VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 22, 2010

ಮಂಗಳೂರು: ವಿಮಾನ ಅಪಘಾತದಲ್ಲಿ 160 ಪ್ರಯಾಣಿಕರ ಸಾವು

ದುಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ, ಮಂಗಳೂರಿನ ಕೆಂಜಾರು ಬಳಿಯಿರುವ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವಾಗ ನಿಯಂತ್ರಣ ತಪ್ಪಿದ್ದರಿಂದ ಅಪಘಾತಕ್ಕೀಡಾಗಿ 160 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದುಬೈಯಿಂದ ಮಂಗಳೂರಿಗೆ ಇಂದು ಬೆಳಿಗ್ಗೆ 6.30 ಗಂಟೆಗೆ ಆಗಮಿಸಿದ ಏರ್‌ಇಂಡಿಯಾ ವಿಮಾನ, ಲ್ಯಾಂಡಿಂಗ್ ಮಾಡುವ ಸಂದರ್ಭದಲ್ಲಿ ಅಕಸ್ಮಿಕವಾಗಿ ನಿಯಂತ್ರಣ ತಪ್ಪಿ ತಗ್ಗುಪ್ರದೇಶಕ್ಕೆ ನುಗ್ಗಿ, ನಂತರ ಸ್ಫೋಟಗೊಂಡಿತು ಎಂದು ಏರ್‌ ಇಂಡಿಯಾ ಮೂಲಗಳು ತಿಳಿಸಿವೆ.

ಆದರೆ ವಿಮಾನ ದುರಂತದಲ್ಲಿ ಬದುಕುಳಿದವರ ಪ್ರಕಾರ, ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಟೈರ್‌ಗಳು ಸ್ಫೋಟಗೊಂಡ ಶಬ್ದ ಕೇಳಿ ಬಂದಿತ್ತು ಎಂದು ತಿಳಿಸಿದ್ದಾರೆ. ವಿಮಾನ ಅಪಘಾತದಲ್ಲಿ 6 ಮಂದಿ ಪ್ರಯಾಣಿಕರು ಅದೃಷ್ಟವಶಾತ್ ಬದುಕುಳಿದಿದ್ದಾರೆ ಎಂದು ಏರ್‌ ಇಂಡಿಯಾ ಮೂಲಗಳು ತಿಳಿಸಿವೆ.

ಗೃಹ ಸಚಿವ ವಿ.ಎಸ್.ಆಚಾರ್ಯ ಮಾತನಾಡಿ, ವಿಮಾನ ದುಂರತದಲ್ಲಿ 160 ಮಂದಿ ಸಾವನ್ನಪ್ಪಿದ್ದು, ವಿಮಾನ ನಿಲ್ದಾಣದಿಂದ 10 ಕಿ.ಮಿ. ದೂರದಲ್ಲಿ ವಿಮಾನ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

ವಿಮಾನ ಅಪಘಾತ ಸಂಭವಿಸಿದ ಸ್ಥಳದಲ್ಲಿ ಸಮರೋಪಾದಿಯಲ್ಲಿ ತುರ್ತು ಸೇವೆಗಳನ್ನು ಆರಂಭಿಸಲಾಗಿದ್ದು, ವೈದ್ಯರ ತಂಡ ರವಾನಿಸಲಾಗಿದೆ.ಕನಿಷ್ಠ 25 ಅಗ್ನಿಶಾಮಕ ದಳಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ವಿಮಾನ ಅಪಘಾತದಲ್ಲಿ 160 ಮಂದಿ ಪ್ರಯಾಣಿಕರು ಮೃತರಾಗಿದ್ದು, ವಿಮಾನ ದುರಂತದಿಂದ ಆಘಾತವಾಗಿದೆ ಮೃತರಾದ ಕುಟುಂಬಗಳಿಗೆ ಶೋಕ ವ್ಯಕ್ತಪಡಿಸಲು ಮಂಗಳೂರಿಗೆ ತೆರಳುತ್ತಿರುವುದಾಗಿ ಹೇಳಿದ್ದಾರೆ.

