
ಭಾರೀ ಯಶಸ್ಸು ಕಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾದರಿಯಲ್ಲೇ ಪುಟ್ಬಾಲ್ ಲೀಗ್‌ವೊಂದನ್ನು ಆರಂಭಿಸಲು ರಾಜಸ್ತಾನ ರಾಯಲ್ಸ್ ತಂಡದ ಮಾಲಕಿ ಶಿಲ್ಪಾ ಶೆಟ್ಟಿ ಉತ್ಸುಕತೆ ತೋರಿರುವುದಾಗಿ ವರದಿಗಳು ತಿಳಿಸಿವೆ.
ಶಿಲ್ಪಾಳ ಈ ಮಹತ್ತರ ಯೋಜನೆಗೆ ಪತಿ ರಾಜ್ ಕುಂದ್ರಾ ಹಾಗೂ ದಿ ಎಮರ್ಜಿಂಗ್ ಮಿಡಿಯಾ ಗ್ರೂಪ್ ಸಾಥ್ ನೀಡಲಿದೆ. ಇದರೊಂದಿಗೆ ಐಪಿಎಲ್ ಕ್ರಿಕೆಟ್ ಲೀಗ್‌ನಲ್ಲಿ ತಂಡವೊಂದನ್ನು ಹೊಂದಿರುವ ಶಿಲ್ಪಾ-ಕುಂದ್ರಾ ಜೋಡಿ ಪುಟ್ಬಾಲ್‌ನಲ್ಲೂ ದುಡ್ಡು ಬಾಚಿಕೊಳ್ಳುವ ಯೋಜನೆಯಿರಿಸಿಕೊಂಡಿದ್ದಾರೆ.
ಭಾರತ ಸಹಿತ ವಿದೇಶಗಳ ಪ್ರಖ್ಯಾತ ಫುಟ್ಬಾಲ್ ಸ್ಟಾರ್‌ಗಳನ್ನು ಲೀಗ್‌ನಲ್ಲಿ ಆಡಿಸಲಾಗುವ ಇರಾದೆಯಿದೆ. ಆ ಮೂಲಕ ದೇಶದ ಪುಟ್ಬಾಲ್‌ನ ಮೂಲಭೂತ ಸೌಕರ್ಯಗಳು ಕೂಡಾ ಅಭಿವೃದ್ಧಿಯಾಗಲಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಆಲ್ ಇಂಡಿಯಾ ಪುಟ್ಬಾಲ್ ಫೆಡರೇಷನ್ ಜೊತೆಗಿತ ಮಾತುಕತೆ ಕೂಡಾ ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ.
ರಾಜ್ ಕುಂದ್ರಾ ಕೂಡಾ ಪುಟ್ಬಾಲ್ ಕ್ರೀಡೆಯ ಕಟ್ಟಾ ಅಭಿಮಾನಿಯಾಗಿದ್ದು, ಈ ಮಹತ್ತರ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಉತ್ಸುಕತೆ ತೋರಿದ್ದಾರೆ. ಆ ಮೂಲಕ ಅಭಿಮಾನಿಗಳನ್ನು ರಂಜಿಸುವ ಜೊತೆಗೆ ದೇಶದ ಯುವ ಆಟಗಾರರಿಗೆ ಉತ್ತಮ ಅವಕಾಶ ದೊರಕಲಿದೆ.
No comments:
Post a Comment