ದುಬೈ, ಮೇ 20: ಪಾಕಿಸ್ತಾನದ ವ್ಯಕ್ತಿಯೋರ್ವನನ್ನು ಕೊಲೆಗೈದಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 17 ಮಂದಿ ಭಾರತೀಯರಿಗೆ ಮರಣ ದಂಡನೆ ವಿಧಿಸಿರುವ ಶಾರ್ಜಾದ ನ್ಯಾಯಾಲಯವು ಪ್ರಕರಣದ ಆಲಿಕೆಯನ್ನು ಜೂನ್ 16ಕ್ಕೆ ಮುಂದೂಡಿದೆ. ಇದೇ ವೇಳೆ, ಶಿಕ್ಷಿತರಿಗೆ ಪಂಜಾಬಿ ಅನುವಾದಕ ರನ್ನು ಸಂಪರ್ಕಿಸಲು ನ್ಯಾಯಾಲಯ ಅನುಮತಿ ನೀಡಿದೆ.
‘‘ಅವರು ತಾವು ತಪ್ಪಿತಸ್ಥರು ಅಥವಾ ಮುಗ್ಧರು ಎಂದು ವಾದಿಸಬಹುದಾಗಿತ್ತು. ಆದರೆ ಅವರೇ ಹೇಳುವಂತೆ ಅವರಿಗೆ ಪಂಜಾಬಿಯನ್ನು ಬಿಟ್ಟರೆ ಬೇರೆ ಯಾವುದೇ ಭಾಷೆ ಅರ್ಥವಾಗದು. ಬಳಿಕ ನ್ಯಾಯಾಲಯವು ನಮಗೆ ಪಂಜಾಬಿ ಅನುವಾದಕರೊಬ್ಬರನ್ನು ನೀಡಲು ಸಮ್ಮತಿಸಿದೆ’’ ಎಂದು ಪ್ರಕರಣವನ್ನು ನಿರ್ವಹಿಸುತ್ತಿರುವ ವಕೀಲೆ ಬಿಂದು ಸುರೇಶ್ ಚೆಟ್ಟೂರ್ ತಿಳಿಸಿದ್ದಾರೆ.
ಆಕೆಯ ಪ್ರಕಾರ, ಶಾರ್ಜಾದ ಮೇಲ್ಮನವಿ ನ್ಯಾಯಾಲಯವು ಪ್ರಕರಣದ ಆಲಿಕೆಯನ್ನು ಜೂನ್ 16ಕ್ಕೆ ಮುಂದೂಡಿದ್ದು, ಮತ್ತೆ ವಿಚಾರಣೆ ನಡೆಸಲಿದೆ. ದುಬೈಯಲ್ಲಿರುವ ಭಾರತೀಯ ರಾಯಭಾರಿಯು ಈಗಾಗಲೇ ಭಾರತೀಯರಿಗೆ ಅನುವಾದ ರೊಬ್ಬರನ್ನು ವ್ಯವಸ್ಥೆಗೊಳಿಸಿದ್ದಾರೆ.
‘‘ಸಂಗತಿಗಳು ಹಂತಹಂತವಾಗಿ ಮುಂದು ವರಿದಿವೆ. ಆದರೆ ಸಂಗತಿಗಳು ಯೋಜನೆಯ ಪ್ರಕಾರ ನಡೆದಿವೆ ಎಂದಷ್ಟೇ ನಾನು ಹೇಳಬಲ್ಲೆ’’ ಎಂದು ಬಿಂದು ವಿವರಿಸಿದ್ದಾರೆ.
ಪಾಕಿಸ್ತಾನಿ ವ್ಯಕ್ತಿಯೋರ್ವನನ್ನು ಥಳಿಸಿ ಕೊಲೆಗೈದಿರುವ ಹಾಗೂ ಇತರ ಮೂವರನ್ನು ಗಾಯಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ ಶಾರ್ಜಾದ ನ್ಯಾಯಾಲಯವು ಮೊದಲ ವಿಚಾರಣೆಯಲ್ಲಿ ಮಾರ್ಚ್ 29ರಂದು ಪಂಜಾಬಿನ 16 ಹಾಗೂ ಹರ್ಯಾಣದ ಓರ್ವ ಸೇರಿದಂತೆ 17 ಮಂದಿ ಭಾರತೀಯರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಭಾರತೀಯರ ಪರವಾಗಿ ಎಪ್ರಿಲ್ 7ರಂದು ಮೇಲ್ಮನವಿ ಸಲ್ಲಿಸಲಾಗಿತ್ತು.
Subscribe to:
Post Comments (Atom)
No comments:
Post a Comment