VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 31, 2010

ದಿಕ್ರ್ ಹಲ್ಕಾ ಕಾರ್ಯಕ್ರಮ

ಅಬೂಧಾಬಿ: ಮಂಗಳೂರಿನ ಬಜ್ಪೆ ವಿಮಾನ ನಿಲ್ದಾನದಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ರಕ್ತ ಸಾಕ್ಷಿಗಳಾದ ಪ್ರವಾಸೀ ಸ್ನೇಹಿತರಿಗೆ ಅಬೂಧಾಬಿಯ ಖಾಲಿದಿಯಾ ಅಡ್ಕ ಫ್ಲಾಟ್ ನಲ್ಲಿ ದಿಕ್ರ್ ಹಲ್ಕಾ ಹಾಗೂ ಅನುಸ್ಮರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದಾರುಲ್ ಅಶ್ ಅರಿಯ ಸುರಿಬೈಲು, ದಾರುಲ್ ಇರ್ಷಾದ್ ಮಾಣಿ, ಅಲ್ ಮದೀನಾ ಮಂಜನಾಡಿ, ಅಲ್ ಮದೀನತುಲ್ ಮುನವ್ವರ ಸರಳೀಕಟ್ಟೆ, ಅಲ್ ಹುದಾ ತಂಬಿನಮಕ್ಕಿ, ಮರ್ಕಝುಲ್ ಹುದಾ ಕುಂಭ್ರ ಮುಂತಾದ ಸಂಘ ಸಂಸ್ಥೆಗಳು ಜಂಟಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಆದಿಯಲ್ಲಿ ಮೌಲಿದ್ ಪಾರಾಯಣ, 70,000 ತಹ್ ಲೀಲ್ ಹಾಗೂ ಖುರ್ ಆನ್ ಪಾರಾಯಣ ನಡೆಸಿ ಮ್ರತರಿಗೆ ಸಮರ್ಪಿಸಲಾಯಿತು.
ಕರ್ನಾಟಕದ ಸರ್ವ ಸುನ್ನೀ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತನ್ನನ್ನು ತಾನು ತೊಡಗಿಸಿಕೊಡಿದ್ದ ಮರ್ ಹೂಂ ಕೆ. ಎಚ್. ಉಸ್ಮಾನ್ ಕಕ್ಕಿಂಜೆ ರವರು ವಿಮಾನ ಅಪಘಾತದಲ್ಲಿ ಇಹ ತ್ಯಜಿಸಿದ ಆದರ್ಶ ಸುನ್ನೀ ಕಾರ್ಯಕರ್ತರಾಗಿದ್ದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಕೇರಳ ಎಸ್ ವೈ ಎಸ್ ಅದ್ಯಕ್ಷ ಕೆ. ಟಿ. ಫೈಝಿ ಉಸ್ತಾದ್ ರವರು ವಹಿಸಿದ್ದರು. ನಂತರ ಅಬ್ದುಲ್ ಹಮೀದ್ ಸ ಅದಿ ಈಶ್ವರಮಂಗಿಲ ರವರು ಅನುಸ್ಮರಣಾ ಭಾಷಣ ನಿರ್ವಹಿಸಿದರು. ಕೆ ಎಚ್ ಉಸ್ಮಾನ್ ರವರ ಸುನ್ನೀ ಸ್ಪಿರಿಟನ್ನು ಕೊಂಡಾಡಿದ ಅವರು ಕಣ್ಣೀರಿಳಿಸುತ್ತಲೇ ಅವರ ಕ್ರಿಯಾಶೀಲತೆಯನ್ನು ಸಭೆಗೆ ಮನವರಿಕೆ ಮಾಡಿ ಕೊಟ್ಟರು. ನೈಜ ಅಹ್ಲು ಸ್ಸುನ್ನತಿ ವಲ್ ಜಮಾ ಅತಿನ ಆಶಯ ಆದರ್ಶಗಳನ್ನು ಪಾಲಿಸಿಕೊಂಡು ಬದುಕಿದರೆ ಸಿಗುವ ಲಾಭವೇ ಇಂಥಹ ಶುಭ ಕಾರ್ಯ ಕ್ರಮಗಳೆಂದು ಅವರು ನುಡಿದರು. ಇಂದು ಕಕ್ಕಿಂಜೆ ಉಸ್ಮಾನ್ ರವರಿಗೆ ಪ್ರಾರ್ಥಿಸಲು ಹಲವು ಸಂಘ ಸಂಸ್ಥೆಗಳಿವೆ ಕಾರಣ ಅವರು ಸುನ್ನತ್ ಜಮಾ ಅತಿನ ಸಕಲ ಕಾರ್ಯಕ್ರಮಗಳಲ್ಲೂ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು. ಆದುದರಿಂದ ನಾವು ಸದಾ ಸುನ್ನತ್ ಜಮಾ ಅತಿನ ಆಶಯಗಳನ್ನೇ ಜೀವನದಲ್ಲಿ ಅಳವಡಿಸಿ ಜೀವನ ಸಾಗಿಸಿದರೆ ನಮ್ಮ ಪರಲೋಕ ವಿಜಯಕ್ಕೆ ಇಂಥಹ ಶುಭ ಕಾರ್ಯ ಕ್ರಮಗಳು ಹೇತುವಾಗುವುವು ಎಂದು ಅವರು ನುಡಿದರು.

ಬೆಳ್ತಂಗಡಿ ನಾಳ ಸಮೀಪ ಹೈದರಾಕ ಬೆಳ್ತಂಗಡಿಯವರು ತನ್ನ ತಾಯಿಯ ಹೆಸರಲ್ಲಿ ನಿರ್ಮಿಸುತ್ತಿರುವ ಮಸೀದಿಯ ಪಕ್ಕದಲ್ಲೇ ಕೆ. ಎಚ್. ಉಸ್ಮಾನ್ ರವರ ಹೆಸರಲ್ಲಿ ಮದ್ರಸಾ ಸಮುಚ್ಚಯ ನಿರ್ವಹಿಸುವುದಾಗಿ ಉಸ್ಮಾನ್ ರವರ ಆಪ್ತ ಮಿತ್ರರು ಸಭೆಗೆ ತಿಳಿಸಿದರು.

ವೇದಿಕೆಯಲ್ಲಿ ಮಹ್ಮೂದ್ ಸಖಾಫಿ ಬೈರಿಕಟ್ಟೆ, ಹಸೈನಾರ್ ಅಮಾನಿ ಸುಳ್ಯ, ಮುಹಮ್ಮದ್ ರಫೀಖ್ ಜೌಹರಿ ಅಳಿಕೆ, ಇಬ್ರಾಹೀಂ ಅರಬ್ ಮಾರ್ಬಲ್, ಅಬ್ದುಲ್ಲ ಹಾಜಿ ನಲ್ಕ, ಎನ್. ಕೆ. ಖಾದರ್ ಹಾಜಿ ಅಳಿಕೆ, ಹೈದರಾಕ ಬೆಳ್ತಂಗಡಿ, ಪಿ. ಎಮ್. ಎಚ್. ಈಶ್ವರಮಂಗಿಲ, ಮುಹಮ್ಮದ್ ಕುಂಞಿ ಹಾಜಿ ಅಡ್ಕ, ಸರ್ವ ಸಂಘ ಸಂಸ್ಥೆಗಳ ಪಧಾದಿಕಾರಿಗಳೂ, ಮಾಣಿ, ಸುರಿಬೈಲ್, ಮಂಜನಾಡಿ ರಿಸೀವರ್ ಗಳೂ ಹಾಗೂ ಇನ್ನಿತರ ಸುನ್ನೀ ಉಲಮಾ ಉಮರಾ ನೇತಾರರೂ ಪಾಲ್ಗೊಂಡಿದ್ದರು. ನೂರಕ್ಕೂ ಮಿಕ್ಕ ಕನ್ನಡಿಗರು ಆವೇಶಭರಿತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಮಾತ್ರವಲ್ಲದೆ ಕೇರಳದ ಹಲವು ಸುನ್ನೀ ನೇತಾರರೂ, ಕಾರ್ಯಕರ್ತರೂ, ಸ ಅದಿಯಾ, ಕಣ್ಣೂರ್, ಮಲಪ್ಪುರಂ ಎಸ್ ವೈ ಎಸ್ ಕಾರ್ಯಕರ್ತರೂ ಹಾಜರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಮ್ರತರ ಹೆಸರಲ್ಲಿ ತಬರ್ರುಕ್ ವಿತರಿಸಲಾಯಿತು. ಬಿ ಎಮ್ ರಫೀಖ್ ಅಳಿಕೆ ಯವರು ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.

No comments: