VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 6, 2010

ನಿತ್ಯಾನಂದ ರಾಸಲೀಲೆ ಪ್ರಕರಣದ ವಜಾ ಬೇಡ:ವಕೀಲರ ವಾದ

ನಿತ್ಯಾನಂದ ಸ್ವಾಮೀಜಿ ರಾಸಲೀಲೆ ಪ್ರಕರಣದ ಕುರಿತಂತೆ ದೃಶ್ಯಾವಳಿಯಲ್ಲಿ ಇರುವುದು ತಾನಲ್ಲ ಎಂದು ಖುದ್ದು ಸ್ವಾಮಿಯೇ ಅಲ್ಲಗಳೆದಿಲ್ಲ. ಅಲ್ಲದೇ ಹಲವಾರು ಅಂಶಗಳು ನಿತ್ಯಾನಂದನ ಪ್ರಕರಣಕ್ಕೆ ಪುಷ್ಠಿ ನೀಡುತ್ತವೆ. ಈ ಹಂತದಲ್ಲಿ ಪ್ರಕರಣದ ವಜಾ ಸರಿಯಲ್ಲ ಎಂದು ಪ್ರಕರಣದ ವಜಾ ಕೋರಿ ನಿತ್ಯಾನಂದ ಪರ ವಕೀಲರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸರ್ಕಾರಿ ವಕೀಲರು ಮಂಗಳವಾರ ಆಕ್ಷೇಪಣೆ ಸಲ್ಲಿಸಿ ವಾದ ಮಂಡಿಸಿದ್ದಾರೆ.

ಅಲ್ಲದೇ ಬಿಡದಿ ಆಶ್ರಮದ ಹಲವು ಸ್ವಾಮೀಜಿಗಳು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸ್ವಾಮೀಜಿಗಳ ಹೇಳಿಕೆಗಳನ್ನು ಕೂಡ ದಾಖಲು ಮಾಡಿಕೊಳ್ಳಲಾಗಿದೆ. ಅಲ್ಲದೇ ಬಿಡದಿ ಆಶ್ರಮದಲ್ಲಿ ಅಲಗನ್ ಎಂಬಾತನ ಆತ್ಮಹತ್ಯೆ ಪ್ರಕರಣ ಕುರಿತಂತೆ ಬಿಜಿಎಸ್ ಆಸ್ಪತ್ರೆಯಿಂದ ದಾಖಲೆ ಪಡೆಯಲಾಗಿದೆ. ಡಿಸೆಂಬರ್ 28ರಂದು ಅಲಗನ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಘಟನೆ ಕೂಡ ನಿತ್ಯಾನಂದನ ಪ್ರಕರಣಕ್ಕೆ ಸಾಕಷ್ಟು ಪುಷ್ಠಿ ನೀಡುತ್ತದೆ ಎಂದು ಸರ್ಕಾರಿ ಪರ ವಕೀಲರು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ನಿತ್ಯಾನಂದ ಸ್ವಾಮೀಜಿಯಿಂದ ವಂಚನೆಗೊಳಗಾದವರ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ವಂಚನೆ ಬಗ್ಗೆ ವಿದೇಶದ ಡೊಗ್ಲಾಸ್ ಮೆಕ್ಲರ್ ಇ ಮೇಲ್ ರವಾನಿಸಿದ್ದಾರೆ. ಇ-ಮೇಲ್ ಸಂದೇಶದಲ್ಲಿನ ಅಂಶಗಳು ಕೂಡ ಸ್ವಾಮೀಜಿಯ ಕಪಟತನದ ಬಗ್ಗೆ ಬೆಳಕು ಚೆಲ್ಲುತ್ತದೆ. ಆ ನಿಟ್ಟಿನಲ್ಲಿ ಪ್ರಕಣದ ವಜಾ ಸರಿಯಲ್ಲ ಎಂದು ವಾದಿಸಿದ ಸರ್ಕಾರಿ ವಕೀಲರು, ಸತ್ಯಾಸತ್ಯತೆ ಹೊರಬಿದ್ದ ನಂತರ ಕ್ರಮಕ್ಕೆ ಸೂಚನೆ ನೀಡಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡರು.

ಪ್ರಕರಣದ ಬಗ್ಗೆ ಸರ್ಕಾರಿ ಪರ ವಕೀಲರ ವಾದವನ್ನು ಆಲಿಸಿದ ಹೈಕೋರ್ಟ್ ಏಕಸದಸ್ಯಪೀಠ ಮುಂದಿನ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ಮುಂದೂಡಿದೆ.

No comments: