ಲಂಡನ್, ಮೇ 28: ಭಾರತದಂತಹ ಐರೋಪ್ಯ ಒಕ್ಕೂಟೇತರ ರಾಷ್ಟ್ರಗಳಿಂದ ವಲಸೆ ಬರುವವರ ಸಂಖ್ಯೆಯನ್ನು ಕಡಿಮೆಗೊಳಿಸಲು ಬ್ರಿಟನ್‌ನ ಡೇವಿಡ್ ಕ್ಯಾಮರೂನ್‌ರ ನೂತನ ಸರಕಾರ ಚಿಂತನೆ ನಡೆಸಿದೆ.2009ರಲ್ಲಿ ಬ್ರಿಟನ್‌ನ ನಾಗರಿಕತ್ವ ಪಡೆದ ವಿದೇಶೀಯರ ಪಟ್ಟಿಯಲ್ಲಿ ಭಾರತೀಯರೇ ಅಧಿಕವಾಗಿರುವುದನ್ನು ಅಧಿಕೃತ ಅಂಕಿಅಂಶಗಳು ದೃಢಪಡಿಸಿವೆ.
‘‘ ಈ ಅಂಕಿಅಂಶಗಳು ನೂತನ ಸರಕಾರವು ಎದುರಿಸುತ್ತಿರುವ ವಲಸೆ ಕುರಿತ ಸವಾಲಿನ ತೀವ್ರತೆಯನ್ನು ಸಂಕೇತಿಸುತ್ತದೆ. ಬ್ರಿಟನ್‌ನ ಲಾಭ ಕ್ಕಾಗಿಯಾದರೂ ಈಗ ಈ ವಲಸೆ ಪ್ರಮಾಣವನ್ನು ನಿಯಂತ್ರಿಸುವುದು ನಮ್ಮ ಕರ್ತವ್ಯವಾಗಿದೆ ಮತ್ತು ಹಾಗೆ ಮಾಡಲು ನಾನು ನಿರ್ಧರಿಸಿದ್ದೇನೆ’’ ಎಂದು ವಲಸೆಗೆ ಸಂಬಂಧಿಸಿದ ವಿವರವನ್ನು ಬಿಡುಗಡೆಗೊಳಿಸಿದ ಡ್ಯಾಮಿಯನ್ ಗ್ರೀನ್ ಹೇಳಿದ್ದಾರೆ.
2009ರಲ್ಲಿ ಬ್ರಿಟನ್‌ನ ನಾಗರಿಕತ್ವ ಪಡೆದ 10 ರಾಷ್ಟ್ರೀಯರಲ್ಲಿ 26,535ಮಂದಿ ಭಾರತೀಯ ರಾಗಿದ್ದಾರೆ. ಇದು ಬ್ರಿಟಿಶ್ ನಾಗರಿಕತ್ವ ಪಡೆದ ವಿದೇಶೀಯರ ಶೇಕಡ 13 ಆಗಿದೆ ಎಂದವರು ವಿವರಿಸಿದ್ದಾರೆ. ಪಟ್ಟಿಯಲ್ಲಿ ಪಾಕಿಸ್ತಾನದ ನಾಗರಿಕರು ಎರಡನೆಯ ಸ್ಥಾನವನ್ನು ಪಡೆದಿದ್ದು, ಅವರ ಸಂಖ್ಯೆ 20,945 ಆಗಿದೆ. ಬಾಂಗ್ಲಾದೇಶವು 12,040 ಮಂದಿ ಬ್ರಿಟನ್‌ನ ನಾಗರಿಕತ್ವ ಪಡೆದಿದ್ದು ಮೂರನೆಯ ಸ್ಥಾನದಲ್ಲಿದೆ.
Subscribe to:
Post Comments (Atom)
No comments:
Post a Comment