VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 6, 2010

ನಾನು ಸುಮ್ನೆ ಜೋಕ್ ಮಾಡಿದ್ದು: ಶಾರೂಖ್ ಸ್ಪಷ್ಟನೆ


ವಿವಾದತ್ಮಾಕ ಹೇಳಿಕೆ ನೀಡುವ ಮೂಲಕ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮಾಲಕ ಹಾಗೂ ಬಾಲಿವುಡ್ ಕಿಂಗ್ ಶಾರೂಖ್ ಇದೀಗ ಸ್ಪಷ್ಟನೆ ನೀಡಿದ್ದು, ತಾನು ಕೇವಲ ತಮಾಷೆಗಾಗಿ ಆ ರೀತಿಯಾಗಿ ನುಡಿದಿದ್ದೆ ಎಂದು ಸಮಾಜಾಯಿಸಿ ನೀಡಿದ್ದಾರೆ.

ಈ ಹಿಂದೆ ಐಪಿಎಲ್‌-3ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಕಪ್ ಗೆದ್ರೆ ತಾನು ನಗ್ನವಾಗಿ ನೃತ್ಯ ಮಾಡಲಿದ್ದೇನೆಂದು ಶಾರೂಖ್ ಹೇಳಿಕೊಂಡಿದ್ದರು. ಇದು ನಂತರ ವಿವಾದಕ್ಕೆ ಕಾರಣವಾಗಿತ್ತು.

ನಾನು ಕೇವಲ ಜೋಕ್ ಮಾಡಿದ್ದೆ. ಒಂದು ವೇಳೆ ತಂಡ ಗೆದ್ದುಕೊಂಡರೂ ತಾನು ಆ ರೀತಿಯಾಗಿ ನಡೆದುಕೊಳ್ಳಲಾರೆ ಎಂದು ಶಾರೂಖ್ ಹೇಳಿದ್ದಾರೆ.

ಕೊನೆಗೂ ಈ ವಿವಾದದ ಮಧ್ಯೆ ಮತ್ತೊಂದು ನಗೆ ಪಟಾಕಿ ಹಾರಿಸಲು ಬಾಲಿವುಡ್ ಕಿಂಗ್ ಮರೆಯಲಿಲ್ಲ. ಇನ್ನೂ ಮುಂದೆ ವಸ್ತ್ರ ಧರಿಸಿಯೇ ನಾನು ಸ್ನಾನ ಮಾಡಲಿದ್ದೇನೆ ಎಂದವರು ನಗಿಸಿದರು.

No comments: