನಂತರ ಇದುವರೆಗೆ ಆಯ್ಕೆಯಾದ ೭೯೦೬ ಲೋಕಸಭಾ ಸದಸ್ಯರಲ್ಲಿ ಕೇವಲ ೧೪ ಮಂದಿ ಮುಸ್ಲಿಂ ಮಹಿಳೆಯರು ಮಾತ್ರ ಲೋಕಸಭಾ ಸದಸ್ಯರಾಗಿದ್ದು ಇದು ಈ ಸಮುದಾಯ ರಾಜಕೀಯ ಕ್ಷೇತ್ರದಲ್ಲಿ ಹೊಂದಿರುವ ಹಿಂದುಳಿಯುವಿಕೆಯನ್ನು ತೋರಿಸುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ಮೀಸಲಾತಯಾಯಲ್ಲಿ ಮುಸ್ಲಿಂ ಸಮಾಜಕ್ಕೆ ಒಳ ಮೀಸಲಾತಿ ನೀಡ ಬೇಕು ಎಂದು ಹೇಳಿದರು.
ಇಂದು ಇಲ್ಲಿ ಸೇರಿರುವ ಈ ಸಮಾವೇಶ ಮುಸ್ಲಿಂ ಮೀಸಲಾತಿಯ ಒತ್ತಾಯಕ್ಕಾಗಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಆಯೋಜಿಸಿದ ಸಮಾವೆಶವಾಗಿದ್ದು ಇದರಲ್ಲಿ ಎಲ್ಲಾ ಪಕ್ಷದ ಮುಸ್ಲಿಂ ರಾಜಕಾರಣಿಗಳು ಜೊತೆಗೆ ಸುನ್ನಿ, ತಬ್ಲೀಕ್ , ಜಮಾತ್ ಎ ಇಸ್ಲಾಂ ಮತ್ತು ಇನ್ನಿತರ ಪಂಗಡಗಳು ಎಂಬ ಭೇದಭಾವ ಇಲ್ಲದೆ ನಾವೆಲ್ಲಾ ಮುಸ್ಲಿಮರು ಎಂದು ಆಯೋಜಿಸಿದ ಸಮಾವೆಶವಾಗಿದ್ದು ಇದರಲ್ಲಿ ಪಾಲ್ಗೊಂಡ ಎಲ್ಲಾ ಕಾರ್ಯಕರ್ತರನ್ನು ಅಭಿನಂದಿಸಿದರು.
ಸಮಾವೇಶದಲ್ಲಿ ಸುಮಾರು ಐವತ್ತು ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದರು. ದೇಶದಲ್ಲಿ ಆಯಿ.ಪಿ.ಎಲ್. ಕ್ರಿಕೆಟ್ ನಡೆಯುತಿದ್ದರೂ ಅದನ್ನು ಲೆಕ್ಕಿಸದೆ ಅಧಿಕ ಸಂಖೆಯಲ್ಲಿ ಯುವಕರು ಭಾಗವಹಿಸಿದ್ದು ವಿಶೇಷವಾಗಿತ್ತು.
ಕೃಪೆ: two circles.net
No comments:
Post a Comment