VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 17, 2010

ಭಯೋತ್ಪಾದಕನೆಂದು ಶಂಕಿಸಲ್ಪಟ್ಟು ಎಮಿರೇಟ್ಸ್ ವಿಮಾನದಿಂದ ಬಂಧಿಸಲ್ಪಟ್ಟಿದ್ದ ಮೌಲಾನಾ ನೂರುಲ್ ಹುದಾ ಬಿಡುಗಡೆ


ನವದೆಹಲಿ: ಭಯೋತ್ಪಾದಕನೆಂದು ಶಂಕಿಸಲ್ಪಟ್ಟು ಎಮಿರೇಟ್ಸ್ EK 515 ಸಂಖ್ಯೆಯ ವಿಮಾನದಿಂದ ಬಂಧಿಸಲ್ಪಟ್ಟಿದ್ದ ಉತ್ತರ ಪ್ರದೇಶದ ಮುಸ್ಲಿಂ ಧಾರ್ಮಿಕ ಗುರು ಮೌಲಾನಾ ನೂರುಲ್ ಹುದಾ ಬಿಡುಗಡೆ ಹೊಂದಿದ್ದು ವಿಚಾರಣೆಯ ನಂತರ ಅವರ ಮೇಲಿನ ಆರೋಪಗಳನ್ನು ಸಹ ಮುಕ್ತಗೊಳಿಸಲಾಗಿದೆ.

ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಮದ್ರಸ ನಡೆಸುತ್ತಿರುವ ನಡೆಸುತ್ತಿರುವ ಮೌಲಾನಾ ನೂರುಲ್ ಹುದಾ ಮೇ ೧೨ ರಂದು ಎಮಿರೇಟ್ಸ್ ವಿಮಾನದಲ್ಲಿ ಕುಳಿತು ವಿಮಾನ ಹೊರಡುವ ಸಂಧರ್ಭದಲ್ಲಿ ತನ್ನ ಪತ್ನಿಗೆ ಕರೆ ಮಾಡಿ ಪ್ಲೇನ್ ಉಡ್ನೆವಾಲಾ ಹೈ. ಔರ್ ಸಾಥ್ ಮೇ ಮೈ ಭಿ ಉದ್ನೆವಾಲಾ ಹೂನ್ ಎಂದು ಉರ್ದುವಿನಲ್ಲಿ ಮಾತನಾಡಿದ್ದರು . ಇದನ್ನು ಕೇಳಿಸಿಕೊಂಡ ವಿಮಾನದಲ್ಲಿದ್ದ ಮಹಿಳೆಯೊಬ್ಬರು ತಪ್ಪಾಗಿ ಅರ್ಥೈಸಿ ವಿಮಾನದ ಪೈಲೆಟಿಗೆ ಈ ವ್ಯಕ್ತಿಯ ಬಗ್ಗೆ ಶಂಶಯ ವ್ಯಕ್ತ ಪಡಿಸಿ ದೂರು ನೀಡಿದ ಕಾರಣ ಇವರನ್ನು ವಿಮಾನದಿಂದ ಇಳಿಸಿ ಬಂಧಿಸಲಾಗಿತ್ತು.

ಆನತರ ವಿಚಾರಣೆಗೊಳಪಡಿಸಲಾಗಿ ಇವರ ಬಳಿ ಯಾವುದೇ ಶಂಶಯಾಸ್ಪದ ವಸ್ತುಗಳು ಕಂಡು ಬಂದಿರಲಿಲ್ಲ. ಜಮಿಯತುಲ್ ಉಲಮಾ ಹಿಂದ್ ಅಧ್ಯಕ್ಷ , ರಾಜ್ಯಸಭಾ ಸದಸ್ಯ ಮಹಮೂದ್ ಮದನಿ ಇವರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಕೇಂದ್ರ ಗೃಹ ಸಚಿವರಿಗೂ ಪತ್ರ ಬರೆದಿದ್ದರು. ವಿಮಾನ ಹಾರಾಟಕ್ಕೆ ತಯಾರಾಗುವ ಸಂಧರ್ಭದಲ್ಲಿ ಉರ್ದುವಿನಲ್ಲಿ ಈ ರೀತಿ ಮಾತನಾಡುವುದು ಸಾಮಾನ್ಯ. ಇದನ್ನೇ ತಪ್ಪಾಗಿ ಅರ್ಥೈಸಿ ಒಬ್ಬ ಧಾರ್ಮಿಕ ಗುರುವನ್ನು ಬಂಧಿಸಿದ ಕ್ರಮವು ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು. ಇದೀಗ ಇವರು ನಿರಪರಾಧಿ ಎಂದು ಸಾಬೀತಾಗಿದೆ.

No comments: