ಹೊಸದಿಲ್ಲಿ, ಮೇ 19: ಭಾರತೀಯ ಸೈಬರ್ ಜಾಲದೊಳಗೆ ನುಸುಳುತ್ತಿರುವ ಚೀನ ಹಾಗೂ ಪಾಕಿಸ್ತಾನಿ ಸೈಬರ್ ವಿರುದ್ದ ಭಾರತವು ರಕ್ಷಣಾ ಕ್ರಮವನ್ನು ಬಿಗಿಗೊಳಿಸುವ ಅಗತ್ಯವಿದೆಯೆಂದು ಭಾರತದ ಅತಿ ಕಿರಿಯ ಹಾಗೂ ಮೊದಲ ಅಧಿಕೃತ ನೈತಿಕ ಹ್ಯಾಕರ್ ಎಂಬ ಹೆಸರುಗಳಿಸಿರುವ ಅಂಕಿತ್ ಫಾಡಿಯಾ ಅಭಿಪ್ರಾಯಿಸಿ ದ್ದಾರೆ.
ಭಾರತೀಯ ಗೂಢಚರ ಸಂಸ್ಥೆ ಹಾಗೂ ಮಿಲಿಟರಿ ಸಂಸ್ಥೆಗಳು ಸೈಬರ್ ಅಪರಾಧದ ವಿರುದ್ಧ ಪ್ರತಿ ದಾಳಿ ನಡೆಸಲು ಭಾರತೀಯ ಹ್ಯಾಕರ್‌ಗಳನ್ನು ನಿಯತವಾಗಿ ಬಳಸಿಕೊಳ್ಳುತ್ತಿದೆ.
ಆದರೆ ಭಾರತದಲ್ಲಿ ಇಂತಹ ಕೆಲಸ ಚೀನ ಹಾಗೂ ಪಾಕಿಸ್ತಾನಗಳಲ್ಲಿ ನಡೆಯುವುದಕ್ಕಿಂತ ಅತಿ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿದೆಯೆಂದು ಫಾಡಿಯಾ ಹೇಳುತ್ತಾರೆ.
‘ಮೊಡಗಳೊಳಗಿನ ನೆರಳು’ ವರದಿಯ ಹಿನ್ನೆಲೆಯಲ್ಲಿ ಅವರ ಈ ಅಭಿಪ್ರಾಯ ಮಹತ್ವ ಪಡೆದಿದೆ. ಚೀನ ಮೂಲದ ಆನ್‌ಲೈನ್ ಕಳ್ಳರ ಕುಳಗಳು ಭಾರತದ ಹಲವು ರಕ್ಷಣಾ ಹಾಗೂ ಭದ್ರತಾ ಸಂಸ್ಥೆಗಳ ವರ್ಗೀಕೃತ ದಾಖಲೆಗಳಿಗೆ ಪ್ರವೇಶ ಪಡೆದಿದೆಯೆಂದು ಕೆನಡ ಹಾಗೂ ಅಮೆರಿಕದ ಸೈಬರ್ ಭದ್ರತಾ ಸಂಶೋಧಕರು ಈ ವರದಿಯಲ್ಲಿ ಪ್ರತಿಪಾದಿಸಿದ್ದಾರೆ.
ಸೈಬರ್ ದಾಳಿಕೋರರ ಜಾಲದ ವಿರುದ್ಧ ಪ್ರತಿ ದಾಳಿ ನಡೆಸುವಲ್ಲಿ ಭಾರತ ಅತ್ಯಂತ ಹಿಂದುಳಿದಿದೆಯೆಂದು ಅಹ್ಮದಾಬಾದ್ ಮೂಲದ ಭಾರತೀಯ ನೈತಿಕ ಹ್ಯಾಕರ್ ಸನ್ನಿ ವೇಲಾ ಎಂಬವರು ಹೇಳಿದ್ದಾರೆ. ಭಾರತೀಯ ಕಂಪ್ಯೂಟರ್ ಜಾಲಗಳು ಆಧುನಿಕ ಮೋಸಗಾರರಿಗೆ ಸುಲಭ ಸಾಧ್ಯವೇ ಎಂಬುದನ್ನು ಆಗಾಗ ಪರೀಕ್ಷಿಸಲು ಸರಕಾರವು ಜಾಲ ಪ್ರವೇಶ ಪರೀಕ್ಷೆ ನಡೆಸುವ ಹ್ಯಾಕರ್‌ಗಳನ್ನು ನೇಮಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.
ವೇಲಾ, ಪಾಕಿಸ್ತಾನಿ ಹಾಗೂ ಚೀನಿ ಹ್ಯಾಕರ್‌ಗಳು ನಡೆಸುವ ಅವಾಂತರದ ಚಿತ್ರಣವನ್ನು ಮುಂದಿಡುತ್ತಾರೆ. ಅವರು ವೆಬ್‌ಸೈಟ್‌ಗಳನ್ನು ಹಾಳು ಮಾಡುತ್ತಾರೆ ಅಥವಾ ಸುಲಭವಾಗಿ ಪ್ರವೇಶಿಸಬಹುದಾದ ವೆಬ್‌ಸಟ್‌ಗಳಿಂದ ಸೂಕ್ಷ್ಮ ಮಾಹಿತಿಗಳನ್ನು ಇಳಿಸಿಕೊಳ್ಳುತ್ತಾರೆ.
ಹಾಗೂ ಆ ಸ್ಥಳದಲ್ಲಿ ತಮ್ಮದೇ ಆದ ಪುಟವನ್ನು ಸ್ತಾಪಿಸುತ್ತಾರೆಂದು ಅವರು ಎಚ್ಚರಿಸಿದ್ದಾರೆ.
ಭಾರತದ ಸೈಬರ್ ಕಾಯ್ದೆಯು ಉತ್ತಮವಾಗಿದ್ದರೂ ಸೈಬರ್ ಅಪರಾಧ ಹಾಗೂ ಸೈಬರ್ ಭಯೋತ್ಪಾದನೆ ಯನ್ನು ಸರಕಾರದ ಜಾಗ್ರತೆ ಹಾಗೂ ಸಿದ್ಧತೆ ಬಹಳ ಕಡಿಮೆಯೆಂದು ಭಾರತೀಯ ಹ್ಯಾಕರ್‌ಗಳು ಅಭಿಪ್ರಾಯಿಸಿದ್ದಾರೆ.
Subscribe to:
Post Comments (Atom)
No comments:
Post a Comment