VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 9, 2010

ಯಾಕಾದ್ರೂ ರಾಜಕಾರಣಿಯಾದೆ ಎಂದು ಮರುಗುತ್ತಿರುವ ಕರಂದ್ಲಾಜೆ!


ಪ್ರಸಕ್ತ ಕೇವಲ ಶಾಸಕಿಯಾಗಿದ್ದರೂ ತನ್ನ ಕಾರ್ಯಶೈಲಿಯಿಂದ ಗಮನ ಸೆಳೆಯುತ್ತಿರುವ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿರುವ ಮಾತಿದು. ರಾಜಕಾರಣವೆನ್ನುವುದು ಅತ್ಯಂತ ಕೆಟ್ಟ ಕ್ಷೇತ್ರ ಎಂದು ಬಣ್ಣಿಸಿರುವ ಅವರು, ವಿದ್ಯಾರ್ಥಿನಿಯಾಗಿದ್ದಾಗ ಅತ್ಯುತ್ತಮ ಶಿಕ್ಷಣ ಪಡೆಯುತ್ತಿದ್ದರೆ ರಾಜಕೀಯಕ್ಕೆ ನಾನು ಬರುತ್ತಿರಲಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಶ್ರೀ ಹೊಸಮಠದಲ್ಲಿ ಗುರುವಾರ ನಡೆದ ಶ್ರೀ ನಟರಾಜ ಪ್ರತಿಷ್ಠಾನದ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ರಾಜಕೀಯ ಎಂಬುದು ಕುಲಗೆಟ್ಟು ಹೋಗಿರುವ ಕ್ಷೇತ್ರ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ವಿದ್ಯಾರ್ಥಿನಿಯಾಗಿದ್ದಾಗ ನಿಮ್ಮಂತೆ ಒಳ್ಳೆಯ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿದ್ದರೆ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗುತ್ತಿದ್ದೆ; ರಾಜಕೀಯ ಪ್ರವೇಶ ಮಾಡುತ್ತಿರಲಿಲ್ಲ. ರಾಜಕೀಯ ಎಂಬುದು ಅತ್ಯಂತ ಕೆಟ್ಟ ಕ್ಷೇತ್ರ. ನಾನು ಈ ಕ್ಷೇತ್ರಕ್ಕೆ ಬಂದಾಗಿದೆ ಎಂದರು.

ಈಗಿನ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ನೀವು ಒಳ್ಳೆಯ ಕಾಲೇಜಿನಲ್ಲಿ ಓದುತ್ತಿದ್ದು, ಉನ್ನತ ಮಟ್ಟದ ಶಿಕ್ಷಣ ಪಡೆಯುತ್ತಿದ್ದೀರಿ. ಹಾಗಾಗಿ ಉತ್ತಮ ಪ್ರಜೆಗಳಾಗಿ ಎಂದು ಕರಂದ್ಲಾಜೆ ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಅದೇ ಹೊತ್ತಿಗೆ ನಮ್ಮ ಯುವ ಜನತೆ ಸಮಕಾಲೀನ ಸಮಸ್ಯೆಗಳ ಕುರಿತು ಚಿಂತನೆ ನಡೆಸಬೇಕಾದ ಅಗತ್ಯವಿದೆ. ಸಮಾಜದಲ್ಲಿ ಈಗಲೂ ಉಳಿದುಕೊಂಡಿರುವ ಅಸ್ಪ್ರಶ್ಯತೆ ಇದರಲ್ಲಿ ಪ್ರಮುಖವಾದುದು. ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ತೊಡೆದು ಹಾಕಬೇಕಾಗಿದೆ. ಉಳಿದಂತೆ ನಮ್ಮನ್ನು ಕಾಡುತ್ತಿರುವ ಮತ್ತೊಂದು ಬೃಹತ್ ಸಮಸ್ಯೆ ನಕ್ಸಲಿಸಂ ಮತ್ತು ಭಯೋತ್ಪಾದನೆ. ನಮ್ಮ ನಡುವೆಯೇ ಇದ್ದ ಯುವಕ-ಯುವತಿಯರು ನಂತರದ ದಿನಗಳಲ್ಲಿ ಇಂತಹ ಸಮಾಜ ವಿರೋಧಿ ಸಂಘಟನೆಗಳನ್ನು ಸೇರಿಕೊಳ್ಳುತ್ತಾರೆ. ಇದನ್ನು ತಡೆಯಲು ಪ್ರಾಮಾಣಿಕ ಯತ್ನ ನಡೆಸುವ ಅಗತ್ಯವಿದೆ ಎಂದು ಶಾಸಕಿ ಅಭಿಪ್ರಾಯಪಟ್ಟರು.

ರಾಜಕಾರಣದ ಬಗ್ಗೆ ರಾಜಕೀಯದಲ್ಲಿರುವವರು ಹೇವರಿಕೆ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕಾಂಗ್ರೆಸ್ ಮುಖಂಡ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮುಂತಾದವರು ಬಹಿರಂಗವಾಗಿ ರಾಜಕೀಯ ಕ್ಷೇತ್ರದ ಅಸಹ್ಯಕರ ವಾತಾವರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

No comments: