
ಬಿಬಿಎಂಪಿ ಚುನಾವಣೆಯಲ್ಲಿ ತೀವ್ರ ಹಿನ್ನೆಡೆಯಿಂದ ಮುಖಭಂಗಗೊಂಡಿರುವ ಕಾಂಗ್ರೆಸ್‌ನಲ್ಲಿ ಈಗ ನಾಯಕತ್ವದ ಬದಲಾವಣೆಗೆ ಚಿಂತನೆ ನಡೆದಿದ್ದು, ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತಲೆದಂಡ ತೆಗೆದುಕೊಳ್ಳುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಲೋಸಕಭೆ ಹಾಗೂ ವಿಧಾನಸಭೆ ಚುನಾವಣೆಯ ನಂತರ ಪಕ್ಷ ಸಂಘಟಿಸಲು ಕೆಲವು ಅವಕಾಶಗಳನ್ನು ಹೈಕಮಾಂಡ್ ನೀಡಿತ್ತಾದರೂ, ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರನ್ನು ಮುನ್ನಡೆಸುವಲ್ಲಿ ರಾಜ್ಯ ನಾಯಕರು ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ, ನಾಯಕರಲ್ಲಿನ ನಡುವಿನ ಭಿನ್ನಾಭಿಪ್ರಾಯವೂ ಇದೆ ಕಾರಣ ಎಂದು ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕತ್ವ ಬದಲಾವಣೆಗೆ ಚಿಂತನೆ ನಡೆಸಿದ್ದು, ಇಲ್ಲವಾದರೆ ಇತಿಹಾಸ ಹೊಂದಿರುವ ಪಕ್ಷ ನೆಲ ಕಚ್ಚುವುದರಲ್ಲಿ ಸಂಶಯವಿಲ್ಲ ಎಂಬ ಅಂಶವನ್ನು ಮನಗಂಡಿರುವ ಕಾಂಗ್ರೆಸ್ ಇದೀಗ ನಾಯಕತ್ವದ ಬದಲಾವಣೆಗೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಈ ಸ್ಥಾನಕ್ಕೆ ಈಗಾಗಲೇ ಹಲವು ಹೆಸರುಗಳು ಕೇಳಿ ಬರುತ್ತಿದೆ. ದಲಿತ ಮುಖಂಡರಾದ ಜಿ. ಪರಮೇಶ್ವರ್, ಲಿಂಗಾಯಿತ ಸಮುದಾಯದ ಮುಖಂಡರಾದ ಶ್ಯಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಹೆಸರುಗಳು ಕೇಳಿ ಬರುತ್ತಿದ್ದು, ಹೈಕಮಾಂಡ್ ಇನ್ನು ಮುಂದಿನ ಹೆಜ್ಜೆ ಇರಿಸಬೇಕಿದೆ.
No comments:
Post a Comment