ಜಾಗತಿಕ ಕ್ರಿಕೆಟ್‌ಗೆ ಧಕ್ಕೆಯನ್ನುಂಟುಮಾಡುವಂತಹ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಮೇಲೆ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಅಮಾನತುಗೊಂಡಿರುವ ಅಧ್ಯಕ್ಷ ಲಲಿತ್ ಮೋದಿ ಅವರಿಗೆ ಭಾರತೀಯ ಕ್ರಿಕೆಟ್ ಮಂಡಳಿ ನೀಡಿದ್ದ ಎರಡನೇ ಶೋಕಾಸ್ ನೋಟಿಸ್‌ನ ಗಡುವನ್ನು ಹತ್ತು ದಿನ ವಿಸ್ತರಿಸಿದೆ.
ಆ ಮೂಲಕ ಮೋದಿಗೆ ಉತ್ತರ ನೀಡಲು ಮತ್ತಷ್ಟು ಅವಧಿ ದೊರಕಿದಂತಾಗಿದೆ.
ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಅಧ್ಯಕ್ಷ ಜೈಲ್ಸ್ ಕ್ಲಾರ್ಕ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಿಸಿಸಿಐ ಕಳೆದ ಮೇ 6ರಂದು ನೋಟಿಸ್ ಜಾರಿಗೊಳಿಸಲಾಗಿತ್ತು.
ಆದರೆ ಗಡುವು ವಿಸ್ತರಣೆಗೆ ಮೋದಿ ಕಳೆದ ರವಿವಾರ ಮನವಿ ಮಾಡಿದ್ದರು. ಇದರಂತೆ ಮೋದಿ ಉತ್ತರಕ್ಕೆ ಮೇ 31ರ ವೆರೆಗೆ ಕಾಲವಕಾಶ ದೊರೆತಿದೆ.
ಐಪಿಎಲ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮೋದಿ ಕಳೆದ ಭಾನುವಾರ 15,000 ಸಾವಿರ ಪುಟಗಳ ಉತ್ತರ ಸಲ್ಲಿಸಿದ್ದರು.
Subscribe to:
Post Comments (Atom)
No comments:
Post a Comment