ವಿಮಾನ ಅಪಘಾತದ ಬಗ್ಗೆ ಹೆಚ್ಚಿನ ವಿವರಣೆಗಳಿಗಾಗಿ ಸಹಾಯವಾಣಿ ಸಂಖ್ಯೆ 0824 - 2220422,011-25656196, 011-25603101 ದೂರವಾಣಿ ಕರೆಗಳನ್ನು ಮಾಡಬಹುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳದಲ್ಲಿ 15 ವೈದ್ಯರು ಉಪಸ್ಥಿತರಿದ್ದು, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಅಬ್ದುಲ್ ಸತ್ತಾರ್, ಮಾತನಾಡಿ, ನನ್ನ ಕಾಲಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ, ವಿಮಾನ 6-8 ಅಡಿ ಎತ್ತರದಲ್ಲಿದ್ದಾಗ ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.ವಿಮಾನದಲ್ಲಿ ಎಲ್ಲಾ ಪ್ರಯಾಣಿಕರು ಜೋರಾಗಿ ಅರಚುತಿದ್ದರು.ನಾನು ಮುಳ್ಳಿನ ಗಿಡದ ಮೇಲೆ ಬಿದ್ದಿದ್ದೆ.ನನ್ನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇತರ ಫಾರೂಕ್ ಮತ್ತು ಸಬಬ್ರಿನಾ ಎನ್ನುವ ಪ್ರಯಾಣಿಕರು ಸೇರಿದಂತೆ ಆರು ಮಂದಿ ಪ್ರಯಾಣಿಕರು ಕೂಡಾ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

ವಿಮಾನದ ಸಂಖ್ಯೆ ಐಎಕ್ಸ್-892 ಸಂಖ್ಯೆಯ ಬೋಯಿಂಗ್ 737-800 ವಿಮಾನದಲ್ಲಿ 163 ಪ್ರಯಾಣಿಕರು ಹಾಗೂ 10 ಮಂದಿ ವಿಮಾನ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ಏರ್‌ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ಏತನ್ಮದ್ಯೆ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್, ವಿಮಾನ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮಂಗಳೂರಿಗೆ ಹೊರಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಅಪಘಾತದಲ್ಲಿ ಮೃತರಾದ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಹಾಗೂ, ಗಾಯಂಗೊಂಡವರಿಗೆ 50 ಸಾವಿರ ರೂಪಾಯಿಗಳನ್ನು ಪರಿಹಾರವಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಘೋಷಿಸಿದ್ದಾರೆ.

ವಿಮಾನ ದುರಂತಕ್ಕೆ ಪ್ರದಾನಿ ಡಾ.ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ವಿಮಾನ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಕೇಂದ್ರದ ವಿದೇಶಾಂಗ ಸಚಿವ ಎಸ್‌.ಎಂ. ಕೃಷ್ಣ ಹಾಗೂ ಕಾನೂನು ಸಚಿವ ವೀರಪ್ಪ ಮೋಯ್ಲಿ ಮತ್ತು ಉಸ್ತುವಾರಿ ಸಚಿವ ಕೃಷ್ಣ ಪಾಲೇಮಾರ್ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಾಯಗೊಂಡವರನ್ನು ಎಜೆ ಆಸ್ಪತ್ರೆಗೆ ಸೇರಿಸಲಾಗಿದ್ದು, ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮುಖ್ಯಸ್ಥರು ತಿಳಿಸಿದ್ದಾರೆ.

ವಿಮಾನ ಅಪಘಾತದಲ್ಲಿ, ಮೊಯಿನ್ ಕುಟ್ಟಿ -ಕಣ್ಣೂರು ,ಪ್ರದೀಶ್ ಮಂಗಳೂರು, ಉಮರ್ ಫಾರೂಕ್, ಅಬ್ದುಲ್ ಸತ್ತಾರ್, ಕೃಷ್ಣನ್-ಕಾಸರಗೋಡು, ಡ್ರಾ ,ಸಬ್ರಿನಾ ಬದುಕುಳಿದಿದ್ದಾರೆ.

ವಿಮಾನ ಸ್ಫೋಟ: ಬದುಕುಳಿದವರ ಮತ್ತು ಬಲಿಯಾದವರ ವಿವರ
ದುಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ, ಮಂಗಳೂರಿನ ಕೆಂಜಾರು ಬಳಿಯಿರುವ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವಾಗ ನಿಯಂತ್ರಣ ತಪ್ಪಿದ್ದರಿಂದ ಸಂಭವಿಸಿದ ಭಾರೀ ದುರಂತದಲ್ಲಿ ಎಂಟುಮಂದಿ ಅದೃಷ್ಟವಶಾತ್ ಪಾರಾದ ಘಟನೆಯೂ ನಡೆದಿದೆ.

ವಿಮಾನದಲ್ಲಿ ಒಟ್ಟು 169 ಮಂದಿ ಪ್ರಯಾಣಿಸುತ್ತಿದ್ದು, ದುರಂತದಲ್ಲಿ 160 ಮಂದಿ ಸಾವನ್ನಪ್ಪಿದ್ದಾರೆ, ಆದರೆ ಈ ದುರ್ಘಟನೆಯಲ್ಲಿ ಸಾವಿನ ಮನೆಯ ಕದ ತಟ್ಟಿಯೂ ಅಚ್ಚರಿಕರ ರೀತಿಯಲ್ಲಿ ಮೊಯಿನ್ ಕುಟ್ಟಿ -ಕಣ್ಣೂರು,ಪ್ರದೀಶ್ ಮಂಗಳೂರು, ಉಮರ್ ಫಾರೂಕ್, ಅಬ್ದುಲ್ ಸತ್ತಾರ್, ಕೃಷ್ಣನ್-ಕಾಸರಗೋಡು, ಡಾ.ಸಬ್ರಿನಾ, ರಾಯ್ ಜೊಯೇಲ್ , ಪ್ರತಾಪ್ ಡಿಸೋಜ ಸೇರಿದಂತೆ ಎಂಟು ಮಂದಿ ಬದುಕುಳಿದಿದ್ದಾರೆ

ಅಬ್ದುಲ್ ಸತ್ತಾರ್, ಮಾತನಾಡಿ, ನನ್ನ ಕಾಲಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ, ವಿಮಾನ 6-8 ಅಡಿ ಎತ್ತರದಲ್ಲಿದ್ದಾಗ ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.ವಿಮಾನದಲ್ಲಿ ಎಲ್ಲಾ ಪ್ರಯಾಣಿಕರು ಜೋರಾಗಿ ಅರಚುತಿದ್ದರು. ನಾನು ಮುಳ್ಳಿನ ಗಿಡದ ಮೇಲೆ ಬಿದ್ದಿದ್ದೆ.ನನ್ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯಲ್ಲಿ ಬದುಕುಳಿದವರನ್ನು ಮಂಗಳೂರಿನ ಎಜೆ ಆಸ್ಪತ್ರೆ, ಎಸ್.ವಿ.ಎಸ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ವಿವರಿಸಿವೆ.

ಶಾಸಕ ಹ್ಯಾರಿಸ್ ಸಂಬಂಧಿ ಸಾವು: ಬಜ್ಪೆ ವಿಮಾನ ನಿಲ್ದಾಣ ಸಮೀಪ ಸಂಭವಿಸಿದ ದುರಂತದಲ್ಲಿ ಶಾಂತಿನಗರ ಶಾಸಕ ಹ್ಯಾರಿಸ್ ಅವರ ಸಂಬಂಧಿ ಇಬ್ರಾಹಿಂ ಖಲೀಲ್ ಎಂಬವರು ಸಾವನ್ನಪ್ಪಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಅಲ್ಲದೇ ವಿಮಾನದಲ್ಲಿ ಒಟ್ಟು 18ಮಕ್ಕಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇದರಲ್ಲಿ ನಾಲ್ಕರ ಹರೆಯದ ಇಬಾಜಿನ್ ಎಂಬ ಮಗು ಕೂಡ ಸಾವನ್ನಪ್ಪಿದೆ.

ಆಕ್ರಂದನ, ದಟ್ಟ ಹೊಗೆ, ಭರದ ರಕ್ಷಣಾ ಕಾರ್ಯ:ವಿಮಾನ ಭಸ್ಮವಾದ ಸ್ಥಳದಲ್ಲಿ ದಟ್ಟವಾದ ಹೊಗೆ ಇಡೀ ಪ್ರದೇಶವನ್ನು ಆವರಿಸಿದ್ದು, ಕಮಾಂಡೋ ಸಿಬ್ಬಂದಿಗಳು, ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 25 ಆಂಬ್ಯುಲೆನ್ಸ್‌ಗಳು ಗಾಯಾಳುಗಳನ್ನು, ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸುತ್ತಿವೆ. ಸ್ಥಳದಲ್ಲಿಯೇ 15ಮಂದಿ ವೈದ್ಯರ ತಂಡ ಚಿಕಿತ್ಸೆಯನ್ನು ನೀಡುತ್ತಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲ ಗ್ರಾಮ, ಜಿಲ್ಲೆಯ ಜನರು ತಂಡೋಪತಂಡವಾಗಿ ದುರ್ಘಟನೆಯನ್ನು ವೀಕ್ಷಿಸಲು ಆಗಮಿಸುತ್ತಿದ್ದಾರೆ.

No comments: