VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 6, 2010

ಪಂದ್ಯದತ್ತ ಸಚಿನ್ ಸಮೀಪನೆ ಬದಲಾಗಿದೆ: ಕಪಿಲ್

ಪಂದ್ಯದತ್ತ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಮೀಪಿಸುತ್ತಿರುವ ರೀತಿಯು ಸಂಪೂರ್ಣವಾಗಿ ಬದಲಾಗಿಬಿಟ್ಟಿದೆ ಎಂದು ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದೆರಡು ವರ್ಷದಲ್ಲಿನ ಸಚಿನ್‌ ಅವರ ಅಮೋಘ ಫಾರ್ಮ್‌ನಿಂದ ನಾನು ಅಚ್ಚರಿಗೊಂಡಿಲ್ಲ. ಯಾಕೆಂದರೆ ಸಚಿನ್ ದೃಷ್ಟಿಕೋಣವು ಸಂಪೂರ್ಣ ಬದಲಾಗಿ ಬಿಟ್ಟಿದೆ. ಇದು ಅವರನ್ನು ದಶಕದಲ್ಲೇ ಶ್ರೇಷ್ಠ ಆಟಗಾರರನ್ನಾಗಿಸಿದೆ. ಹತ್ತು ವರ್ಷಗಳ ಹಿಂದೆ ಅವರು ಪಂದ್ಯವನ್ನು ಸಮೀಪಿಸುತ್ತಿದ್ದ ರೀತಿ ವಿಭಿನ್ನವಾಗಿತ್ತು. ಅಂದು ತೀವ್ರ ಒತ್ತಡದಲ್ಲಿ ಆಡುತ್ತಿದ್ದ ಅವರು ಹಲವು ದಾಖಲೆಗಳನ್ನು ಬಾರಿಸುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಆದರೆ ಅವರೀಗ ಹೆಚ್ಚು ಸ್ವತಂತ್ರರಾಗಿ ಆಡುತ್ತಿದ್ದಾರೆ ಎಂದವರು ವಿವರಿಸಿದರು.

37ರ ಹರೆಯದಲ್ಲೂ ಸಚಿನ್ ಆಡುತ್ತಿರುವ ರೀತಿಯನ್ನು ಗಮನಿಸಿ; 28ರ ವಯಸ್ಸಿನಲ್ಲಿ ಅವರು ಈ ರೀತಿ ಆಡಿದ್ದಾರೆಯೇ?. ಸಮಕಾಲೀನ ಶ್ರೇಷ್ಠ ಆಟಗಾರರಾದ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ವೆಸ್ಟ್‌ಇಂಡೀಸ್‌ನ ಬ್ರ್ಯಾನ್ ಲಾರಾ ಅವರಿಗೆ ಸಚಿನ್ ಹತ್ತಿರ ಕೂಡಾ ತಲುಪಲಾಗಲಿಲ್ಲ. ಅಂತಹ ಪ್ರತಿಭೆಯನ್ನು ಲಿಟ್ಲ್ ಮಾಸ್ಟರ್ ಹೊಂದಿದ್ದಾರೆ ಎಂದವರು ಹೇಳಿದರು.

ಇಷ್ಟೆಲ್ಲಾ ಸಾಧನೆಗೆ ಅವರ ಸಮರ್ಥವಾದ ತಂತ್ರವೇ ಕಾರಣ. ಅವರಿಗೆ ಪ್ರಾಯ ಒಂದು ವಿಷಯವೇ ಅಲ್ಲ. ಹಾಗಾಗಿ ಹಲವು ದಾಖಲೆಗಳನ್ನು ಅಳಿಸಿ ಹಾಕಿರುವ ಅವರ ಸಾಮರ್ಥ್ಯದ ಬಗ್ಗೆ ಅಚ್ಚರಿಯೇನಿಲ್ಲ. ಇದು ಮುಂಬೈಕರ್‌ಗೆ ದೇವರು ಕರುಣಿಸಿದಕೊಡುಗೆಯಾಗಿದೆ. ಸದ್ಯ ಅವರ ಫಾರ್ಮ್ ನಿಜವಾಗಿಯೂ ಭಾರತೀಯ ಕ್ರಿಕೆಟ್‌ಗೆ ಮಹತ್ತರವಾಗಿದೆ ಎಂದವರು ಹೇಳಿದರು.

ಸಚಿನ್ ಇನ್ನೆಷ್ಟೂ ಸಮಯ ಆಡುವುದನ್ನು ನಿರೀಕ್ಷಿಸಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಭಾರತದ ಮಹಾನ್ ಕ್ರಿಕೆಟಿಗ ಕಪಿಲ್, ಇದನ್ನು ಅವರೇ ನಿರ್ಧರಿಸಬೇಕು. ನನ್ನ ಪ್ರಕಾರ ಎಲ್ಲಿಯವರೆಗೂ ಅವರು ಕ್ರಿಕೆಟನ್ನು ಆನಂದಿಸುತ್ತಾರೋ ಹಾಗೂ ದೈಹಿಕ ಕ್ಷಮತೆ ಹೊಂದಿರುತ್ತಾರೋ ಅಲ್ಲಿಯವರೆಗೆ ಆಟ ಮುಂದುವರಿಸಬಹುದು. ಅಷ್ಟೇ ಅಲ್ಲದೆ ತಂಡಕ್ಕಾಗಿ ಪಂದ್ಯ ಗೆಲ್ಲಿಸಿಕೊಡುವ ನಿರ್ವಹಣೆ ನೀಡಬೇಕು. ಇದನೆಲ್ಲಾ ನಾವು ಹಿಂದುಗಡೆ ಕುಳಿತು ಆನಂದಿಸಲಿದ್ದೇವೆ ಎಂದವರು ಹೇಳಿದರು.

ಯುವಿಗೂ ಬೆಂಬಲ...
ಅದೇ ವೇಳೆ ಐಪಿಎಲ್‌ನಲ್ಲಿ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರಿಗೂ ಕಪಿಲ್ ದೇವ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಯುವಿ ಉತ್ತಮ ಪ್ರತಿಭೆಯುಳ್ಳ ಆಟಗಾರ. ಇತ್ತೀಚೆಗಷ್ಟೇ ಗಾಯದಿಂದ ಗುಣಮುಖರಾಗಿರುವ ಅವರಿಗೆ ಫಾರ್ಮ್‌ಗೆ ಮರಳಲು ಸ್ವಲ್ಪ ಕಾಲಾವಧಿ ನೀಡಿ ಎಂದವರು ಹೇಳಿದರು.

No comments: