VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 8, 2010

ಖಾಝಿ ನಿಗೂಢ ಮೃತ್ಯು ಪ್ರಕರಣ: ಮಂಗಳೂರಿನಲ್ಲಿ ಕ್ರೈಂ ಬ್ರಾಂಚ್‌ನಿಂದ ತನಿಖೆ


ಮಂಗಳೂರು, ಎ.೭: ಮಂಗಳೂರು ಖಾಝಿಯಾಗಿದ್ದ ಅಲ್‌ಹಾಜ್ ಸಿ.ಎಂ.ಅಬ್ದುಲ್ಲ್ಲಾ ಮುಸ್ಲಿಯಾರ್ ಚೆಂಬರಿಕ ಅವರ ನಿಗೂಢ ಮೃತ್ಯುವಿನ ಬಗ್ಗೆ ತನಿಖೆ ನಡೆಸುತ್ತಿರುವ ಕಾಸರಗೋಡಿನ ಕ್ರೈಂ ಬ್ರಾಂಚ್ ತಂಡ ಬುಧವಾರ ಮಂಗಳೂರಿಗೆ ಭೇಟಿ ನೀಡಿದೆ.

ಮಂಗಳೂರು ಕೇಂದ್ರ ಜುಮಾ ಮಸೀದಿಗೆ ಆಗಮಿಸಿದ ಕ್ರೈಂ ಬ್ರಾಂಚ್ ಎಸ್‌ಐ ಪ್ರಸಾದ್ ಮತ್ತು ಎ‌ಎಸ್‌ಐ ಇಕ್ಬಾಲ್ ನೇತೃತ್ವದ ಪೊಲೀಸ್ ತಂಡ, ಟ್ರಸ್ಟಿ ಹಾಜಿ ಮುಹಮ್ಮದ್ ಹನೀಫ್‌ರಲ್ಲಿ ‘ಖಾಝಿಯ ಜೊತೆ ಯಾರೆಲ್ಲ ಸಂಪರ್ಕದಲ್ಲಿದ್ದರು? ಇಲ್ಲಿ ಅವರೊಂದಿಗೆ ಯಾರಾದರೂ ದ್ವೇಷದಿಂದಿದ್ದರೇ?’ ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

‘ಇಬ್ಬರು ಪೊಲೀಸ್ ಅಧಿಕಾರಿಗಳು ಆಗಮಿಸಿ ಖಾಝಿಯ ಒಡನಾಟದ ಬಗ್ಗೆ ಮಾಹಿತಿ ಪಡೆದಿದ್ದಾರೆ’ ಎಂದು ತಿಳಿಸಿರುವ ಹನೀಫ್ ಹಾಜಿ, ‘ಪೊಲೀಸ್ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಪ್ರಕರಣದ ಸತ್ಯಾಂಶ ಹೊರಬರುವುದರಲ್ಲಿ ಸಂಶಯವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

No comments: