ಅನಿವಾಸಿ ಉದ್ಯಮಿ ಅಬ್ದುಲ್ ರಝಕ್ ಬುಳೆರಿಕಟ್ಟೆಯವರ ಬಿ.ಕೆ ಗ್ರೂಪ್ ಆಫ್ ಕಂಪೆನಿಸ್ ಇದರ ನೂತನ ಉತ್ಪಾದನಾ ಘಟಕ ಸೀಪಾಸ್ ಇಲೆಕ್ಟ್ರೋನಿಕ್ಸ್ ಅನ್ನು ದುಬೈ ರಾಮೀ ರೋಯಲ್ ಹೋಟೆಲ್ ಸಭಾಂಗಣದಲ್ಲಿ ಕೇಂದ್ರ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಹಾಜಿರವರ ಅದ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಸರಕಾರದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಈ ಸಂದಭದಲ್ಲಿ ಗಡಿನಾಡ ದ್ವನಿ ಪತ್ರಿಕೆಯ ಸಂಪಾದಕ ಎಸ್ ಅಬೂಬಕ್ಕರ್ ಅರ್ಲಪದವು, ಉದ್ಯಮಿ ಡೈಮಂಡ್ ಕಂಪನಿಯ ಅಲ್ತಾಫ್ ಪರಂಗಿಪೇಟೆ, ರಾಮೀ ರೋಯಲ್ ಹೋಟೆಲ್ ಮ್ಯಾನೇಜರ್ ಸಚಿನ್ ರವರು ವೇದಿಕೆಯಲ್ಲಿದ್ದು ಶುಭ ಹಾರೈಸಿದರು.
ಸಮಾರಂಭದಲ್ಲಿ ಕ್ರಮವಾಗಿ ಅಬ್ದುಲ್ ರಜಾಕ್ ಬುಳೆರಿಕಟ್ಟೆ, ಹಾಜಿ ಅಬುಲ್ ರಜಾಕ್ ಮಣಿಲ ಹಾಗೂ ನೂರ್ ಮಹಮ್ಮದ್ ರವರು ಹೂಗುಚ್ಛ ನೀಡಿ ಅಥಿತಿಗಳನ್ನು ಸ್ವಾಗತಿಸಿದರು.
ಮರ್ಕಝುಲ್ ಹುದಾ ಮಹಿಳಾ ಕಾಲೇಜ್ ಕುಂಬ್ರ ಇದರ ದುಬೈ ಘಟಕದ ಅದ್ಯಕ್ಷ ಶುಕೂರ್ ಮಣಿಲ, ಡಿ.ಕೆ.ಎಸ್.ಸಿ ದುಬೈ ಘಟಕದ ಕಾರ್ಯದರ್ಶಿ ಯೂಸುಫ್ ಅರ್ಲಪದವು, ಅಬ್ದುಲ್ ರಜ್ಜಕ್ ಮಣಿಲ, ಸುಲೈಮಾನ್ ಕೊಡಿಪಾಡಿ, ಹಮೀದ್ ಮಣಿಲ, ಅಬ್ದುಲ್ ರಜಾಕ್ ನಿರ್ಕಜೆ, ಖಾದರ್ ಸಂಪ್ಯ, ಆಲಿಕುಂಞ ಅರ್ಲಪದವು, ಅನ್ವರ್ ಪೆರುವಾಯಿ, ಶರೀಫ್ ಅರ್ಲಪದವು, ಹೈದರ್ ನೊoಡ್ರಿಮಾರ್ ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರಾದ ಅಬ್ದುಲ್ ರಝಕ್ ಬುಳೆರಿಕಟ್ಟೆ ಹಾಗೂ ಅಶ್ರಫ್ ಬುಳೆರಿಕಟ್ಟೆ ಸೀಪಾಸ್ ಉತ್ಪನ್ನಗಳ ಬಗ್ಗೆ ವಿವರಣೆ ನೀಡಿದರು. ಹನೀಫ್ ಬುಳೆರಿಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.
No comments:
Post a Comment