VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 20, 2010

ಅಮೆರಿಕದ ಆರ್ಥಿಕತೆ ಮತ್ತೆ ಪ್ರಗತಿಯತ್ತ: ಒಬಾಮ

ವಾಶಿಂಗ್ಟನ್, ಮೇ 19: ಅಮೆರಿಕದ ಆರ್ಥಿಕತೆ ಮತ್ತೆ ಬೆಳವಣಿಗೆ ಹೊಂದುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮಂಗಳವಾರ ತಿಳಿಸಿದ್ದಾರೆ.‘‘ಕೆಲವು ವರ್ಷಗಳ ಹಿಂದೆ ಉಂಟಾದ ಆರ್ಥಿಕ ಹಿಂಜರಿತದ ಆಘಾತದಿಂದ ನಮ್ಮ ನೆರೆಯ ರಾಷ್ಟ್ರಗಳು ಹಾಗೂ ಈ ನಿಟ್ಟಿನಲ್ಲಿ ನೆಲೆ ಕಳೆದುಕೊಂಡಿರುವ ಎಲ್ಲ ಸಮುದಾಯಗಳು ಚೇತರಿಕೆಯನ್ನು ಮನಗಾಣಲು ನಾವು ಸಾಕಷ್ಟು ದೂರ ಕ್ರಮಿಸಬೇಕಾಗಿದೆ’’

ಎಂದು ಒಬಾಮ ಒಹಿಯೊದಲ್ಲಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ. ‘‘ಕಳೆದ ತಿಂಗಳ ಅವಧಿಯಲ್ಲಿ ನಾವು ಇತ್ತೀಚಿನ ನಾಲ್ಕು ವರ್ಷಗಳಲ್ಲೇ ಅಧಿಕ ಉದ್ಯೋಗಗಳನ್ನು ಹೊಂದಿದ್ದೇವೆ. ಉದ್ಯೋಗಗಳನ್ನು ಸೇರ್ಪಡೆಗೊಳಿಸಿರುವುದು ಇದು ಸತತ ನಾಲ್ಕನೆಯ ತಿಂಗಳಾಗಿದೆ. ಅವುಗಳಲ್ಲಿ ಬಹುತೇಕ ಉದ್ಯೋಗಗಳು ಖಾಸಗಿ ರಂಗಕ್ಕೆ ಸೇರಿವೆ’’ ಎಂದು ಒಬಾಮ ವಿವರಿಸಿದ್ದಾರೆ.

No comments: