ವಾಶಿಂಗ್ಟನ್, ಮೇ 28: ಫೆಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಜೂನ್ 9ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆಂದು ಅಮೆರಿಕದ ಪತ್ರಿಕಾ ಕಾರ್ಯದರ್ಶಿ ಕಚೇರಿ ಗುರುವಾರ ಹೇಳಿಕೆಯೊಂದರಲ್ಲಿ ಪ್ರಕಟಿಸಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಫೆಲೆಸ್ತೀನಿ ಪ್ರಾಧಿಕಾರದ ಅಧ್ಯಕ್ಷ ಮಹ್ಮೂದ್ ಅಬ್ಬಾಸ್‌ರನ್ನು ಶ್ವೇತಭವನದಲ್ಲಿ ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಇಸ್ರೇಲಿ- ಫೆಲೆಸ್ತೀನಿ ವಿಚಾರಗಳಿಗೆ ಸಂಬಂಧಿಸಿ ಮಾತುಕತೆಗಳ ಪುನರವಲೋಕನ ಹಾಗೂ ಅಮೆರಿಕವು ಈ ನಿಟ್ಟಿನಲ್ಲಿ ಏನು ಮಾಡಬಹುದೆಂಬುದರ ಬಗ್ಗೆ ಉಭಯ ನಾಯಕರು ಸುದೀರ್ಘ ಚರ್ಚೆ ನಡೆಸಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.ಫೆಲೆಸ್ತೀನಿಯರ ಮಹತ್ವಾ ಕಾಂಕ್ಷೆಗಳನ್ನು ಈಡೇರಿಸುವ ಹಾಗೂ ಫೆಲೆಸ್ತೀನಿ ರಾಷ್ಟ್ರದ ಸ್ಥಾಪನೆಗೆ ಬೆಂಬಲ ನೀಡುವ ಬಗ್ಗೆಯೂ ಚರ್ಚೆ ನಡೆಯಲಿದೆ.
May 29, 2010
Subscribe to:
Post Comments (Atom)
No comments:
Post a Comment