VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 8, 2010

ಇತಿಹಾಸ ನಿರ್ಮಿಸಿದ ಬ್ಯಾರೀ ಸಮ್ಮೇಳನ: ಸಮುದಾಯ ಸಬಲೀಕರಣಾದತ್ತ ಸ್ತ್ರೀಯ ಚಿತ್ತ: ವರದಕ್ಷಿಣೆಗಳ೦ತಹ ಅನಿಷ್ಟಗಳನ್ನು ಹೋಗಲಾಡಿಸಲು ಸ್ತ್ರೀ ಸಮೂಹ ಕಟಿಬದ್ದರಾಗಬೇಕು


ಸಮಾಜದ ಚಿಂತನೆಯನ್ನು ಬದಲಿಸುವ ದಿಶೆಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ರಾಜ್ಯಮಟ್ಟದ ಬ್ಯಾರಿ ಮಹಿಳಾ ಸಮ್ಮೇಳನವನ್ನು ಹಮ್ಮಿ ಕೊಂಡಿತ್ತು. ಮಹಿಳೆಯರ ಪ್ರಸ್ತುತ ಸ್ಥಿತಿಗತಿಗಳ ಕುರಿತಾದ ಹಲವಾರು ಅಭಿಪ್ರಾಯಗಳಿಗೆ ಉತ್ತರ ನೀಡಲು ಎಲ್ಲಾ ತಯಾರಿ ನಡೆಸಲಾಗಿತ್ತು. ಬೆಳ್ಳಂಬೆಳಗ್ಗೆಯೇ ಮಹಿಳೆಯರು ತಂಡೋಪತಂಡ ವಾಗಿ ಪುರಭವನದತ್ತ ಮುಖ ಮಾಡಿದ್ದರು. ಕಾರ್ಯಕ್ರಮ ಆರಂಭವಾಗುವ ಹೊತ್ತಿಗೆ ಮುಕ್ಕಾಲು ಭಾಗ ತುಂಬಿದ್ದ ಪುರಭವನವು ಕಾರ್ಯಕ್ರಮ ಪ್ರಾರಂಭಗೊಂಡು ಅರ್ಧ ತಾಸಿನಲ್ಲಿ ತುಂಬಿ ತುಳು ಕಿತ್ತು.

ತೆಂಗಿನ ಸಸಿಗೆ ನೀರೆರೆಯುವ ಮೂಲಕ ವಿಶಿಷ್ಟ ರೀತಿಯಲ್ಲಿ ಸಮ್ಮೇಳನವನ್ನು ಉದ್ಘಾಟಿಸಲಾ ಯಿತು. ಅನಂತರದ ಅಧಿವೇಶನದಲ್ಲಿ ವಿಚಾರಗೋಷ್ಠಿ, ಅಪರಾಹ್ನದ ಅಧಿವೇಶನದಲ್ಲಿ ಚರ್ಚಾಗೋ ಷ್ಠಿಗಳು ನಡೆದವು.

ಮಹಿಳೆಯರಿಂದ ಮಹಿಳೆಯರಿಗಾಗಿಯೇ ನಡೆದ ಈ ಸಮ್ಮೇಳನದಲ್ಲಿ ಸಂಜೆ ನಡೆದ ಸಮಾ ರೋಪದಲ್ಲಿ ಮಾತ್ರ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು ಉದ್ಘಾಟನೆ ಮೊದಲ್ಗೊಂಡು ಪ್ರತಿಯೊಂದು ಕಾರ್ಯಕ್ರಮದಲ್ಲೂ ಶಿಸ್ತಿನಿಂದ ಪಾಲ್ಗೊಂಡರು.

ಬ್ಯಾರಿ ಸಮುದಾಯದ ಮಹಿಳೆಯರ ಪ್ರತಿಭೆಯನ್ನು ಗುರುತಿಸುವುದು, ಸಾಹಿತ್ಯಿಕ ಪ್ರೇರಣೆ ನೀಡುವುದು, ಮಹಿಳೆಯರ ಸಮಸ್ಯೆಗಳನ್ನು ಆಲಿಸುವುದು, ಪರಿಹಾರ ಏನಾಗಬೇಕೆಂದು ಚರ್ಚಿ ಸುವುದು ಒಟ್ಟಿನಲ್ಲಿ ಮಹಿಳೆಯರನ್ನು ಒಂದು ಸೇರಿಸಿ ಸಮುದಾಯದ ಅಭ್ಯುದಯ, ಏಳಿಗೆ ಹಾಗೂ ಭಾಷಾ ಪ್ರೇಮ ಮೂಡಿಸುವುದು, ಅಲ್ಲದೆ ಬಾಯ್ದೆರೆ ಸಾಹಿತ್ಯವಾಗಿ ಉಳಿದಿರುವ ಬ್ಯಾರಿ ಸಾಹಿತ್ಯ ದ ಕಂಪನ್ನು ಹರಡುವ ದಿಕ್ಕಿನಲ್ಲಿ ಒಂದು ಹೊಸ ಹೆಜ್ಜೆಯನ್ನು ಮುಂದಿಡುವುದು ಅಕಾಡಮಿಯ ಉದ್ದೇಶವಾಗಿತ್ತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರ ವಿಚಾರಧಾರೆಗಳು, ಚಿಂತನೆಗಳು ಒರೆಗೆ ಹಚ್ಚು ವಂತಿದ್ದವು. ಚರ್ಚೆಯಲ್ಲಿ ಹೊರಹೊಮ್ಮಿದ ಅಭಿಪ್ರಾಯಗಳು, ಸಮಸ್ಯೆಗಳು ಒಂದೋ ಸ್ವತಃ ಅವರ ಜೀವನದ ಜಂಜಟದ ಅನುಭವಗಳಾಗಿರಬಹುದು ಅಥವಾ ಅವರದೇ ನೆರೆಮನೆಯ ಸಹೋದರಿಯರದ್ದಾಗಿರಬಹುದು.

ಮಾತುಗಳು ಅನುಭವಗಳೆಂಬ ಮೂಸೆಯಿಂದ ಹೊರಹೊಮ್ಮುವ ರೀತಿಯಲ್ಲಿತ್ತು. ಸಮಸ್ಯೆಗಳಿಗೆ ನೀಡಿದ ಪರಿಹಾರ ರೂಪದ ಉತ್ತರಗಳು ಮನ ಮೆಚ್ಚುವಂತಿತ್ತು. ಕಾರ್ಯಕ್ರಮದ ಮಧ್ಯೆ ಮಧ್ಯೆ ಬ್ಯಾರಿ ಚುಟುಕುಗಳು ಮಹಿಳೆಯರ ಸಾಹಿತ್ಯಿಕ ಒಲವನ್ನು ಪ್ರತಿಬಿಂಬಿಸುವಂತಿತ್ತು. ಚರ್ಚಿಸಿದ ವಿಷಯಗಳು ಹಲವು, ಹಂಚಿಕೊಂಡ ಅಭಿಪ್ರಾಯಗಳು ಇನ್ನು ಹಲವು. ಬ್ಯಾರಿ ಸಮುದಾಯದ ಪ್ರತಿಯೊಂದು ಮಗ್ಗುಲು ಆಯಾಮಗಳನ್ನು ತಮ್ಮದೇ ದೃಷ್ಟಿಯಲ್ಲಿ ನೋಡಿ ಅದಕ್ಕೆ ಮಹಿಳೆಯ ರಾದ ತಮ್ಮಿಂದ ಏನು ಕೊಡುಗೆ ನೀಡಲು ಸಾಧ್ಯ ಎಂಬುದನ್ನು ಚರ್ಚಿಸಿದರು.

`ಮನೆಯ ಗೋಡೆಯೊಳಗೆ ಬಂಧಿ ನಾನಲ್ಲ, ನನ್ನಲ್ಲೂ ಅಭಿಪ್ರಾಯಗಳಿವೆ, ವಿಚಾರಗಳಿವೆ, ಚಿಂತನೆ ಗಳಿವೆ' ಎಂಬುದರ ಬಗ್ಗೆ ಭಾಗವಹಿಸಿದ ಪ್ರತಿ ಸ್ತ್ರೀಯೂ ಪ್ರತಿಕ್ರಿಯಿಸಿದರು. ವಿವಾದಗಳೇನಿದ್ದರೂ ಅದು ಸ್ತ್ರೀಯರ ಸುತ್ತ ಗಿರಕಿ ಹೊಡೆಯುತ್ತಿರುತ್ತದೆ. ಆದರೆ ಅದರ ವಿರುದ್ದ ಸೆಟೆದು ನಿಲ್ಲುವ ಪ್ರವೃ ತ್ತಿಯನ್ನು ಇಂದಿನ ಜಗೃತ ಸ್ತ್ರೀ ಕಂಡುಕೊಂಡಿದ್ದಾಳೆ. `ಇಸ್ಲಾಮೀ ಧಿರಿಸಿನಲ್ಲಿ ತನಗೆ ಯಾವುದೇ ಬಂಧನದ ಅನುಭವಗಳಿಲ್ಲ, ಬದಲಾಗಿ ಅದೊಂದು ರಕ್ಷಾ ಕವಚವಾಗಿ ತನ್ನನ್ನು ಕಾಪಾಡುತ್ತಿದೆ' ಎಂಬ ಅಭಿಪ್ರಾಯವು ಅಲ್ಲಿ ನೆರೆದ ಹೆಚ್ಚಿನ ಮಹಿಳೆಯರ ನಿಲುವಾಗಿತ್ತು..

ಸ್ತ್ರೀ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಪ್ರವಾದಿ ಮುಹಮ್ಮದ್(ಸ)ರ ಅನುಯಾಯಿಗಳಾದ ನಾವು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂಬ ಕರೆಯು ಒಕ್ಕೊರಲಿನದ್ದಾಗಿತ್ತು. ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವನ್ನೂ ನೀಡಬೇಕೆಂಬುದಕ್ಕೆ ಎಲ್ಲರ ಸಹಮತವಿತ್ತು. ಶಿಕ್ಷಣದಿಂದಲೇ ಮಹಿಳೆಯ ರ ಸರ್ವತೋಮುಖ ಏಳಿಗೆ ಸಾಧ್ಯ ಎಂಬುದಕ್ಕೆ ಎಲ್ಲ ಮಹಿಳೆಯರೂ ದನಿಗೂಡಿಸಿದರು. ಇದ ರಿಂದ ಮಕ್ಕಳ, ಕುಟುಂಬದ, ಸಮುದಾಯದ, ಸಮಾಜದ ಏಳಿಗೆ, ಅಭಿವೃದ್ದಿಸಾಧ್ಯ ಎಂಬುದನ್ನು ಮನಗಂಡರು.

ಸ್ತ್ರೀ ಸಬಲೀಕರಣ ಶುಚಿತ್ವ, ಆರೋಗ್ಯ ಪಾಲನೆ, ಶಿಕ್ಷಣ, ಸಾಮಾಜಿಕ ಅನಿಷ್ಟಗಳಾದ ವರದಕ್ಷಿಣೆ, ಕೋಮು ಸೌಹಾರ್ದತೆ, ಹೀಗೆ ಹಲವಾರು ವಿಷಯಗಳು ಇಲ್ಲಿ ಚರ್ಚೆಗೊಳಗಾದವು. ಒಟ್ಟಿನಲ್ಲಿ ಮಹಿಳೆಯರು ಮುಖ್ಯವಾಹಿನಿಯಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವಲ್ಲಿ ದಾಪುಗಾಲು ಇಟ್ಟಿ ದ್ದಾರೆ ಎಂದರೆ ಅತಿಶಯೋಕ್ತಿ ಎನಿಸಲಾರದು.



ಒಂದು ಕಾರ್ಯಕ್ರಮದ ಯಶಸ್ಸಿನ ಬೆನ್ನೆಲುಬು ಅದರ ಸಭಿಕರು ಹಾಗೂ ಸಂಯೋಜಕರು. ತುಂಬಿದ ಸಭೆಯು ಸಮಾರಂಭಕ್ಕೆ ಕಳೆ ನೀಡಿದಂತೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮಹಿಳೆಯರ ಚಾತುರ್ಯವು ಮೆಚ್ಚುವಂತಿತ್ತು. ಕ್ಲಪ್ತ ಸಮಯಕ್ಕೆ ಕಾರ್ಯಕ್ರಮ ಪ್ರಾರಂಭಗೊಂಡು ಸರಿಯಾದ ಸಮಯಕ್ಕೆ ಸಮಾಪನಗೊಳ್ಳುವಂತೆ ಪ್ರತಿಯೊಂದು ಕಾರ್ಯಕ್ರಮವನ್ನೂ ಅಚ್ಚುಕಟ್ಟಾ ಗಿ ನಿರ್ವಹಿಸಿದರು.

ಊಟ, ಚಹಾದಿಂದ ಹಿಡಿದು ನಮಾಝ್ ತನಕ, ಅಂತೆಯೇ ವೇದಿಕೆಯಿಂದ ನಿರೂಪಣೆ ಹಾಗೂ ಮೇಲುಸ್ತುವಾರಿ ಎಲ್ಲವೂ ಮಹಿಳೆಯರ ನಿಗಾದ ನಡೆದದ್ದು ಸ್ತ್ರೀ ಸಾಮರ್ಥ್ಯವನ್ನು ಬಿಂಬಿಸಿದೆ. ಕಿಕ್ಕಿರಿದ ಸಭೆ ಹಾಗೂ ಶಿಸ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರಣವಾಗಿದ್ದರೂ ಒಂದು ಸಮ್ಮೇಳನದ ನೈಜ ಯಶಸ್ಸು ಸಂಘಟನೆಯು ಹಮ್ಮಿಕೊಂಡ ಕಾರ್ಯಕ್ರಮದ ಉದ್ದೇಶ ಪೂರ್ಣ ಗೊಂಡಾಗಲೇ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾದದ್ದು.

ಸಮುದಾಯದ ಸ್ತ್ರೀಯರಲ್ಲಿ ಉಂಟಾದ ಜಗೃತಿ ಒಂದು ಉತ್ತಮ ಲಕ್ಷಣವಾಗಿ ಗೋಚರಿಸುತ್ತಿದೆ. ಇಲ್ಲಿ ಹೊರಹೊಮ್ಮಿದ ಪ್ರತಿಯೊಂದು ವಿಚಾರಗಳೂ, ಚಿಂತನೆಗಳೂ, ಸಲಹೆಗಳೂ ಸಾಧ್ಯವಿದ್ದಷ್ಟು ಕಾರ್ಯರೂಪಕ್ಕೆ ಬರುವಂತಾಗಬೇಕು. ಸಮುದಾಯದಲ್ಲಿರುವ ಮೂಢನಂಬಿಕೆ, ಅನಾಚಾರ, ಶಿಕ್ಷಣದ ಸಮಸ್ಯೆ, ವರದಕ್ಷಿಣೆಗಳಂತಹ ಅನಿಷ್ಟಗಳನ್ನು ಹೋಗಲಾಡಿಸುವಲ್ಲಿ ಪ್ರತಿಯೊಬ್ಬರನ್ನೂ ಜಗೃತಗೊಳಿಸಬೇಕಾಗಿದೆ. ಅದಕ್ಕೆ ಸ್ತ್ರೀ ಸಮೂಹ ಕಟಿಬದ್ದರಾಗಬೇಕಾಗಿದೆ. ತನ್ನ ಜೊತೆಗೆ ತನ್ನ ನೆರೆಮನೆಯ ಸಹೋದರಿಯನ್ನೂ ಹುರಿದುಂಬಿಸಬೇಕಾಗಿದೆ.

ಒಬ್ಬರಿಂದ ನಡೆಯುವ ಕಾರ್ಯ ಇದಲ್ಲ, ಸಾಂಕವಾಗಿ ಇದನ್ನು ಮುಂದುವರಿಸಬೇಕಾಗಿದೆ. ನಮ್ಮ ನಮ್ಮ ಮನೆಯಿಂದಲೇ ಹೋರಾಟದ ಹಾದಿ ನಿರ್ಮಾಣವಾಗಬೇಕಾಗಿದೆ. ಹಾಗೆಯೇ ಸಹೋದರಿ ಯರು ಹೋರಾಟದ ಹಾದಿಯಲ್ಲಿ ನಡೆಯಬೇಕಾಗಿದೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಇಟ್ಟ ಈ ದಿಟ್ಟ ಹೆಜ್ಜೆಗೆ ಬ್ಯಾರಿ ಸಂಘ ಸಂಸ್ಥೆಗಳು ಜೊತೆಯಾಗಬೇಕಾಗಿದೆ.

No comments: