ಶಿವಮೊಗ್ಗ, ಎ. ೧೨: ಶಿವಮೊಗ್ಗದಲ್ಲಿ ಮಾ. ೧ರಂದು ನಡೆದ ಕೋಮು ಗಲಭೆಗೆ ಮುಸ್ಲಿಂ ಮುಖಂ ಡರ ಬೇಜವಾಬ್ದಾರಿ ಹಾಗೂ ಪೊಲೀಸರ ನಿಷ್ಕ್ರಿಯತೆಯೇ ಕಾರಣ ಎಂದು ಕೋಮು ಸೌಹಾರ್ದ ವೇದಿಕೆ ಹಾಗೂ ಪಿಯುಸಿಎಲ್‌ನ ಸತ್ಯಶೋಧನಾ ಸಮಿತಿ ತನ್ನ ಮಧ್ಯಂತರ ವರದಿಯಲ್ಲಿ ಅಭಿ ಪ್ರಾಯಪಟ್ಟಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕೋಮು ಸೌಹಾರ್ದ ವೇದಿಕೆಯ ಹಾಗೂ ಪಿಯುಸಿಎಲ್‌ನ ಮುಖಂ ಡರಾದ ಜಿ. ರಾಜಶೇಖರ್, ಕೆ.ಎಲ್. ಅಶೋಕ್, ಕೆ. ಫನಿರಾಜ್, ಕೆ.ಪಿ. ಶ್ರೀಪಾಲ್ ಮೊದಲಾದ ಮುಖಂಡರು ಈ ಮಾಹಿತಿಯನ್ನು ನೀಡಿದರು.
ಮಾ. ೧ರಂದು ಶಿವಮೊಗ್ಗದಲ್ಲಿ ನಡೆದ ಕೋಮು ಗಲಭೆಯನ್ನು ನಿಯಂತ್ರಿಸುವಲ್ಲಿ ಪೊಲೀಸ್ ಹಾಗೂ ಜಿಲ್ಲಾಡಳಿತ ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದು, ಗಲಭೆಯಿಂದ ಸಂತ್ರಸ್ತರಾದವರನ್ನು ಭೇಟಿ ಮಾಡಿ ಅವರಲ್ಲಿ ವಿಶ್ವಾಸವನ್ನು ಮೂಡಿಸುವಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ, ಇಲ್ಲಿನ ಶಾಸಕರಾದ ಕೆ.ಎಸ್. ಈಶ್ವರಪ್ಪ ಹಾಗೂ ಸಂಸದರು ವಿಫಲರಾದರು. ಈ ಮೂಲಕ ತಮ್ಮ ಬೇಜವಬ್ದಾರಿಯನ್ನು ಮೆರೆದಿದ್ದಾರೆ ಎಂದು ಆರೋಪಿಸಿದರು.
ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಲೇಖನದ ವಿರುದ್ದ ಮುಸ್ಲಿಂ ಸಂಘಟನೆಗಳು ನಡೆಸಿದ ಪ್ರತಿ ಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ಸಂದರ್ಭದಲ್ಲಿ ಉದ್ರಿಕ್ತ ಯುವಕರು ಹಿಂದೂ ಧರ್ಮೀಯರ ಅಂಗಡಿಗಳ ಮೇಲೆ ಕಲ್ಲು ತೂರಿ ಹಾಗೂ ಹಿಂದೂ ಸಮಾ ಜೋತ್ಸವದ ಫ್ಲೆಕ್ಸ್‌ಗಳನ್ನು ಹರಿದಿ ದ್ದಾರೆ. ಈ ಸಂದರ್ಭದಲ್ಲಿ ಉದ್ರಿಕ್ತ ಮುಸ್ಲಿಂ ಯುವಕರನ್ನು ನಿಯಂತ್ರಿಸುವಲ್ಲಿ ಮುಸ್ಲಿಂ ಮುಖಂಡರ ಬೇಜವಾಬ್ದಾರಿ ಕಂಡು ಬರುತ್ತದೆ. ಈ ರೀತಿಯ ಘಟನೆ ಜರಗುತ್ತದೆ ಎಂದು ಮುನ್ಸೂಚನೆ ಇದ್ದ ರೂ ಪೊಲೀಸರು ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲರಾಗಿ ದ್ದಾರೆ ಎಂದು ಸಂಘಟನೆಯು ತನ್ನ ಮಧ್ಯಾಂತರ ವರದಿಯಲ್ಲಿ ತಿಳಿಸಿದೆ.
ಗೋಲಿಬಾರ್‌ನಲ್ಲಿ ಸಾವಿಗೀಡಾದ ಸಾದಿಕ್‌ನ ಸಾವಿನ ಬಗ್ಗೆ ಸಮಿತಿಯು ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಗಲಭೆಯಲ್ಲಿ ಪೊಲೀಸರು ಒಂದು ಧರ್ಮದವರನ್ನು ಗುರಿಯಾಗಿಟ್ಟು ಕೊಂಡು ಗೋಲಿಬಾರ್ ನಡೆಸಿದ್ದಾರೆ. ಸಾದಿಕ್ ಸಾವಿನ ಬಗ್ಗೆ ಅನುಮಾನಗಳಿದ್ದು, ಈ ಸಾವಿನ ಕುರಿತು ಅಂತಿಮ ವರದಿಯಲ್ಲಿ ಬಹಿರಂಗಪಡಿಸಲಾಗುವುದು ಎಂದರು.
ಗಲಭೆ ವೇಳೆ ಪೊಲೀಸರು ಮುಸ್ಲಿಂರನ್ನು ಗುರಿಯಾಗಿಟ್ಟು ಕೊಂಡು ಗುಂಡು ಹಾರಿಸಿದ್ದಾರೆ. ಕೀ ಹೋಲ್ ಮೂಲಕ ಗುಂಡಿನ ಸುರಿಮಳೆ ಸುರಿಸಿದ್ದು, ಇದರಿಂದ ಜಕಾವುಲ್ಲಾ ಅವರ ಕಣ್ಣಿಗೆ ಹಾನಿಯಾಗಿದೆ. ೧೭ ವರ್ಷದ ಶಾಬಾಜ್ ಖಾನ್‌ಗೆ ಗಾಯವಾಗಿದೆ. ಗಲಭೆ ಆರಂಭಗೊಳ್ಳುವ ಸಂದರ್ಭದಲ್ಲಿ ಪೊಲೀಸರು ನಿರ್ಲಿಪ್ತರಾಗಿದ್ದರು. ಆದರೆ ಬಳಿಕ ಏಕಾಏಕಿ ತಮ್ಮ ಪೌರುಷತನ ತೋರಿಸಿದರು. ಮುಸ್ಲಿಂ ಯುವಕರು ಹಿಂದೂ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು ವೀಡಿಯೋ ದಲ್ಲಿ ದಾಖಲಾಗಿದೆ. ಆದರೆ ಆ ಬಳಿಕ ಮುಸ್ಲಿಂ ಅಂಗಡಿಗಳ ಮೇಲೆ ಹಿಂದೂಗಳು ನಡೆಸಿದ ದಾಳಿ ಯಾವುದೇ ವೀಡಿಯೋದಲ್ಲಿ ದಾಖಲಾಗಿಲ್ಲ. ಹೀಗಾಗಿ ಪೊಲೀಸರು ಮುಸ್ಲಿಂ ಯುವಕರನ್ನು ಮಾತ್ರ ಬಂಧಿಸಿದ್ದು, ಹಿಂದೂಗಳನ್ನು ಕೂಡ ಬಂಧಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪ್ರೊ ನಗರಗೆರೆ ರಮೇಶ್, ಮಹ್ಮದ್ ಕಕ್ಕಿಂಜೆ, ದೀಪು, ಪಿ. ಆರ್. ಕೃಷ್ಣಪ್ಪ, ಚಂದ್ರ ಶೇಖರ್, ರಘುನಂದನ್ ಮತ್ತಿತರರು ಉಪಸ್ಥಿತರಿದ್ದರು.
Subscribe to:
Post Comments (Atom)
No comments:
Post a Comment