VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 19, 2010

ಜೂನ್ 26 ರಂದು ತರೂರ್-ಪುಷ್ಕರ್‌ ನಿಶ್ಚಿತಾರ್ಥ


ಇಂಡಿಯನ್ ಪ್ರೀಮಿಯರ್ ಲೀಗ್‌ನ ಕೊಚ್ಚಿ ಫ್ರಾಂಚೈಸಿ ವಿವಾದದ ಮೂಲವಾಗಿದ್ದ ಸುನಂದಾ ಪುಷ್ಕರ್ ಮತ್ತು ಮಾಜಿ ವಿದೇಶಾಂಗ ಖಾತೆಯ ರಾಜ್ಯ ಸಚಿವ ಶಶಿ ತರೂರ್ ಮಧ್ಯೆ, ಜೂನ್ 26 ರಂದು ನಿಶ್ಚಿತಾರ್ಥ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮುಂಬರುವ ಜೂನ್ 26 ಮತ್ತು 27 ರಂದು ನಿಶ್ಚಿತಾರ್ಥ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದ್ದು, ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ ಎಂದು ತರೂರ್ ಆತ್ಮಿಯ ಮೂಲಗಳು ಬಹಿರಂಗಪಡಿಸಿವೆ. ಪ್ರಸ್ತುತ ತರೂರ್ ವಿದೇಶ ಪ್ರವಾಸದಲ್ಲಿದ್ದಾರೆ.

ಬೆಂಗಳೂರಿನಲ್ಲಿ ಬಾಲಿವುಡ್ ನಟ ಸಂಜಯ್ ಖಾನ್ ಅವರ ತುಮಕೂರ ರಸ್ತೆಯಲ್ಲಿರುವ ಗೋಲ್ಡನ್ ಪಾಮ್ಸ್ ಹೋಟೆಲ್‌‌ನಲ್ಲಿ ತರೂರ್-ಪುಷ್ಕರ್ ನಿಶ್ಚಿತಾರ್ಥ ನಡೆಯಲಿದ್ದು, ದೇಶದ ಅನೇಕ ಪ್ರಮುಖ ರಾಜಕಾರಣಿಗಳು ಉಪಸ್ಥಿತರಿರಲಿದ್ದಾರೆ.

ಗೋಲ್ಡನ್ ಪಾಮ್ಸ್ ಹೋಟೆಲ್ ಹಾಗೂ ಸ್ಪಾ ಹೋಟೆಲ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ತರೂರ್-ಪುಷ್ಟರ್ ನಿಶ್ಚಿತಾರ್ಥವನ್ನು ಹೋಟೆಲ್‌ನ ವ್ಯವಸ್ಥಾಪಕರು ಖಚಿತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

No comments: