VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 9, 2010

ಶೇರು ವಿವಾದ; ರದ್ದು ಭೀತಿಯಲ್ಲಿ ಐಪಿಎಲ್ 'ಕೊಚ್ಚಿ' ಫ್ರಾಂಚೈಸಿ

ಇತ್ತೀಚೆಗಷ್ಟೇ ನಡೆದ ಐಪಿಎಲ್ ಹರಾಜಿನ ಸಂದರ್ಭದಲ್ಲಿ ಅಚ್ಚರಿಯ ಗೆಲುವು ಸಾಧಿಸಿ ಫ್ರಾಂಚೈಸಿ ಪಡೆದುಕೊಂಡಿದ್ದ 'ಕೊಚ್ಚಿ' ತಂಡವು ಇದೀಗ ರದ್ದು ಭೀತಿಯಲ್ಲಿದೆ. ಮಾಲಕತ್ವ ವಿಚಾರಕ್ಕೆ ಸಂಬಂಧಪಟ್ಟಂತೆ ಐಪಿಎಲ್ ಆಯುಕ್ತ ಲಲಿತ್ ಮೋದಿ ಜತೆ ಮುನಿಸಿಕೊಂಡಿರುವ ತಂಡವನ್ನು ಬಿಸಿಸಿಐ ರದ್ದು ಮಾಡುವ ಸಾಧ್ಯತೆಗಳಿವೆ.

ಇತ್ತೀಚೆಗೆ ನಡೆದ ಹರಾಜಿನಲ್ಲಿ ಕೊಚ್ಚಿ ತಂಡವನ್ನು ರೆಂಡೆವೋಸ್ ಸ್ಪೋರ್ಟ್ಸ್ 1,300 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ಆದರೆ ಫ್ರಾಂಚೈಸಿ ಇದೀಗ ತನ್ನ ಶೇಕಡಾ 25ರಷ್ಟು ಶೇರನ್ನು ಅಜ್ಞಾತ ವ್ಯಕ್ತಿಗಳಿಗೆ ಹಸ್ತಾಂತರಿಸಿದೆ ಎಂದು ಹೇಳಲಾಗಿದೆ.

ಕೊಚ್ಚಿ ತಂಡದ ಶೇರು ಪಡೆದಿರುವ ಆ ಅಜ್ಞಾತ ವ್ಯಕ್ತಿಗಳಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ, ಇದೀಗ ಆಡುತ್ತಿರುವ ಆಟಗಾರ ಹಾಗೂ ಕೇಂದ್ರ ಸಚಿವರೊಬ್ಬರು ಶಾಮೀಲಾಗಿದ್ದಾರೆಂದು ವರದಿಯಾಗಿದೆ.

ಇದೀಗ ಫ್ರಾಂಚೈಸಿ ಶೇರು ಒಪ್ಪಂದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆ ಹಾಗೂ ತಂಡದಲ್ಲಿ ಯಾರಿಗೆಲ್ಲಾ ಶೇರು ಹಕ್ಕಿದೆ ಎಂಬುದರ ಪ್ರಮಾಣ ಪತ್ರಗಳನ್ನು ಹಾಜರುಪಡಿಸುವಂತೆ ಕೊಚ್ಚಿ ತಂಡಕ್ಕೆ ಬಿಸಿಸಿಐ ಆದೇಶ ನೀಡಿದೆ. ಇದಕ್ಕೆ ಸ್ಪಂದಿಸಿರುವ ಕೊಚ್ಚಿ ತಂಡವು ಶುಕ್ರವಾರವೇ ದಾಖಲೆ ಪತ್ರಗಳನ್ನು ಸಲ್ಲಿಸಲಿದೆಯೆಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಕೊಚ್ಚಿ ತಂಡದ ಫ್ರಾಂಚೈಸಿ ಹಕ್ಕು ರದ್ದುಗೊಂಡರೆ ನಂತರದ ಅವಕಾಶ ಗುಜರಾತ್‌ನ ಆದಾನಿ ಗ್ರೂಪ್ ಪಡೆಯಲಿದೆ.

ಇವೆಲ್ಲಕ್ಕೂ ಪ್ರತಿಕ್ರಿಯೆ ನೀಡಿರುವ ಕೊಚ್ಚಿ ತಂಡದ ಸಹ ಮಾಲಕ ವಿವೇಕ್ ವೇಣುಗೋಪಾಲ್, ಶೇ.25ರಷ್ಟು ಶೇರನ್ನು ವರ್ಗಾವಣೆ ಮಾಡಲಾಗಿದೆಯೆಂಬುದು ಆಧಾರ ರಹಿತವಾದದ್ದು. ನಾವು ಹರಾಜಿನ ದಾಖಲೆಗಳ ಸರಿಯಾದ ಪಾಲನೆ ಮಾಡಿದ್ದೇವೆ. ಈ ಕುರಿತಂತೆ ಬಿಸಿಸಿಐನಿಂದ ಅಧಿಕೃತ ಹೇಳಿಕೆ ಲಭಿಸಿಲ್ಲ. ಆದರೆ ಸ್ಪಷ್ಟೀಕರಣಕ್ಕಾಗಿ ಎಲ್ಲಾ ದಾಖಲೆಗಳನ್ನು ಸಮರ್ಪಿಸಲಾಗುವುದು ಎಂದು ಹೇಳಿದ್ದಾರೆ.

No comments: