VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 6, 2010

ಕಲ್ಪನೆಗೆ ಅಕ್ಷರ ರೂಪ ನೀಡಿದ ಹುಡುಗಿ ಮಮ್ತಾಝ್ ವಿ.ಕುಕ್ಕಾಜೆ



`ನಾನು ಚಿಕ್ಕವಳಾಗಿದ್ದಾಗಲೇ ನನ್ನ ಅಜ್ಜಿ,ಅಪ್ಪ, ಅಮ್ಮ ನನಗೆ ಕಥೆ ಹೇಳ್ತಾ ಇದ್ರು. ಪ್ರೈಮರಿಯಲ್ಲಿ ರೀಟಾ ಟೀಚರ್ ಹೇಳುತ್ತಿದ್ದ ಕಥೆಗಳಂತೂ ನನಗೆ ಈಗಲೂ ನೆನಪಿದೆ.

ಕಲ್ಪನೆಗೊಂದು ದಾರಿ... ಇದು ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯ ಒಂಭತ್ತನೆ ತರಗತಿ ಯ ವಿದ್ಯಾರ್ಥಿನಿ ಮಮ್ತಾಝ್ ವಿ.ಕುಕ್ಕಾಜೆಯ ಕಲ್ಪನೆಯಲ್ಲಿ ಮೂಡಿ ಬಂದ ಕಥಾಸಂಕಲನ.

ಮಂಚಿಯ ಅಬ್ದುಲ್ ಖಾದರ್ ಮತ್ತು ಮೈಮುನಾ ದಂಪತಿಗಳ ಪುತ್ರಿ ಮಮ್ತಾಜ್, ತನ್ನದಾದ ಈ ಕಥಾ ಸಂಕಲನವನ್ನು ಹೊರ ತರುವುದರೊಂದಿಗೆ ಮಕ್ಕಳ ಸಾಹಿತ್ಯ ಲೋಕದಲ್ಲಿ ಆಗಮನದ ಮುನ್ನುಡಿ ಬರೆದಿದ್ದಾಳೆ. `ಚಿಕ್ಕವಯಸ್ಸಿನಿಂದಲೇ ನನಗೆ ಕಥೆ ಅಂದ್ರೆ ತುಂಬಾ ಇಷ್ಟ. ಮೂರನೇ ತರಗತಿಯವರೆಗೆ ನಾನು ಕಲಿತ ವಿಟ್ಲದ ಸೈಂಟ್ ರೀಟಾ ಶಾಲೆಯಲ್ಲಿ ವಾರದ ಒಂದು ಪಿರೇಡ್ ನೀತಿ ಕಥೆಗಳ ಬಗ್ಗೆಯೇ ಇತ್ತು.ಅದು ನನಗೆ ಕಥೆಯ ಹುಚ್ಚು ಹಿಡಿಸಿತು' ಎನ್ನುತ್ತಾಳೆ ಮಮ್ತಾಜ್.

``ಈಜಿ ಜಯಿಸಿ ಬಂದ ಭಾಗ್ಯ, ಭಿಕ್ಷುಕ ಕಲಿಸಿದ ಪಾಠ, ಮೇಲು-ಕೀಳು, ನಿಜವಾದ ಗೆಳೆತನ" ಹೀಗೆ ೧೧ ಕಥೆಗಳನ್ನು ಹೊಂದಿರುವ ಇದರ ಕೆಲವು ಕಥೆಗಳು, ಹೊಸ ಚಿಂತನೆಯ ಆಶಯವನ್ನು ಪ್ರಶ್ನಿಸುತ್ತಾ ಅಂತ್ಯವಾದರೆ, ಇನ್ನೂ ಕೆಲವು ಸುಖಾಂತ್ಯಗೊಂಡಿವೆ. ಬದುಕಿನ ವಿವಿಧ ಹಂತಗಳಲ್ಲಿ ಮನುಷ್ಯನ ವಿಭಿನ್ನ ವ್ಯಕ್ತಿತ್ವವನ್ನು ತನ್ನದಾದ ದೃಷ್ಠಿಕೋನದಲ್ಲಿ ನೋಡುತ್ತಾ, ವಿವರಿಸುತ್ತಾ ಹೆಣೆದಿ ರುವ ಕಥಾ ಪಾತ್ರಗಳು ಆಕೆಯ ಮನದಾಳದ ವಿಚಾರವನ್ನು ಅಭಿವ್ಯಕ್ತಗೊಳಿಸಿವೆ.

ಈಕೆಯ ಕಥೆಗಳ ಚಿಕ್ಕ ಕಣಜ, ಪುಸ್ತಕ ರೂಪದಲ್ಲಿ ಹೊರ ಬರುವಲ್ಲಿ ಆಕೆ ಕಲಿಯುತ್ತಿರುವ ಶಾಲಾ ಶಿಕ್ಷಕರ ಪಾತ್ರವೂ ಇದೆ. ಶಾಲೆಯ ಮುಖ್ಯ ಶಿಕ್ಷಕರಾದ ಟಿ.ಪುರುಷೋತ್ತಮ್, ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು, ಸಹಪಾಠಿ ವಿದ್ಯಾರ್ಥಿಗಳು ತನಗೆ ಪ್ರೇರಣೆ ನೀಡಿದ್ದರಿಂದ ತನ್ನಿಂದ ಕಥಾ ಸಂಕಲನವೊಂದು ಹೊರ ಬಂದಿದೆ ಎಂದು ಮಮ್ತಾಜ್ ಅಭಿಮಾನದಿಂದ ಹೇಳುತ್ತಾಳೆ.

3 comments:

Padyana Ramachandra said...

ಗ್ರಾಮಾಂತರ ಪ್ರದೇಶದಲ್ಲಿ ಹುದುಗಿದ್ದ ಅರಳುವ ಯುವ ಪ್ರತಿಭೆಯನ್ನು ನಾಡಿನ ಜನತೆಗೆ ಪರಿಚಯಿಸಿದ ಮಾಧ್ಯಮ ಮಿತ್ರರಿಗೆ ವಂದನೆಗಳು.

ಪ.ರಾಮಚಂದ್ರ,
ರಾಸ್ ಲಫ್ಫಾನ್, ಕತಾರ್

ch.hameed said...

well done.... keep it up

Ashraf manzarabad said...

great...best of luck sister..