ಬೆಂಗಳೂರು, ಏ. 5 : ಬಹುನಿರೀಕ್ಷಿತ ಬಿಬಿಎಂಪಿ ಚುನಾವಣೆಯ ಸಂಪೂರ್ಣ ಫಲಿತಾಂಶ ಇನ್ನೇನು ಕೆಲ ಹೊತ್ತಿನಲ್ಲಿ ಹೊರಬೀಳಲಿದೆ. ಸದ್ಯದ ಮಾಹಿತಿ ಪ್ರಕಾರ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಕಳಪೆ ಪ್ರದರ್ಶನ ನೀಡಿವೆ. ಬಿಜೆಪಿ ಅಧಿಕಾರಕ್ಕೆ ಕೇವಲ 10 ಸ್ಥಾನಗಳ ಅವಶ್ಯಕತೆ ಇದ್ದು, 85 ಅಭ್ಯರ್ಥಿಗಳು ಜಯದ ಮಾಲೆ ಧರಿಸಿದ್ದಾರೆ.
ಕಾಂಗ್ರೆಸ್-54 ಮತ್ತು ಜೆಡಿಎಸ್ 11 ಸ್ಥಾನಗಳಲ್ಲಿ ಜಯ ಗಳಿಸಿದ್ದು, ಒಟ್ಟಾರೆ 55 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಈ ಎರಡೂ ಪಕ್ಷಗಳೂ ಸೇರಿಕೊಂಡರೂ ಗದ್ದುಗೆ ಹಿಡಿಯಲು ಸಾಧ್ಯವಾಗದ ಮಾತು ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇತರರು 6 ಸ್ಥಾನಗಳನ್ನು ಗೆದ್ದಿದ್ದಾರೆ.
ಬನಶಂಕರಿ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದು, ಜೆಡಿಎಸ್ ನಿಂದ ಸ್ಪರ್ಧಿಸಿದ್ದ ದಿವಾನ್ ಅಲಿ ಗೆಲುವು ಸಾಧಿಸಿದ್ದಾರೆ. ದಿವಾನ್ ಅಲಿ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಯಲ್ಲಿ 11 ಕೇಸ್ ಗಳು ದಾಖಲಾಗಿದ್ದು, 7ರಲ್ಲಿ ಖುಲಾಸೆಗೊಂಡಿದ್ದಾರೆ.
ಬಿಜೆಪಿ ವಿಜಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ಇದು ಬಿಜೆಪಿ ಗೆಲುವಲ್ಲ, ಇಡೀ ಬೆಂಗಳೂರಿನ ಜನರ ಗೆಲುವು. ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಾ ಕಾಲ ಕಳೆದಿವೆ. ಅದಕ್ಕಾಗಿ ಮತದಾರ ತಕ್ಕ ಉತ್ತರ ನೀಡಿದ್ದಾನೆ. ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಕೈಗೆತ್ತಿಕೊಳ್ಳುತ್ತೇವೆ. ಬೆಂಗಳೂರಿನ ಜನ ವಿಶ್ವಾಸವಿಟ್ಟು ಮತ ನೀಡಿದ್ದಾರೆ. ಇದನ್ನು ಉಳಿಸಿಕೊಂಡು ಹೋಗುತ್ತೇವೆ ಎಂದು ಅವರು ಹೇಳಿದರು
Apr 5, 2010
Subscribe to:
Post Comments (Atom)
No comments:
Post a Comment