VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 16, 2010

ಸಕಲೇಶಪುರ: ಅಜಾದ್ ಯಂಗ್ ಮೆನ್ಸ್ ಅಸೋಷಿಯೇಶನ್ ಆಶ್ರಯದಲ್ಲಿ ಏಪ್ರಿಲ್ 19 ಸೋಮವಾರದಂದು ಅಂಬೇಡ್ಕರ್ ಜಯಂತಿ ಮತ್ತು ಬಡ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ


ಸಕಲೇಶಪುರ : ಏಪ್ರಿಲ್ ೧೬: ನಗರದ ಆಜಾದ್ ಯಂಗ್ ಮೆನ್ಸ್ ಆಶ್ರಯದಲ್ಲಿ ಏಪ್ರಿಲ್ ೧೯ ಸೋಮವಾರದಂದು ನಗರದ ಲಯನ್ಸ್ ಕ್ಲಬ್ ಹಾಲಿನಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ಬಾಬಾಸಾಹೇಬ್.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣಾ ಕಾರ್ಯಕ್ರಮ ಮತ್ತು ಬಡ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಲಿದೆ.
ನಗರದ ಶಾಸಕ ಶ್ರೀ ಹೆಚ್.ಕೆ ಕುಮಾರಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಉಪ್ಪಿನಂಗಡಿ ಕೇಂದ್ರ ಜುಮ್ಮಾ ಮಸೀದಿಯ ಖತೀಬ್ ಜನಾಬ್ ಎಸ್.ಬಿ. ಮಹಮ್ಮದ್ ದಾರಿಮಿ ಮತ್ತು ಸಕೆಲೆಶಪುರ ಬದ್ರಿಯಾ ಜುಮ್ಮಾ ಮಸೀದಿಯ ಖತೀಬ್ ಬಷೀರ್ ಸಅದಿ ಸಾನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ವಾರ್ತಾ ಭಾರತಿ ದಿನಪತ್ರಿಕೆಯ ಉಪಸಂಪಾದಕರೂ, ವಿಶ್ವ ಕನ್ನಡಿಗ ನ್ಯೂಸ್ ನ ಕಾರ್ಯನಿರ್ವಾಹಕ ಸಂಪಾದಕರೂ ಆದ ಜನಾಬ್ ಶಂಶೀರ್ ಬುಡೋಳಿ, ಮಾಜಿ ಶಾಸಕ ಶ್ರೀ ಹೆಚ್.ಎಂ. ವಿಶ್ವನಾಥ್, ತಾಲೂಕ್ ಕಾಂಗ್ರೆಸ್ ಐ ಸಮಿತಿಯ ಅಧ್ಯಕ್ಷರಾದ ಶ್ರೀ ಹೆಚ್.ಪಿ. ಕಾಂತರಾಜ್, ಜಯಕರ್ನಾಟಕ ಸಂಘಟನೆಯ ರಾಜ್ಯ ಗೌರವಾಧ್ಯಕ್ಷರಾದ ಶ್ರೀ ಬೈರಮುಡಿ ಚಂದ್ರು, ಜಿಲ್ಲಾ ಪಂಚಾಯತಿ ಸದಸ್ಯರಾದ ಶ್ರೀ ಪರ್ವತಯ್ಯ , ದಲಿತ ಮುಖಂಡರಾದ ಶ್ರೀ ಡಿ.ಸಿ. ಸಣ್ಣ ಸ್ವಾಮಿ, ಎಸ್ ಎನ್ ಮಲ್ಲಪ್ಪ, ಪುರಸಭಾ ಅಧ್ಯಕ್ಷ ಇಬ್ರಾಹಿಮ್ ಯಾದ್ಗಾರ್ , ಎ.ಪಿ.ಎಂ.ಸಿ. ಮಾಜಿ ನಿರ್ದೇಶಕ ಶ್ರೀ ಸಲೀಂ ಅಬ್ದುಲ್ಲಾ , ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ಮಲ್ನಾಡ್ ಮಹಬೂಬ್ ಭಾಗವಹಿಸಲಿದ್ದಾರೆ.
ಅಜಾದ್ ಯಂಗ್ಮೆನ್ಸ್ ಅಸೋಷಿಯೇಶನ್ ಅಧ್ಯಕ್ಷರಾದ ಶ್ರೀ ಕಶ್ವ ಸುಲೈಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಹಜರತ್ ಮಹಬೂಬ್ ಸುಭಾನಿ ನೂರಾನಿ ಯತೀಂ ಖಾನದ ಪ್ರಧಾನ ಕಾರ್ಯದರ್ಶಿ ಜನಾಬ್ ಎಸ್.ಎಂ. ಮಹಮ್ಮದ್ (ಚೈಬಾವು) ಬಡ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಿದ್ದಾರೆ ಎಂದು ಅಜಾದ್ ಯಂಗ್ಮೆನ್ಸ್ ಅಸೋಷಿಯೇಶನ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ನಿಜಾರ್ ಮಂಜ್ರಾಬಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments: