May 28, 2010
ಬಂಗಾಳದಲ್ಲಿ ನಕ್ಸಲರ ಅಟ್ಟಹಾಸ: ಹಳಿ ತಪ್ಪಿದ ರೈಲು; 68 ಸಾವು
ಪಶ್ಚಿಮ ಬಂಗಾಳದಲ್ಲಿ ನಕ್ಸಲರು ರೈಲ್ವೇ ಹಳಿ ಸ್ಫೋಟಿಸಿದ ಪರಿಣಾಮ ಸಂಭವಿಸಿದ ಭಾರೀ ರೈಲು ದುರಂತದಲ್ಲಿ 68 ಮಂದಿ ಸಾವೀಗೀಡಾಗಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಪಶ್ಚಿಮ ಮಿದ್ನಾಪುರ್ ಜಿಲ್ಲೆಯಲ್ಲಿ ನಡೆದಿದೆ. ಮುಂಬೈಗೆ ಬರುತ್ತಿದ್ದ ಜ್ಞಾನೇಶ್ವರಿ ಏಕ್ಸ್‌ಪ್ರೆಸ್ ಅವಘಡಕ್ಕೀಡಾಗಿದ್ದು, 13 ಬೋಗಿಗಳು ಹಳಿ ತಪ್ಪಿವೆ. ಹಳಿ ತಪ್ಪಿದ ಜ್ಞಾನೇಶ್ವರಿ ಏಕ್ಸ್‌ಪ್ರೆಸ್‌ಗೆ ಗೂಡ್ಸ್ ಢಿಕ್ಕಿಯಾಗಿರುವುದು ಹೆಚ್ಚಿನ ಅನಾಹುತಕ್ಕೆ ಕಾರಣವಾಯಿತು. ಇದರಿಂದಾಗಿ 3 ಎಸಿ ಕೋಚ್‌ಗಳಿಗೂ ಹಾನಿಯುಂಟಾಗಿತ್ತು.ಮಧ್ಯರಾತಿ 1.20ರ ಹೊತ್ತಿಗೆ ಘಟನೆ ಸಂಭವಿಸಿದ್ದು, ಗಾಯಾಳುಗಳನ್ನು ಹೌರಾ, ಖರಗ್‌ಪುರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಖೆಮ್‌ಸುಲಿ ಮತ್ತು ಸರ್ದಾಹಿ ರೈಲ್ವೇ ನಿಲ್ದಾಣಗಳ ಬಳಿ ದುರ್ಘಟನೆ ಸಂಭವಿಸಿದೆ. ಬೋಗಿಗಳ ಅಡಿಯಲ್ಲಿ ಸಿಲುಕಿದ್ದ ಶವಗಳನ್ನು ಹೊರಕ್ಕೆ ತೆಗೆಯುವ ಕಾರ್ಯ ಮುಂದುವರಿದಿದೆ. ಸಿಆರ್‌ಪಿಎಫ್ ಯೋಧರು, ರೈಲ್ವೇ ಪೋಲಿಸ್ ಮತ್ತು ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನೇತೃತ್ವ ವಹಿಸಿದ್ದಾರೆ. ವಿಷಯ ಅರಿತ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಬಂದ ಕೇಂದ್ರ ರೈಲ್ವೇ ಸಚಿವ ಮಮತಾ ಬ್ಯಾನರ್ಜಿ ಮೃತ ಕುಟುಂಬಕ್ಕೆ ತಲಾ ಐದು ಲಕ್ಷ ಮತ್ತು ಗಾಯಾಳುಗಳಿಗೆ ತಲಾ ಒಂದು ಲಕ್ಷ ರೂಪಾಯಿ ಘೋಷಿಸಿದ್ದಾರೆ. ಅಲ್ಲದೆ ಘಟನೆಯನ್ನು ತೀರಾ ದುರದೃಷ್ಟಕರ ಎಂದು ಬಣ್ಣಿಸಿದ ಬ್ಯಾನರ್ಜಿ ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವ ಭರವಸೆ ನೀಡಿದರು. ರೈಲು ದುರಂತದ ಸಹಾಯವಾಣಿ ಸಂಖ್ಯೆ: ಟಾಲ್ ಫ್ರೀ ಸಂಖ್ಯೆ: 10722 ಖರಗ್‌ಪುರ್- (0322) 255751 ಮತ್ತು 255735 ಹೌರ- (033) 26382217 ಟಾಟಾನಗರ್- (0657) 2290324, 2290074, 2290382ರೌಖೇಲಾ- (0661) 2511155ಚಕ್ರಧಾರ್‌ಪುರ್- (06587) 238072ಜಾರ್ಸುಗುಡಾ- - (06445) 270977ಮುಂಬೈ- (022) 22694040, 25334840, 25298499
Subscribe to:
Post Comments (Atom)
No comments:
Post a Comment