
ಉಪ್ಪಿನಂಗಡಿ, ಮೇ 10: ಸಮಾಜದಲ್ಲಿ ಅನಿಷ್ಟ ವಾಗಿ ಕಾಡುತ್ತಿರುವ ವರದಕ್ಷಿಣೆಯೆಂಬ ಪೆಡಂಭೂತ ವನ್ನು ಹೋಗಲಾಡಿಸಲು ಸರ್ವರೂ ಕೈಜೋಡಿ ಸಬೇಕು ಎಂದು ಮಂಗಳೂರು ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.
ಅವರು ಇಲ್ಲಿನ ಸಫಾ ಯಂಗ್‌ಮೆನ್ಸ್ ಅಸೋಸಿಯೇಶನ್ ರಜತ ಮಹೋತ್ಸವ ಪ್ರಯುಕ್ತ ಮಠ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ರವಿವಾರ ಏರ್ಪಡಿಸಲಾಗಿದ್ದ ೨೦ ಜೋಡಿಗಳ ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡುತ್ತಿದರು.ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಎಂ.ಬಿ.ಅಬ್ದುರ್ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ವಿನಯ್‌ಕುಮಾರ್ ಸೊರಕೆ, ಆತೂರು ಬದ್ರಿಯಾ ಜುಮಾ ಮಸೀದಿಯ ಮುದರ್ರಿಸ್ ಸೈಯದ್ ಇಬ್ರಾಹೀಂ ಅಲ್‌ಹಾದಿ ತಂಙಳ್ ಮಾತನಾಡಿದರು.ವೇದಿಕೆಯಲ್ಲಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬೊಂಡಾಲ ಜಗನ್ನಾಥ ಶೆಟ್ಟಿ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೊದಿನ್ ಬಾವ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಕೆ.ಶಾಹುಲ್ ಹಮೀದ್, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಎಂ.ಇದಿನಬ್ಬ, ಸ್ಥಳೀಯ ಮಸೀದಿಯ ಖತೀಬ್ ಮುಹಮ್ಮದ್ ರಫಿಖ್ ಬಾಖವಿ, ಯೂಸುಫ್ ಸಅದಿ, ಎಂ.ಕೆ.ರಶೀದ್ ಸಖಾಫಿ, ಕೊಪ್ಪಳ ಹಯಾತುಲ್ ಇಸ್ಲಾಂ ಮದ್ರಸದ ಅಧ್ಯಕ್ಷ ಯು.ಕೆ.ಅಬ್ದುರ್ರಶೀದ್, ಪಿಎಫ್‌ಐ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್, ಅಬ್ದುರ್ರಝಾಕ್ ಮಠ, ಹಿರ್ತಡ್ಕ ಮದ್ರಸದ ಅಧ್ಯಕ್ಷ ಯು.ಎಂ. ಇಸ್ಮಾಯೀಲ್, ಮುಫತ್ತಿಶ್ ಖಾಸಿಂ ಮುಸ್ಲಿಯಾರ್, ಡಾ.ಅಶ್ರಫ್ ಮಂಗಳೂರು, ಪುತ್ತೂರು ನೋಟರಿ ಫಝಲ್ ರಹೀಂ, ಉದ್ಯಮಿಗಳಾದ ಎಂ.ಜಿ.ರಹೀಂ, ರಝಾಕ್ ಪುತ್ತೂರು, ಹೈದರ್ ಎಂ.ಕೆ., ಮುಹಮ್ಮದ್ ಶರೀಫ್ ಪುತ್ತೂರು, ಹನೀಫ್ ನೆಕ್ಕಿಲಾಡಿ, ಹನೀಫ್ ಎಚ್.ಎನ್, ಆದಂ ಕೊಪ್ಪಳ, ಮುಹಮ್ಮದ್ ಸಅದಿ ವಳವೂರು, ಕೆ.ಪಿ.ಸಿದ್ದೀಕ್ ಹಾಜಿ ಅರಫಾ, ಅಬ್ದುರ್ರಹ್ಮಾನ್ ಕೆರೆಮೂಲೆ, ಕುಂಞಿ ಮೋನು ಹಾಜಿ, ಸಿದ್ದೀಕ್ ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.ಮಠ ಬಿಜೆಎಂ ಸಮಿತಿಯ ಉಪಾಧ್ಯಕ್ಷ ನಝೀರ್ ಮಠ ಸ್ವಾಗತಿಸಿ, ಯಂಗ್‌ಮೆನ್ಸ್ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಕೆ.ಅಬ್ದುಲ್ ರಹಿಮಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ವರದಿ ಮಂಡಿಸಿದರು.ಮುಹಮ್ಮದ್ ಅಶ್ರಫ್ ಮಠ ವಂದಿಸಿದರು. ಸಫಾ ಯಂಗ್‌ಮೆನ್ಸ್‌ನ ಪದಾಧಿಕಾರಿಗಳಾದ ಅಬ್ದುರ್ರಝಾಕ್ ಆರ್.ಪಿ., ನಾಸಿರ್ ವೈಎನ್‌ಕೆ, ನಾಸಿಕ್ ಅಬ್ಬಾಸ್, ಆಸಿಫ್ ಎಂ.ಕೆ., ಹಮೀದ್ ಭಾರತ್, ಶರೀಫ್ ಕೊಪ್ಪಳ, ಇಸ್ಹಾಕ್ ಮುಸ್ಲಿಯಾರ್, ಜಮಾಲ್ ಮುಸ್ಲಿಯಾರ್ ಶಿಕ್ಷಕರಾದ ಮುಹಮ್ಮದ್ ರಫಿಕ್ ಮತ್ತು ಅಬ್ದುರ್ರಝಾಕ್ ಅನಂತಾಡಿ ವಿವಿಧ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ವೈದ್ಯ ಡಾ.ಅಶ್ರಫ್ (ಎಂಎಸ್, ಎಂಸಿಎಚ್) ಶಬೀರ್ ಮದನಿ ಹಾಗೂ ಎಂ.ಇದಿನಬ್ಬ ಹಾಗೂ ಹಾರೂನ್ ರಶೀದ್‌ರನ್ನು ಸನ್ಮಾನಿಸಲಾಯಿತು.
No comments:
Post a Comment