VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 9, 2010

ಲಂಡನ್ : ಕೌನ್ಸಿಲರ್ ಆಗಿ ಕನ್ನಡಿಗ ನೀರಜ್


ಲಂಡನ್ , ಮೇ.9: ಬ್ರಿಟನ್‌ನ ಸ್ಥಳೀಯ ಆಡಳಿತಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಲ್ಯಾಂಬೆತ್ ವಾರ್ಡ್ ಕ್ಷೇತ್ರದ ಲೇಬರ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕನ್ನಡಿಗ ಡಾ. ನೀರಜ್ ಪಾಟೀಲ್ ಅವರು ಜಯಭೇರಿ ಬಾರಿಸಿದ್ದು, ಕೌನ್ಸಿಲರ್ ಆಗಿ ಪುನರಾಯ್ಕೆಯಗೊಂಡಿದ್ದಾರೆ.ಲಂಡನ್‌ನಲ್ಲಿ ತಜ್ಞ ವೈದ್ಯರಾಗಿರುವ ಕನ್ನಡಿಗ ಡಾ. ನೀರಜ್ ಪಾಟೀಲ್ ಅವರು 2006ರಲ್ಲಿ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷದಿಂದ ಅದೇ ವಾರ್ಡ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹಾಗಾಗಿ ಈ ಬಾರಿಯೂ ಲೇಬರ್ ಪಕ್ಷವು ಇವರಿಗೆ ಅದೇ ಕ್ಷೇತ್ರದಿಂದ ಕೌನ್ಸಿಲರ್ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್ ನೀಡಿತ್ತು. ನೀರಜ್ ಅವರು ಪುನರಾಯ್ಕೆ ಗೊಳ್ಳುವ ಮೂಲಕ ತಮ್ಮ ಕಾರ್ಯಕ್ಷಮತೆಗೆ ಜನ ಬೆಂಬಲ ಪಡೆದಿದ್ದಾರೆ.ಗುಲ್ಬರ್ಗ ಜಿಲ್ಲೆಯ ಕಮಲಾಪುರದ ಡಾ. ನೀರಜ್ ಪಾಟೀಲ್ ಅವರು ಲೇಬರ್ ಪಕ್ಷದ 'ಜನಾಂಗೀಯ ಅಲ್ಪಸಂಖ್ಯಾತ ಕಾರ್ಯಪಡೆ'ಯ ರಾಷ್ಟ್ರೀಯ ಕಾರ್ಯದರ್ಶಿಯಾಗಿಯೂ ನೇಮಕಗೊಂಡಿದ್ದಾರೆ. ಭಾರತೀಯ ಮೂಲದ ಸಂಸತ್ ಸದಸ್ಯ ಕೀತ್ ವಾಜ್ ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಬ್ರಿಟನ್ ಅತಂತ್ರ ಸಂಸತ್ : ಮತ್ತೆ ಅತಂತ್ರ ಸಂಸತ್ ನಿರ್ಮಾಣವಾಗಿರುವ ಬ್ರಿಟನ್‌ನಲ್ಲಿ ಸರಕಾರ ರಚನೆಗೆ ಕನ್ಸರ್ವೇಟಿವ್ ಪಕ್ಷದ ನಾಯಕ ಡೇವಿಡ್ ಕ್ಯಾಮರಾನ್, ಲಿಬರಲ್ ಡೆಮೊಕ್ರಾಟ್ ಪಕ್ಷದ ನೆರವು ಕೋರಿದ್ದಾರೆ. ಹಣಕಾಸು ಮಾರುಕಟ್ಟೆಯ ವ್ಯವಸ್ಥೆಯನ್ನು ಯಥಾಸ್ಥಿತಿಗೆ ತರಲು ಸ್ಥಿರ ಸರಕಾರವನ್ನು ರಚಿಸು ವುದು ಅಗತ್ಯವಾಗಿದೆ ಎಂದು ಕ್ಯಾಮರಾನ್ ಹೇಳಿದ್ದಾರೆ. ಈ ಸಲದ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಮೈತ್ರಿ ಸರಕಾರ ಬರುವುದು ಸ್ಪಷ್ಟವಾಗಿದೆ.

No comments: