ಲಂಡನ್, ಮೇ 20: ಭಾರತದೊಂದಿಗೆ ನೂತನ ವಿಶೇಷ ಸಂಬಂಧ ನಿರ್ಮಿಸಲು ತಾನು ಬದ್ಧವಾಗಿರುವುದಾಗಿ ಬ್ರಿಟನ್‌ನ ಹೊಸ ಮೈತ್ರಿ ಸರಕಾರ ಇಂದು ತಿಳಿಸಿದೆ. ಈಗಿನ ಪ್ರಧಾನಿ ಡೇವಿಡ್ ಕ್ಯಾಮರೂನ್ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಹೊಸದಿಲ್ಲಿಗೆ ಭೇಟಿ ನೀಡಿದ್ದ ವೇಳೆ ಸುಮಾರು 2006ರ ಅವಧಿಯಲ್ಲೇ ಈ ಉದ್ದೇಶವನ್ನು ತಿಳಿಸಿದ್ದರು.
‘‘ನಾವು ಭಾರತದೊಂದಿಗೆ ನೂತನ ವಿಶೇಷ ಸಂಬಂಧವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದೇವೆ. ಚೀನದೊಂದಿಗೂ ನಾವು ನಿಕಟ ಬಾಂಧವ್ಯ ಹೊಂದಲು ಬಯಸುತ್ತೇವೆ. ನಮ್ಮೆಲ್ಲ ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ನಾವು ಮಾನವೀಯ ಹಕ್ಕುಗಳಿಗೆ ಸಂಬಂಧಿಸಿದಂತೆ ದೃಢವಾದ ನಿಲುವನ್ನು ಹೊಂದಲಿದ್ದೇವೆ’’ ಎಂದು ಇಂದು ಪ್ರಕಟವಾದ ಮೈತ್ರಿ ಒಪ್ಪಂದದ ಪೂರ್ಣ ಪಠ್ಯದಲ್ಲಿ ತಿಳಿಸಲಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಸದಸ್ಯತ್ವ ಹೊಂದುವುದನ್ನು ಮೈತ್ರಿ ಒಪ್ಪಂದ ಬೆಂಬಲಿಸಿದೆ. ‘‘ಜಪಾನ್, ಭಾರತ, ಜರ್ಮನಿ, ಬ್ರೆಝಿಲ್ ಹಾಗೂ ಆಫ್ರಿಕದ ಖಾಯಂ ಪ್ರಾತಿನಿಧ್ಯ ಸೇರಿದಂತೆ ನಾವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗೆ ಬೆಂಬಲ ನೀಡುತ್ತೇವೆ’’ ಎಂದು ಅದು ತಿಳಿಸಿದೆ.
May 21, 2010
Subscribe to:
Post Comments (Atom)
No comments:
Post a Comment