VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 7, 2010

ಮ೦ಗಳೂರು: ಅಪ್ಪನ ನೆನಪಿನ ‘ಚಿನ್ನ’ದ ಪದಕ ಪಡೆದ ಹಲೀಮತ್ ಸಾದಿಯಾ


‘ನಾನು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಚಿನ್ನದ ಪದಕ ಪಡೆಯಬೇಕು ಎಂಬ ಮಹ ದಾಸೆ ಅಪ್ಪನದಾಗಿತ್ತು. ಆದರೆ ನನ್ನ ಜೀವನದ ಕೊನೆಯ ಪರೀಕ್ಷೆ ಬರೆದ ದಿನ (2009ರ ಮೇ 18) ಅವರು ಹಠಾತ್ ಹೃದಯಾಘಾತದಿಂದ ಕೊನೆಯುಸಿರೆಳೆದರು. ಅವರ ಸಾವಿನ ದುಃಖದಲ್ಲೇ ಆ ಪರೀಕ್ಷೆ ಬರೆದಿದ್ದ ನನಗೆ ‘ಚಿನ್ನದ ಪದಕ’ ಬರುತ್ತದೆ ಎಂಬ ವಿಶ್ವಾಸ ಇರಲಿಲ್ಲ....’

ಮಂಗಳೂರು ವಿವಿ ಘಟಿಕೋತ್ಸವ ಸಂದರ್ಭದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ ನೀಡಲಾಗುವ ಡಾ. ಟಿ.ಎಂ.ಎ ಪೈ ದತ್ತಿನಿಧಿ ಚಿನ್ನದ ಪದಕ ಪಡೆದ ಎಂಸಿಜೆ ವಿದ್ಯಾ ರ್ಥಿ ಹಲೀಮತ್ ಸಾದಿಯಾ ಅವರ ಮನದಾಳದ ಮಾತಿದು.

‘ಊರಿನವರು ಹುಡುಗಿಯರಿಗೆ ಹೆಚ್ಚು ಕಲಿಸಬಾರದು ಎಂದು ಒತ್ತಡ ಹೇರಿದರೂ ಪಟ್ಟುಬಿಡದೆ ಅಪ್ಪ (ಸುಲೈಮಾನ್) ಸ್ನಾತಕೋತ್ತರ ತರಗತಿಗೆ ಸೇರಿಸಿದ್ದರು. ಮಂಗಳವಾರ ನಡೆದ ಘಟಿಕೋ ತ್ಸವ ಸಂದರ್ಭದಲ್ಲಿ ರಾಜ್ಯಪಾಲರಿಂದ ಚಿನ್ನದ ಪದಕ ಸ್ವೀಕರಿಸುವಾಗ ಹೆಮ್ಮೆ ಅನಿಸಿತು. ಕೇಂದ್ರ ದಲ್ಲಿ ಬದುಕಿನುದ್ದಕ್ಕೂ ಕಲಿಯಲು ಉತ್ತೇಜನ ತುಂಬಿದ್ದ ಅಪ್ಪ ಇರಬೇಕಿತ್ತು ಎಂಬ ನೆನಪು ಕಾಡಿ ತು. ಅವರಿಲ್ಲದಿದ್ದರೂ ಅವರ ಹಂಬಲ ಈಡೇರಿಸಿದ ಸಾರ್ಥಕತೆ ಇದೆ ಎಂದರು.

‘ಅಮ್ಮ ಕೆ.ಫಾತೀಮಾ ಬಿ. ಕಲಿತದ್ದು ಪಿಯುಸಿ.ಅವರು ಬಿ.ಸಿ.ರೋಡ್‌ನ ಸಂಜೀವಿನಿ ಮಹಿಳಾ ಸಹಾಯವಾಣಿಯಲ್ಲಿ ಸಮಾಲೋಚಕಿ.

ನಮ್ಮ ಕುಟುಂಬದಲ್ಲಿ ಕಲಿತದ್ದು ಅಕ್ಕ ಮಾತ್ರ. ಡಿಪ್ಲೊಮಾ ಕಲಿತಾ ಆಕೆ ದುಬೈ ಬ್ಯಾಂಕ್‌ನಲ್ಲಿ ಉದ್ಯೋಗಿ.

ಮುಸ್ಲಿಂ ಕುಟುಂಬಗಳಲ್ಲಿ ಮಹಿಳೆ ಶಿಕ್ಷಣ ಪಡೆಯುವುದಕ್ಕೆ ಉತ್ತೇಜನ ಸಿಗುವುದೇ ಕಡಿಮೆ. ಅಂಥ ದ್ದರಲ್ಲಿ ನನ್ನ ಹೆತ್ತವರು ನನಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಈಗ ಕುಟುಂಬಕ್ಕಾಗಿ ದುಡಿಯು ವಾಗ ಹೆಮ್ಮೆ ಅನಿಸುತ್ತದೆ’ ಎಂದು ಪ್ರಜಾವಾಣಿ’ಗೆ ತಿಳಿಸಿದರು.

ಸಹಪಾಠಿಗಳ ಮರೆಯಲಾರೆ: ‘ಅಂತಿಮ ಸೆಮಿಸ್ಟರ್ ಪರೀಕ್ಷೆ ಸಂದರ್ಭದಲ್ಲಿ ಅಪ್ಪ ಅನಾರೋಗ್ಯ ಪೀಡಿತರಾದಾಗ ಅಧೀರಳಾಗಿದ್ದೆ.

ಆಗೆಲ್ಲ ಧೈರ್ಯ ತುಂಬಿದ್ದು ಸಹಪಾಠಿಗಳು. ಅಪ್ಪ ಮೃತಪಟ್ಟಾಗ ಸಹಪಾಠಿಗಳು ಮನೆಗೆ ಕಾರು ಮಾಡಿಕೊಂಡು ಬಂದು ನನ್ನನ್ನು ಪರೀಕ್ಷೆಗೆ ಕರೆದೊಯ್ದರು.

ಅಪ್ಪನ ಆಸೆ ಈಡೇರಿಸುವಂತೆ ಪ್ರೋತ್ಸಾಹಿಸಿದರು. ಅವರಿಗೆಲ್ಲಾ ನಾನು ಆಭಾರಿ ಎಂದು ಹಲಿಮತ್ ಗದ್ಗದಿತರಾದರು.

No comments: