VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 3, 2010

ರೈನಾ ಶತಕ; ದ.ಆಫ್ರಿಕಾಕ್ಕೆ ಸೋಲುಣಿಸಿದ ಭಾರತ ಸೂಪರ್ 8ಕ್ಕೆ



ಸೈಂಟ್ ಲೂಸಿಯಾ, ಸೋಮವಾರ, 3 ಮೇ 2010( 10:05 IST )
-->
ಬ್ಯಾಟ್ಸ್‌ಮನ್ ಸುರೇಶ್ ರೈನಾ ಬಾರಿಸಿದ ಅಮೋಘ ಶತಕದ ನೆರವಿನಿಂದ (101 ರನ್, 60 ಎಸೆತ) ಟೀಮ್ ಇಂಡಿಯಾ ತಂಡವು ಇಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟ್ವೆಂಟಿ-20 ವಿಶ್ವಕಪ್‌ನ ಗ್ರೂಪ್ 'ಸಿ' ವಿಭಾಗದ ತನ್ನ ಎರಡನೇ ಪಂದ್ಯವನ್ನು 14 ರನ್ನುಗಳಿಂದ ರೋಚಕವಾಗಿ ಗೆದ್ದುಕೊಂಡಿದ್ದು, ಸೂಪರ್ ಎಂಟರ ಘಟಕ್ಕೆ ಪ್ರವೇಶಿಸಿದೆ. ರೈನಾ ಬ್ಯಾಟ್‌ನಿಂದ ದಾಖಲಾಗಿರುವುದು ಅಂತಾರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನ ಮೂರನೇ ಶತಕ. ಕೇವಲ 60 ಎಸೆತಗಳನ್ನು ಎದುರಿಸಿದ ಅವರು ಒಂಬತ್ತು ಬೌಂಡರಿ ಹಾಗೂ ಐದು ಭರ್ಜರಿ ಸಿಕ್ಸರುಗಳ ನೆರವಿನಿಂದ 101 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 20 ಓವರುಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತ್ತು. ಆದರೆ ಬೃಹತ್ ಸವಾಲನ್ನು ಬೆನ್ನತ್ತುವಲ್ಲಿ ಎಡವಿದ ಹರಿಣಗಳು ನಿಗದಿತ ಓವರುಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಯಿತು. ರೈನಾ... ಲಭಿಸಿದ ಅದೃಷ್ಟವನ್ನು ಪೂರ್ಣವಾಗಿ ಉಪಯೋಗಿಸಿಕೊಂಡ ಈ ಎಡಗೈ ಬ್ಯಾಟ್ಸ್‌ಮನ್ ನಿಜಕ್ಕೂ ಸೂಪರ್ ಹೀರೊ ಎನಿಸಿಕೊಂಡರು. ಐದು ರನ್ ಗಳಿಸಿದ್ದಾಗ ಮೊರ್ನೆ ಮೊರ್ಕೆಲ್ ದಾಳಿಯಲ್ಲಿ ರೈನಾ ಔಟಾಗಿದ್ದರು. ಆದರೆ ಅದರು ನೊ ಬಾಲ್ ಆಗಿತ್ತು. ಅಲ್ಲಿಂದ ನಂತರ ಒಂದು ರನೌಟ್ ಜೀವದಾನವನ್ನು ಪಡೆದ ರೈನಾ ಹರಿಣಗಳ ಬೌಲರುಗಳನ್ನು ದಂಡಿಸುತ್ತಾ ಸಾಗಿದರು. ಅವರ ಪರಾಕ್ರಮಕ್ಕೆ ಐದು ಸಿಕ್ಸುರಗಳೇ ಸಾಕ್ಷಿಯಾಗಿದ್ದವು. ಯುವರಾಜ್ ಸಿಂಗ್ ಜೊತೆ ಮೂರನೇ ವಿಕೆಟ್‌ಗೆ ಕೇವಲ 62 ಎಸೆತಗಳಲ್ಲಿ 88 ರನ್ನುಗಳ ಜತೆಯಾಟದಲ್ಲಿ ರೈನಾ ಭಾಗೀಯಾದರು. ಫಾರ್ಮ್‌ಗೆ ಮರಳಿದ ಯುವಿ 30 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರುಗಳ ನೆರವಿನಿಂದ 37 ರನ್ ಗಳಿಸಿದರು. ಅದೇ ರೀತಿ ಕೊನೆಗೆ ಬಂದ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡಾ ತಲಾ ಒಂದು ಸಿಕ್ಸ್ ಹಾಗೂ ಬೌಂಡರಿಗಳ ನೆರವಿನಿಂದ 7 ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿದರು. ಯೂಸುಫ್ ಕೂಡಾ 11 ರನ್ನುಗಳ ಉಪಯುಕ್ತ ನೆರವು ನೀಡಿದರು. ಭಾರತ ತನ್ನ ಕೊನೆಯ ಐದು ಓವರುಗಳಲ್ಲಿ 75 ರನ್ ಸೊರೆಗೈದಿತ್ತು. ಆದರೆ 187ರ ಬೃಹತ್ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾಕ್ಕೆ ಆರಂಭದಲ್ಲೇ ಎಲ್. ಬೋಸ್ಮನ್ (8) ವಿಕೆಟ್ ನಷ್ಟವಾಯಿತು. ಆದರೆ ಐಪಿಎಲ್‌ನ ಉತ್ತ ಫಾರ್ಮ್ ಮುಂದುವರಿಸಿದ ಜಾಕ್ವಾಸ್ ಕಾಲಿಸ್ ಮತ್ತು ನಾಯಕ ಗ್ರೇಮ್ ಸ್ಮಿತ್ ತಂಡವನ್ನು ಮುನ್ನಡೆಸಿದರು. ಕೇವಲ 54 ಎಸೆತ ಎದುರಿಸಿದ ಕಾಲಿಸ್ ತಲಾ ಮೂರು ಬೌಂಡರಿ ಹಾಗೂ ಸಿಕ್ಸರುಗಳ ನೆರವಿನಿಂದ 73 ರನ್ ಗಳಿಸಿದರು. ಅದೇ ರೀತಿ ಸ್ಮಿತ್ 36 ರನ್ ಗಳಿಸಿದರು. ಕೊನೆಗೆ ಬಂದ ಎ.ಡಿ.ಡಿ. ವಿಲಿಯರ್ಸ್ (31 ರನ್, 15 ಎಸೆತ) ಮತ್ತು ಆಲ್ಬಿ ಮೊರ್ಕೆಲ್ ರನ್ (12) ಗತಿ ಏರಿಸಲು ಯತ್ನಿಸಿದರೂ ಆಗಲೇ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸಿತ್ತು. ಭಾರತದ ಪರ ಎರಡು ವಿಕೆಟ್ ಕಿತ್ತ ಯೂಸುಫ್ ಪಠಾಣ್ ಯಶಸ್ವಿ ಬೌಲರ್‌ರೆನಿಸಿದರು. ಅದೇ ರೀತಿ ಆಶಿಶ್ ನೆಹ್ರಾ ಮತ್ತು ಪಿಯೂಷ್ ಚಾವ್ಲಾ ತಲಾ ಒಂದು ವಿಕೆಟ್ ಕಿತ್ತರು. ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದ ರೈನಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಭಾರತ ಇದೀಗ ಗ್ರೂಪ್ 'ಸಿ' ವಿಭಾಗದ ಅಗ್ರತಂಡವಾಗಿ ಸೂಪರ್ ಎಂಟರ ಘಟ್ಟಕ್ಕೇರಿದೆ.

No comments: