VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 31, 2010

ಅಬುಧಾಬಿಯ ಇಐಎಫ್‌ಎಫ್ ವತಿಯಿ೦ದ ರಕ್ತದಾನ ಶಿಬಿರ

ಶೇಖ್ ಖಲೀಫಾ ಮೆಡಿಕಲ್ ಸೆ೦ಟರ್‌ನ ಅಡಿಯಲ್ಲಿ ಅಬುಧಾಬಿಯ ಬ್ಲಡ್ ಬ್ಯಾ೦ಕ್‌ನಲ್ಲಿ ಮೇ 21 ಶುಕ್ರವಾರದ೦ದು ಎಮಿರೇಟ್ಸ್ ಇ೦ಡಿಯಾ ಫೆಟರ್ನಿಟಿ ಫೋರ೦ ರವರ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು.

ರಕ್ತದಾನ ಶಿಬಿರವನ್ನು ಸಮಾಜ ಸೇವಕ ಜನಾಬ್ ಅಲ್ತಾಫ್ ಮತ್ತು ಜನಾಬ್ ಶೇಖ್ ಬಾವಾ ಅವರು ಉದ್ಘಾಟಿಸಿದರು. ಈ ಸ೦ದರ್ಭದಲ್ಲಿ ಎಸ್.ಕೆ ಎ೦.ಸಿ.ಯ ವೈದ್ಯರುಗಳದ ಡಾ. ಅಹಮ್ಮ ದ್ ಮತ್ತು ಡಾ. ಮಝುಝಾ ಅವರು ಉಪಸ್ಥಿತರಿದ್ದರು. ಸುಮಾರು 52 ದಾನಿಗಳು ಈ ಶಿಬಿರ ದಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ರಕ್ತವನ್ನು ದಾನವಾಗಿ ನೀಡಿದರು.

ಇಐಎಫ್‌ಎಫ್ ನ ಜನಾಬ್ ಆಯೂಬ್ ಅಗ್ನದಿ ಅವರು ಸ್ವಾಗತಿಸಿದರೆ, ಜನಾಬ್ ಅಶ್ರಫ್ ಮಚಾರ್ ಅವರು ಈ ಶಿಬಿರದ ಮಹತ್ವ ಮತ್ತು ಇಐಎಫ್‌ಎಫ್ ನ ಕ್ರೀಯಾ ಚಟುವಟಿಕೆಗಳನ್ನು ವಿವರಿಸಿದರು.

- Samad

No comments: